The beginning of new 'love' Love song is a new step for the director

ಹೊಸಬರ ‘ಲವ್’ ಆರಂಭ ; ಪ್ರೇಮಗೀತೆ ನಿರ್ದೇಶಕರ ಹೊಸ ಹೆಜ್ಜೆ - CineNewsKannada.com

ಹೊಸಬರ ‘ಲವ್’ ಆರಂಭ ; ಪ್ರೇಮಗೀತೆ ನಿರ್ದೇಶಕರ ಹೊಸ ಹೆಜ್ಜೆ

ಲವ್ ಮಾಕ್ಟೇಲ್ ಸಿನಿಮಾದ ಅಭೂತಪೂರ್ವ ಯಶಸ್ಸಿನ ನಂತರ ಮಿಲನಾ ನಾಗರಾಜ್ ಹಾಗೂ ಅಮೃತಾ ಅಯ್ಯಂಗಾರ್ ಒಟ್ಟಿಗೆ ನಟಿಸಿದ್ದ ಓ ಸಾರಥಿ ಮಹೇಶ್ ಸಿ.ಅಮ್ಮಳ್ಳಿದೊಡ್ಡಿ ಸದ್ದಿಲ್ಲದೆ “ಲವ್” ಎಂಬ ಹೊಸ ಸಿನಿಮಾ ಶುರು ಮಾಡಿದ್ದಾರೆ.

ಈ ಚಿತ್ರದ ಮೊದಲ ಹಾಡು ಅನಾವರಣಗೊಂಡಿದೆ. ಕಣ್ಮಣಿ ಎಂಬ ಮಧುರಪ್ರೇಮ ಗೀತೆ ಇದಾಗಿದ್ದು, ನಿರ್ದೇಶಕ ಮಹೇಶ್ ಪದಪುಂಜ ಪೋ ಣಿಸಿರುವ ಹಾಡಿಗೆ ರೋಸಿತ್ ವಿಜಯನ್ ಧ್ವನಿಯಾಗಿರುವುದರ ಜೊತೆಗೆ ಸಾಯಿ ಕಿರಣ್ ಜೊತೆಯಾಗಿ ಸಂಗೀತ ನಿರ್ದೇಶಿಸಿದ್ದಾರೆ. ಯುವ ಪ್ರತಿಭೆಗಳಾದ ಪ್ರಜಯ್ ಜಯರಾಮ್ ಹಾಗೂ ವೃಷ ಪಾಟೀಲ್ ಕಣ್ಮಣಿ ಸಿಂಗಿಂಗ್ ಮಸ್ತಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಲವ್…ಟೈಟಲ್ ಹೇಳುವಂತೆ ಇದೊಂದು ಪ್ರೇಮಕಥೆಯುಳ್ಳ ಸಿನಿಮಾ. ಈ ಚಿತ್ರದ ಮೂಲಕ ಪ್ರಜಯ್ ಜಯರಾಮ್ ಹಾಗೂ ವೃಷ ಪಾಟೀಲ ನಾಯಕ ಹಾಗೂ ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಪರಿಚಯವಾಗುತ್ತಿದ್ದಾರೆ.

ಕಾಂತಾರ ಸಿನಿಮಾ ಖ್ಯಾತಿಯ ಪ್ರಭಾಕರ್ ಕುಂದರ್ ಬ್ರಹ್ಮಾವರ, ಸತೀಶ್ ಕಾಂತಾರ ಸೇರಿದಂತೆ ಉಮೇಶ್ ಶ್ರೀಕಾಂತ್ ತೇಲಿ, ರಾಧಿಕಾ ಭಟ್, ತಿಲಕ, ಪ್ರಸಾದ್ ಭಟ್, ಹರೀಶ್ ಶೆಟ್ಟಿ, ಸೌರಭ್ ಶಾಸ್ತ್ರೀ ಹಲವರು ಚಿತ್ರದ ಭಾಗವಾಗಿದ್ದಾರೆ. ಶಿ

ಶ್ರೀಕಾಲ ಭೈರವೇಶ್ವರ ಮೂವೀ ಮೇಕರ್ಸ್ ನಡಿ ದಿವಾಕರ್ ಲವ್ ಚಿತ್ರ ನಿರ್ಮಿಸುತ್ತಿದ್ದು, ಸಿದ್ದಾರ್ಥ್ ಹೆಚ್ ಆರ್ ಛಾಯಾಗ್ರಹಣ, ರೋಸಿತ್ ವಿಜಯನ್, ಶ್ರೀ ಸಾಯಿ ಕಿರಣ್ ಸಂಗೀತ, ಲೋಕೇಶ್ ಪುಟ್ಟೇಗೌಡ ಸಂಕಲನ ಸಿನಿಮಾದ ಶ್ರೀಮಂತಿಕೆ ಹೆಚ್ಚಿಸಿದೆ. ನೈಜ ಘಟನೆಯಗಳಿಂದ ಪ್ರೇರಿತವಾದ ಕಥೆಯಾಗಿರುವ ಲವ್ ಸಿನಿಮಾವನ್ನು ಉಡುಪಿ, ಕೋಟ, ಕುಂದಾಪುರ, ಬೈಂದೂರ್, ಬಾಗಲಕೋಟೆ ಮತ್ತು ಬೆಂಗಳಳೂರಿನಲ್ಲಿ ಚಿತ್ರೀಕರಿಸಲಾಗಿದೆ. ಈಗಾಗಲೇ ಶೂಟಿಂಗ್ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೋಡಕ್ಷನ್ಸ್ ಹಂತದಲ್ಲಿದೆ.

ಪೂರ್ತಿಯಾಗಿ ಓದಿ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin