18 ವರ್ಷಗಳ ಬಳಿಕ ಮತ್ತೆ ಚಂದ್ರಮುಖಿರಾಘವ್ ಲಾರೆನ್ಸ್-ಕಂಗನಾ ಜೋಡಿ ಚಿತ್ರ

ರಾಘವ್ ಲಾರೆನ್ಸ್-ಕಂಗನಾ ಜೋಡಿಯ ‘ಚಂದ್ರಮುಖಿ-2’ ಎಂಟ್ರಿಗೆ ಮುಹೂರ್ತ ನಿಗಧಿಯಾಗಿದ್ದು ಗಣೇಶ್ ಚತುರ್ಥಿಗೆ ಪಿ.ವಾಸು ನಿರ್ದೇಶನ 65ನೇ ಸಿನಿಮಾ ಬಿಡುಗಡೆಯಾಗಲಿದೆ.

ಸೌತ್ ಸಿನಿ ದುನಿಯಾದ ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಭತ್ತಳಿಕೆ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಚಂದ್ರಮುಖಿ-2 ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ.

ಖ್ಯಾತ ನಿರ್ದೇಶಕ, ನಟ ಹಾಗೂ ಸ್ಟಾರ್ ಕೊರಿಯೋಗ್ರಾಫರ್ ರಾಘವ್ ಲಾರೆನ್ಸ್ ಹಾಗೂ ಬಾಲಿವುಡ್ ಬ್ಯೂಟಿ ಕಂಗನಾ ನಟನೆಯ ಈ ಚಿತ್ರ ಸೆಪ್ಟಂಬರ್ 19ರ ಗಣೇಶ್ ಚತುರ್ಥಿಗೆ ಸ್ಪೆಷಲ್ ಆಗಿ ವಿಶ್ವಾದ್ಯಂತ ತೆರೆಗಪ್ಪಳಿಸಲಿದೆ. ಖ್ಯಾತ ಹಿರಿಯ ನಿರ್ದೇಶಕ ಪಿ.ವಾಸು ನಿರ್ದೇಶನದ 65ನೇ ಚಿತ್ರ ಚಂದ್ರಮುಖ-2.

2005ರಲ್ಲಿ ಬಿಡುಗಡೆಯಾಗಿದ್ದ ಕ್ಲಾಸಿಕ್ ಸಿನಿಮಾ ಚಂದ್ರಮುಖಿ ಬಾಕ್ಸಾಫೀಸ್ ನಲ್ಲಿ ಹೊಸ ದಾಖಲೆ ಸೃಷ್ಟಿಸಿತ್ತು. ಸೂಪರ್ ಸ್ಟಾರ್ ರಜನಿಕಾಂತ್ ನಾಯಕನಾಗಿ ನಟಿಸಿದ್ದ ಹಿಟ್ ಲೀಸ್ಟ್ ಸೇರಿತ್ತು.

18 ವರ್ಷದ ಬಳಿಕ ಚಂದ್ರಮುಖಿ ಸೀಕ್ವೆಲ್ ಬರ್ತಿದ್ದು, ನಿರೀಕ್ಷೆಯನ್ನು ಹೆಚ್ಚಿಸಿದೆ. ಲೈಕಾ ಸಂಸ್ಥೆಯ ಒಡೆಯ ಸುಭಾಷ್ ಕರಣ್ ಬಹಳ ಅದ್ಧೂರಿಯಾಗಿ ಚಿತ್ರ ನಿರ್ಮಿಸಿದ್ದು, ಆಸ್ಕರ್ ಅವಾರ್ಡ್ ವಿನ್ನರ್ ಎಂ.ಎಂ ಕೀರವಾಣಿ ಸಂಗೀತ ನಿರ್ದೇಶನ, ಆರ್ ಡಿ ರಾಜಶೇಖರ್ ಛಾಯಾಗ್ರಹಣ, ಅಂಥೋನಿ ಸಂಕಲನ ಚಿತ್ರಕ್ಕಿದೆ.

ವಡಿವೇಲು, ಲಕ್ಷ್ಮೀ ಮೆನನ್, ಮಹಿಮಾ ನಂಬಿಯಾರ್, ರಾಧಿಕಾ ಶರತ್ ಕುಮಾರ್, ಸುರೇಶ್ ಮೆನನ್ ತಾರಾಬಳಗದಲ್ಲಿದ್ದಾರೆ. 18 ವರ್ಷದ ಬಳಿಕ ಗಣೇಶ ಹಬ್ಬಕ್ಕೆ ಚಂದ್ರಮುಖಿ-2 ಸೀಕ್ವೆಲ್ ತೆಲುಗು, ತಮಿಳು, ಹಿಂದಿ, ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ಬಿಗ್ ಸ್ಕ್ರೀನ್ ಗೆ ಲಗ್ಗೆ ಇಡಲಿದೆ.

Related Posts

ಕೃತಕಬುದ್ದಿಮತ್ತೆ ದೃಶ್ಯಗಳನ್ನು ಸೃಷ್ಠಿಸಬಲ್ಲದೇ ಹೊರತು ನಿರ್ದೇಶಕನ ಅರ್ಥಮಾಡಿಂಡ ಸಂಗತಿಗಳನಲ್ಲ : ನಿರ್ದೇಶಕ ಗಿರೀಶ್ ಕಾಸರವಳ್ಳಿ

“ಕೃತಕ ಬುದ್ದಿಮತ್ತೆ ತಂತ್ರಜ್ಞಾನದ ಮೂಲಕ ಅದ್ಭುತ ದೃಶ್ಯಗಳನ್ನು ಸೃಷ್ಟಿಸಬಹುದಾದರೂ ಸಿನಿಮಾ ಎನ್ನುವುದು ಕೇವಲ ತಂತ್ರಜ್ಞಾನದಿಂದ ರೂಪುಗೊಳ್ಳುವುದಿಲ್ಲ. ನಿರ್ದೇಶಕ ತನ್ನ ಬದುಕಿನಲ್ಲಿ ಕಂಡ, ಅನುಭವಿಸಿದ ಮತ್ತು ಅರ್ಥಮಾಡಿಕೊಂಡ ಸಂಗತಿಗಳೇ ಸಿನಿಮಾದ ನಿಜವಾದ ಶಕ್ತಿ. ..” ಹೀಗಂತ ಮಾತು ಆರಂಭಿಸಿದರು ಹಿರಿಯ ನಿರ್ದೇಶಕ, ಕನ್ನಡಕ್ಕೆ…

ನಟಿಯಾಗಲು ತಾಯಿಯ ಸಹಕಾರ ದೊಡ್ಡದು : ನಟಿ ಕಾಶಿಮಾ ರಫೀ ಭಾವುಕ

“ಸೌಥ್ ಇಂಡಿಯನ್ ಹಿರೋ “ ಚಿತ್ರದಲ್ಲಿ ಡಬ್ಬಲ್ ಮೀನಿಂಗ್ ಗಡಿ ದಾಟಿ ಬಿಂದಾಸ್ ಆಗಿ ನಟಿಸಿದ ನಟಿ ಕಾಶಿಮಾ ರಫಿ ಚಿತ್ರರಂಗದಲ್ಲಿ ಭರವಸೆ ಮೂಡಿಸಿದರು, ಆ ನಂತರ “ಟೆಂಪರ್” ಚಿತ್ರದಲ್ಲಿ ಇನ್ನಷ್ಟು ಛಾಪು ಮೂಡಿಸಿ ಇದೀಗ “ನೀ ನಂಗೆ ಅಲ್ಲವಾ” ಚಿತ್ರದ…

Leave a Reply

Your email address will not be published. Required fields are marked *


Notice: ob_end_flush(): Failed to send buffer of zlib output compression (0) in /home/alydqcdn/public_html/wp-includes/functions.php on line 5581