The long -awaited "KD" is expected for the screen for Yugadi: First Song for December 24

ಬಹುನಿರೀಕ್ಷಿತ “ಕೆಡಿ” ಚಿತ್ರ ಯುಗಾದಿಗೆ ತೆರೆಗೆ ನಿರೀಕ್ಷೆ: ಡಿಸೆಂಬರ್ 24ಕ್ಕೆ ಮೊದಲ ಹಾಡು ಬಿಡುಗಡೆ - CineNewsKannada.com

ಬಹುನಿರೀಕ್ಷಿತ “ಕೆಡಿ” ಚಿತ್ರ ಯುಗಾದಿಗೆ ತೆರೆಗೆ ನಿರೀಕ್ಷೆ: ಡಿಸೆಂಬರ್ 24ಕ್ಕೆ ಮೊದಲ ಹಾಡು ಬಿಡುಗಡೆ

ಜೋಗಿ ಪ್ರೇಮ್ ನಿರ್ದೇಶನದ, ಆಕ್ಷನ್‍ಪ್ರಿನ್ಸ್ ದ್ರುವ ಸರ್ಜಾ ಎಂಭತ್ತರ ದಶಕದ ಯುವಕ ಕಾಳಿದಾಸನಾಗಿ ಕಾಣಿಸಿಕೊಂಡಿರುವ ಪ್ಯಾನ್ ಇಂಡಿಯಾ ಚಿತ್ರ ‘ಕೆಡಿ’ ಈಗಾಗಲೇ ಮಾತಿನ ಭಾಗದ ಚಿತ್ರೀಕರಣ ಮುಗಿಸಿಕೊಂಡು 2 ಹಾಡುಗಳ ಶೂಟಿಂಗ್ ಮಾತ್ರವೇ ಬಾಕಿ ಉಳಿಸಿಕೊಂಡಿದೆ. ಬಾಕಿ ಚಿತ್ರೀಕರಣ ಪೂರ್ಣಗೊಳಿಸಿ ಯುಗಾದಿ ಹಬ್ಬಕ್ಕೆ ಚಿತ್ರವನ್ನು ತೆರೆಗೆ ತರುವ ಉದ್ದೇಶವಿದೆ

ನಿರ್ದೇಶಕ ಪ್ರೇಮ್ ಮಾತನಾಡಿ ಕಳೆದ ವಾರದಿಂದ ಡಬ್ಬಿಂಗ್ ಶುರುವಾಗಿದೆ ಎಂದು ಮಾತು ಆರಂಭಿಸಿದ ಪ್ರೇಮ್ , 2 ಹಾಡುಗಳ ಶೂಟಿಂಗ್ ಮಾತ್ರ ಬಾಕಿಯಿದೆ. ಅದರಲ್ಲಿ ಒಂದು ಹಾಡನ್ನು ಸೆಟ್ ಹಾಕಿ ಶೂಟ್ ಮಾಡುತ್ತಿದ್ದೇವೆ. ಇನ್ನೊಂದು ಹಾಡಿಗೆ ಫಾರಿನ್ ಹೋಗುವ ಪ್ಲಾನಿದೆ. ಇನ್ನು ಡಿಸೆಂಬರ್ 24ರಂದು ನಮ್ಮ ಚಿತ್ರದ ಶಿವ ಶಿವ ಎಂಬ ಮೊದಲ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗುತ್ತಿದೆ,ಈ ಹಾಡಿಗೆ ಆನಂದ್ ಮಾಸ್ಟರ್ ಕೊರಿಯಾಗ್ರಫಿ ಮಾಡಿದ್ದು ನಾನು ಹಾಗೂ ಕೈಲಾಶ್ ಖೇರ್ ದನಿಯಾಗಿದ್ದಾರೆ ಎಂದರು

ಉಳಿದಂತೆ ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಅಲ್ಲಿನ ಗಾಯಕರೇ ಹಾಡಿದ್ದಾರೆ. ಚಿತ್ರದಲ್ಲಿ ಆರು ಹಾಡುಗಳಿದ್ದು ‘ಕೆಡಿ’ ಇಂಡಿಯಾದಲ್ಲೇ ದೊಡ್ಡ ಆಲ್ಬಂ ಆಗಿ ಹೊರಹೊಮ್ಮಲಿದೆ. ಜತೆಗೆ ಒಂದು ಜನಪದ ಶೈಲಿಯ ಹಾಡು ಚಿತ್ರದಲ್ಲಿದೆ. ಫಸ್ಟ ಇಲ್ಲಿ ಮೊದಲ ಹಾಡನ್ನು ರಿಲೀಸ್ ಮಾಡಿ ನಂತರ ಮತ್ತೊಂದು ಸಾಂಗನ್ನು ಮುಂಬೈನಲ್ಲಿ ರಿಲೀಸ್ ಮಾಡೋ ಪ್ಲಾನಿದೆ. ಒಟ್ಟು 150 ದಿನಗಳ ಶೂಟಿಂಗ್ ನಡೆದಿದ್ದು ಎರಡು ಸಾಂಗ್ ಬಾಕಿಯಿದೆ ಎಂದರು

ಸಿನಿಮಾದಲ್ಲಿ ಬ್ಲಡ್ ಶೇಡ್ ಇದ್ದರೂ ಕಥೆಗೆ ಎಷ್ಟು ಬೇಕೋ ಅಷ್ಟು ಮಾತ್ರವೇ ಇದೆ. ಸಿನಿಮಾ ನೋಡಿದ ಮೇಲೆ ನಮಗೂ ಒಬ್ಬ ಅಣ್ಣ, ತಮ್ಮ,ಮಗ ಈಥರ ಇರಬೇಕಿತ್ತು ಅನ್ಸುತ್ತೆ. ಮುಖ್ಯವಾಗಿ ದ್ರುವ ಅವರ ಡೆಡಿಕೇಶನ್ ಈ ಚಿತ್ರಕ್ಕೆ ತುಂಬಾ ಇದೆ. 18 ಕೆಜಿ.ತೂಕವನ್ನು 21 ದಿನದಲ್ಲಿ ಕಡಿಮೆ ಮಾಡಿಕೊಂಡಿದ್ದಾರೆ. ಅಲ್ಲದೆ ಎಐ ಟೆಕ್ನಾಲಜಿ ಮೂಲಕ ದ್ರುವ ಅವರ ಧ್ವನಿಯೇ ಎಲ್ಲಾ ಭಾಷೆಗಳಲ್ಲೂ ಇರುವಂತೆ ಮಾಡುವ ಪ್ರಯತ್ನ ನಡೀತಿದೆ ಎಂದು ಹೇಳಿದರು.

ನಾಯಕ ಧ್ರುವ ಮಾತನಾಡಿ ಇದೇ 24ರಂದು ನಮ್ಮ ಚಿತ್ರದ ಮೊದಲ ಹಾಡು ಬಿಡುಗಡೆಯಾಗುತ್ತಿದೆ. ಅಭಿಮಾನಿಗಳಿಗೆ ರಂಜಿಸಲು ನಾನು ಪಾತ್ರದಲ್ಲಿ ಎಷ್ಟೇ ರಿಸ್ಕ್ ಇದ್ದರೂ ಎದುರಿಸುತ್ತೇನೆ. ಎಂದು ಹೇಳಿದರು,

ನಿರ್ಮಾಪಕ ಸುಪ್ರೀತ್ ಮಾತನಾಡಿ 24ರಂದು ನಮ್ಮ ಚಿತ್ರದ ಮೊದಲ ಹಾಡು ಶಿವ ಶಿನ ರಿಲೀಸಾಗುತ್ತಿದೆ, ಅದರಲ್ಲಿ ಎಲ್ಲರೂ ಎಷ್ಟು ಕಷ್ಟಪಟ್ಟಿದ್ದಾರೆ ಅಂತ ಹಾಡು ನೋಡಿದ ಮೇಲೆ ಗೊತ್ತಾಗುತ್ತದೆ.ಬ್ಯುಸಿನೆಸ್ ಬಗ್ಗೆ ಇನ್ನೂ ಎಲ್ಲೂ ಕಮಿಟ್ ಆಗಿಲ್ಲ. ಸದ್ಯ ಸಿನಿಮಾ ಮೇಲೆ ಮಾತ್ರ ಕಾನ್ಸಂಟ್ರೇಷನ್ ಮಾಡಿದ್ದೇವೆ. ಆಡಿಯೋ ಮಾತ್ರ ದೊಡ್ಡ ಮೊತ್ತಕ್ಕೆ ಹೋಗಿದೆ. ನಿಮಗೆ ಅಗ್ರಿಮೆಂಟ್ ಸಹ ತೋರಿಸುತ್ತೇನೆ. 20 ಎಕರೆ ಪ್ರದೇಶದಲ್ಲಿ ಸೆಟ್ ಹಾಕಿ ಬಹುತೇಕ ಶೂಟಿಂಗ್ ನಡೆಸಿದ್ದೇವೆ. ಸದ್ಯದಲ್ಲೇ ನಾವು ಸಹ ರಿಲೀಸ್ ಡೇಟನ್ನು ಅನೌನ್ಸ್ ಮಾಡುತ್ತೇವೆ ಎಂದು ಹೇಳಿದರು.

ಪ್ಯಾನ್ ಇಂಡಿಯಾ ಕೆಡಿ ಚಿತ್ರದಲ್ಲಿ ಸಂಜಯ್‍ದತ್ ಧಕ್ ದೇವನಾಗಿ ಮಿಂಚಿದ್ದಾರೆ. ಅಲ್ಲದೆ ಶಿಲ್ಪಾ ಶೆಟ್ಟಿ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ.

ಅಂದಹಾಗೆ, 1970-75ರ ಸಮಯದಲ್ಲಿ ನಡೆದ ನೈಜಘಟನೆಯನ್ನು ಆಧರಿತ ಮಾಡಿದ ಗ್ಯಾಂಗ್‍ಸ್ಟರ್ ಕಥೆ ಈ ಚಿತ್ರಲ್ಲಿದೆ, ಶೂಟಿಂಗ್‍ಗಾಗಿಯೇ 20 ಎಕರೆಯಷ್ಟು ವಿಶಾಲವಾದ ಜಾಗದಲ್ಲಿ ಬಹು ಕೋಟಿ ವೆಚ್ಚದಲ್ಲಿ ಅದ್ದೂರಿ ಸೆಟ್‍ನ್ನು ಹಾಕಿ ಚಿತ್ರೀಕರಿಸಲಾಗಿದೆ.

ಚಿತ್ರದ. ಆರು ಕಲರ್ ಫುಲ್ ಹಾಡುಗಳಿಗೆ ಆರು ಜನ ಕೊರಿಯಾಗ್ರಾಫರ್‍ಗಳು ಕೆಲಸ ಮಾಡುತ್ತಿದ್ದಾರೆ. ಸಂಗೀತ ಸಂಯೋಜಕ ಅರ್ಜುನ್ ಜನ್ಯ ಅವರು ದಿ ಬೆಸ್ಟ್ ಎನ್ನುವ 200 ಜನ ಮ್ಯುಸಿಶಿಯನಗಳನ್ನು ಕಲೆಹಾಕಿ ಈ ಚಿತ್ರದ ಮ್ಯೂಸಿಕ್ ಕಂಪೆÇೀಜ್ ಮಾಡಿದ್ದಾರೆ.

ಕೆಡಿ ಚಿತ್ರಕ್ಕೆ ವಿಕ್ರಾಂತ್ ರೋಣ ಖ್ಯಾತಿಯ ವಿಲಿಯಂ ಡೇವಿಡ್ ಅವರು ಕ್ಯಾಮೆರಾ ವರ್ಕ್ ನಿಭಾಯಿಸಿದ್ದಾರೆ. ಕೊಡಗಿನ ಬೆಡಗಿ ರೀಷ್ಮಾ ನಾಣಯ್ಯ ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸಂಜಯ್ ದತ್ ಅಲ್ಲದೆ ಶಿಲ್ಪಾ ಶೆಟ್ಟಿ, ನೋರಾ ಫತೇಹಿ ಸೇರಿದಂತೆ ಬಾಲಿವುಡ್‍ನ ಅನೇಕ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.

ಜೊತೆಗೆ ಕ್ರೇಜಿಸ್ಟಾರ್ ರವಿಚಂದ್ರನ್, ನಟ ರಮೇಶ್ ಅರವಿಂದ್ ಹೀಗೆ ಹೆಸರಾಂತ ಕಲಾವಿದರ ದಂಡೇ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಕನ್ನಡ, ತೆಲುಗು ತಮಿಳು ಹಾಗೂ ಮಲಯಾಳಂ ಸೇರಿದಂತೆ ಬಹು ಭಾಗಳಲ್ಲಿ ಮೂಡಿ ಬರಲಿರುವ ಈ ಚಿತ್ರ ಮುಂದಿನ ವರ್ಷ ಯುಗಾದಿ ಹಬ್ಬದ ಸಮಯದಲ್ಲಿ ತೆರೆಕಾಣಲಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin