The release of the poster of the movie "#Paruparvati" has increased curiosity

” #ಪಾರುಪಾರ್ವತಿ” ಚಿತ್ರದ ” ಪೋಸ್ಟರ್ ಬಿಡುಗಡೆ “ ಕುತೂಹಲ ಹೆಚ್ಚಳ - CineNewsKannada.com

” #ಪಾರುಪಾರ್ವತಿ” ಚಿತ್ರದ ” ಪೋಸ್ಟರ್ ಬಿಡುಗಡೆ “ ಕುತೂಹಲ ಹೆಚ್ಚಳ

ನಟಿ ಹಾಗು “ಬಿಗ್ ಬಾಸ್” ಖ್ಯಾತಿಯ ದೀಪಿಕಾ ದಾಸ್ ಹಾಗೂ ಪೂನಂ ಸರ್ ನಾಯಕ್ ಮತ್ತು ಫವಾಜ್ ಅಶ್ರಫ್ ಪ್ರಮುಖ ಪಾತ್ರದಲ್ಲಿ ನಟಿಸಿರುವ “#ಪಾರುಪಾರ್ವತಿ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ಸ್ ವರ್ಕ್ ನಡೆಯುತ್ತಿದೆ.

ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಈ ಪೋಸ್ಟರ್ ಗೆ “ಇನ್ಫಿನಿಟಿ ರೋಡ್” ಎಂಬ ಹೆಸರಿಡಲಾಗಿದೆ. ಟ್ರಾವೆಲ್, ಅಡ್ವೆಂಚರ್ ಡ್ರಾಮ ಕಥಾಹಂದರ ಹೊಂದಿರುವ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಪ್ರಕೃತಿಯ ಮಡಿಲಲ್ಲೇ ಬಿಡುಗಡೆ ಮಾಡಿರುವುದು ವಿಶೇಷ.

ಥಾರ್ ಬೆಂಗಳೂರು ಸಂಸ್ಥೆಯ ಸಹಯೋಗದೊಂದಿಗೆ ಇತ್ತೀಚಿಗೆ ಪೋಸ್ಟರ್ ಬಿಡುಗಡೆ ಸಮಾರಂಭ ನಡೆಯಿತು. ಪ್ರಕೃತಿ ಸಂರಕ್ಷಣೆಯ ಸಂದೇಶ ನೀಡಲು ಗಿಡ ನೆಡುವುದರ ಮೂಲಕ ಸಮಾರಂಭವನ್ನು ಇನ್ನಷ್ಟು ಅರ್ಥಪೂರ್ಣವಾಗಿ ನಡೆಸಿ ಗಿಡ ನೆಡುವುದು ಮಾತ್ರವಲ್ಲ, ಅದರ ಪೋಷಣೆಗೆ ಬೇಕಾದ ಕ್ರಮಗಳ ಬಗ್ಗೆ ಕೂಡ ಚರ್ಚಿಸಲಾಯಿತು.

ಇದೇ ಸಂದರ್ಭದಲ್ಲಿ ಸುಮಾರು ನೂರಕ್ಕೂ ಅಧಿಕ ಜನರಿಗೆ ಮನೆಯಲ್ಲೇ ಬೆಳೆಸುವ ಗಿಡಗಳನ್ನು ನೀಡುವ ಮೂಲಕ ಪೋಸ್ಟರ್, ಬಿಡುಗಡೆ ಸಮಾರಂಭವನ್ನು ಆಯೋಜಿಸಲಾಗಿತ್ತು. MRT ಮ್ಯೂಸಿಕ್ ಯೂಟ್ಯೂಬ್ ಚಾನಲ್ ನಲ್ಲಿ ಫಸ್ಟ್ ಲುಕ್ ಪೋಸ್ಟರ್, ಲಾಂಚ್ ನ ವಿಡಿಯೋ ಬಿಡುಗಡೆಯಾಗಿ ಸಕ್ಕತ್ ವೈರಲ್ ಆಗುತ್ತಿದೆ.

“ಇನ್ಫಿನಿಟಿ ರೋಡ್” ಪೋಸ್ಟರ್, ಎರಡು ಪಾತ್ರಗಳ ಪ್ರಯಾಣ ಹಾಗೂ ಅವರ ಸಾಹಸಗಳನ್ನು ತೋರಿಸುತ್ತದೆ. ಅಂತ್ಯವಿಲ್ಲದ ಅನ್ವೇಷಣೆಯನ್ನು ಪ್ರತಿನಿಧಿಸುತ್ತದೆ. ಫಸ್ಟ್ ಲುಕ್ ಪೋಸ್ಟರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಅಕ್ಟೋಬರ್ 3 ರಂದು ಚಿತ್ರದ ಆಡಿಯೋ ರಿಲೀಸ್ ಆಗಲಿದೆ. ಸದ್ಯದಲ್ಲೇ ಟ್ರೇಲರ್ ಸಹ ಬರಲಿದೆ ಎಂದು ನಿರ್ದೇಶಕ ರೋಹಿತ್ ಕೀರ್ತಿ ತಿಳಿಸಿದ್ದಾರೆ.

EIGHTEEN THIRTY SIX ಪಿಕ್ಚರ್ಸ್ ಲಾಂಛನದಲ್ಲಿ ಪಿ.ಬಿ.ಪ್ರೇಂನಾಥ್ ಅವರು ನಿರ್ಮಿಸಿರುವ, ರೋಹಿತ್ ಕೀರ್ತಿ ನಿರ್ದೇಶನದಲ್ಲಿ ಚಿತ್ರ ಮೂಡಿಬಂದಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin