Teaser release of 'Pepe' A gift to actor Vinay Rajkumar

‘ಪೆಪೆ’ ಚಿತ್ರದ ಟೀಸರ್ ಬಿಡುಗಡೆ ನಟ ವಿನಯ್ ರಾಜ್‍ಕುಮಾರ್ ಗೆ ಉಡುಗೊರೆ - CineNewsKannada.com

‘ಪೆಪೆ’ ಚಿತ್ರದ ಟೀಸರ್ ಬಿಡುಗಡೆ ನಟ ವಿನಯ್ ರಾಜ್‍ಕುಮಾರ್ ಗೆ ಉಡುಗೊರೆ

ದೊಡ್ಮನೆ ಕುಡಿ, ರಾಘವೇಂದ್ರ ರಾಜ್ ಕುಮಾರ್ ಸುಪುತ್ರ ವಿನಯ್ ರಾಜ್ ಕುಮಾರ್ ಬರ್ತ್ ಡೇ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳೊಟ್ಟಿಗೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ತಿರುವ ರಾಯಲ್ ಸ್ಟಾರ್ ಗೆ ಪೆಪೆ ಸಿನಿಮಾ ಬಳಗದ ಕಡೆಯಿಂದ ಸ್ಪೆಷಲ್ ಗಿಫ್ಟ್ ಸಿಕ್ಕಿದೆ. ವಿನಯ್ ಜನ್ಮದಿನದ ವಿಶೇಷವಾಗಿ ಪೆಪೆ ಟೀಸರ್ ರಿಲೀಸ್ ಮಾಡಲಾಗಿದೆ.

ಹಳ್ಳಿ ಬ್ಯಾಕ್ ಡ್ರಾಪ್ ನಲ್ಲಿ ಮೂಡಿಬಂದಿರುವ ಟೀಸರ್ ಝಲಕ್ ನಲ್ಲಿ ವಿನಯ್ ರಾಜ್ ಕುಮಾರ್, ರಗಡ್ ಲುಕ್ ನಲ್ಲಿ ಮಿಂಚಿದ್ದಾರೆ. ಅಂದಹಾಗೇ ಪೆಪೆ ಗ್ಯಾಂಗ್ ಸ್ಟಾರ್ ಸಿನಿಮಾ ಇದಾಗಿದ್ದು, ವಿನಯ್ ರಾಜ್ ಕುಮಾರ್ ಹಿಂದಿನ ಎಲ್ಲಾ ಸಿನಿಮಾಗಳಿಗಿಂತ ಇಲ್ಲಿ ವಿಭಿನ್ನ ಅವತಾರ ತಾಳಿದ್ದಾರೆ.

ಶ್ರೀಲೇಶ್ ಎಸ್ ನಾಯರ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ನಾಯಕಿಯಾಗಿ ಕಾಜಲ್ ಕುಂದರ್ ನಟಿಸಿದ್ದು, ಮಯೂರ್ ಪಟೇಲ್, ಯಶ್ ಶೆಟ್ಟಿ, ಬಾಲ ರಾಜ್ ವಾಡಿ, ಮೆದಿನಿ ಕೆಳಮನಿ, ಅರುಣಾ ಬಾಲರಾಜ್, ನವೀನ್ ಡಿ ಪಡಿಲ್ ಒಳಗೊಂಡ ತಾರಾಬಳಗವಿದೆ. `ಪೆಪೆ’ ಚಿತ್ರಕ್ಕೆ ಅಭಿಷೇಕ್ ಜಿ ಕಾಸರಗೋಡು ಕ್ಯಾಮೆರಾ ವರ್ಕ್, ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನವಿದೆ.

ಡಾ. ರವಿವರ್ಮಾ, ಚೇತನ್ ಡಿಸೋಜಾ, ಡಿಫ್ರೆಂಟ್ ಡ್ಯಾನಿ, ನರಸಿಂಹ ಚಿತ್ರದ ಸಾಹಸ ದೃಶ್ಯಗಳನ್ನು ನಿರ್ದೇಶನ ಮಾಡಿದ್ದಾರೆ. ಬೆಂಗಳೂರು, ಮೈಸೂರು, ಕೊಡಗು, ಸಕಲೇಶಪುರದಲ್ಲಿ `ಪೆಪೆ’ ಸಿನಿಮಾವನ್ನು ಸೆರೆ ಹಿಡಿಯಲಾಗಿದೆ. ಉದಯ್ ಸಿನಿ ವೆಂಚರ್, ದೀಪ ಫಿಲಂಸ್ ಬ್ಯಾನರ್ ನಡಿ ಉದಯ್ ಶಂಕರ್ ಮತ್ತು ಶ್ರೀರಾಮ್ ಬಿ ಎಮ್ ಕೋಲಾರ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಪೂರ್ತಿಯಾಗಿ ಓದಿ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin