The first phase of shooting of the film “Devi Mahatme” has been completed.

“ದೇವಿ ಮಹಾತ್ಮೆ” ಚಿತ್ರದ ಮೊದಲ ಹಂತದ ಚಿತ್ರೀಕರಣ ಪೂರ್ಣ - CineNewsKannada.com

“ದೇವಿ ಮಹಾತ್ಮೆ” ಚಿತ್ರದ ಮೊದಲ ಹಂತದ ಚಿತ್ರೀಕರಣ ಪೂರ್ಣ

ಉಡುಪಿ ಜಿಲ್ಲೆಯ ಕಮಲಶಿಲೆಯ ಬ್ರಹ್ಮಿ ದೇಗುಲದಲ್ಲಿ ಮುಹೂರ್ತ ನೆರವೇರಿಸಿದ್ದ “ದೇವಿ ಮಹಾತ್ಮೆ” ಸಿನಿಮಾ ತಂಡ ಇದೀಗ ಮೊದಲ ಹಂತದ ಚಿತ್ರೀಕರಣ ಮುಕ್ತಾಯಗೊಳಿಸಿದೆ. ಕುಂದಾಪುರ ಸುತ್ತಮುತ್ತ ಸುಂದರ ಜಾಗದಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಶೀಘ್ರದಲ್ಲೇ ಚಿತ್ರತಂಡ ಎರಡನೇ ಹಂತದ ಚಿತ್ರೀಕರಣಕ್ಕೆ ಸಜ್ಜಾಗಿದೆ

ನಿರ್ದೇಶಕ ನಾಗರಾಜ್ ಸೋಮಯಾಜಿ ಹೊಸ ಸಿನಿಮಾ. ಹಿಂದೆ ಫ್ಯಾಮಿಲಿ ಆಡಿಯನ್ಸ್‍ಗಾಗಿ ಮರ್ಯಾದೆ ಪ್ರಶ್ನೆ ಸಿನಿಮಾ ಕಥೆ ಉಣಬಡಿಸಿದ್ದ ಅವರೀಗ ದೇವಿ ಮಹಾತ್ಮೆ ಚಿತ್ರದ ಮೂಲಕ ಕಾಮಿಡಿ ಥ್ರಿಲ್ಲರ್ ಕಥೆ ಹೇಳೋದಿಕ್ಕೆ ಹೊರಟಿದ್ದಾರೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ನಾಗರಾಜ್ ಸೋಮಯಾಜಿ, “ಬಿಸಿಲಲ್ಲಿ ಕೆಲಸ ಮಾಡುವುದು ಸಾಹಸ. ಅದರಲ್ಲಿಯೂ ಕುಂದಾಪುರ ಬಿಸಿಲು ಝಳದಲ್ಲಿ ಇಡೀ ತಂಡ ಉತ್ಸಹದಿಂದ ಕೆಲಸ ಮಾಡಿದೆ. ಕಡಿಮೆ ತಾಂತ್ರಿಕ ವರ್ಗದೊಂದಿಗೆ ನಿರ್ಮಾಪಕರಿಗೆ ಹೊರೆಯಾಗದಂತೆ ಚಿತ್ರೀಕರಣ ನಡೆಸಲಾಗಿದೆ. ಇನ್ನೂ, ನಿರ್ಮಾಪಕ ಗಾಂಧಿರಾಜನ್ ಕನ್ನಡ ಸಿನಿಮಾ ಬಗ್ಗೆ ತುಂಬಾನೇ ಆಸಕ್ತಿ ಇದ್ದು, ಖುಷಿಯಿಂದ ಶೂಟಿಂಗ್ ಸೆಟ್ ಗೆ ವಿಸಿಟ್ ಹಾಕಿದ್ದರು” ಎಂದರು.

ದೇವಿ ಮಹಾತ್ಮೆ ಕಾಮಿಡಿ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. ನಾಗರಾಜ ಸೋಮಯಾಜಿ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಬರವಣಿಗೆಯಲ್ಲಿ ಅರವಿಂದ್ ಕುಪ್ಳೀಕರ್, ಭಾಸ್ಕರ್ ಬಂಗೇರ ಹಾಗೂ ಗುರು ಆರ್ಯ ಹಾಗೂ ವಾದಿರಾಜ ಶೆಟ್ಟಿ ಜೊತೆಯಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ

ವಿದ್ಯಾ ಗಾಂಧಿರಾಜನ್ ಸಿನಿಮಾಗೆ ಬಂಡವಾಳ ಹೂಡಲಿದ್ದಾರೆ. ಗಾಂಧಿರಾಜನ್ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ಎಸ್ ಕೆ ರಾವ್ ಛಾಯಾಗ್ರಹಣ ಹಾಗೂ ಲಿಕಿತ್ ಪ್ರಸಾದ್ ಕೆ ಶೆಟ್ಟಿ ಸಂಗೀತ ನಿರ್ದೇಶನ ದೇವಿ ಮಹಾತ್ಮೆಗೆ ಇರಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin