ಝೈದ್ ಖಾನ್ ಅಭಿನಯದ “ಕಲ್ಟ್” ಚಿತ್ರದ ಎರಡನೇ ಹಾಡು ಬಿಡುಗಡೆ
“ಬನಾರಸ್” ಚಿತ್ರದ ಮೂಲಕ ಎಲ್ಲರ ಗಮನ ಸೆಳಿದಿದ್ದ ನಟ ಝೈದ್ ಖಾನ್ ನಾಯಕರಾಗಿ ನಟಿಸಿರುವ , “ಉಪಾಧ್ಯಕ್ಷ” ಸೇರಿದಂತೆ ಯಶಸ್ವಿ ಚಿತ್ರಗಳ ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನದ ಹಾಗೂ ರಚಿತರಾಮ್ ಮತ್ತು ಮಲೈಕಾ ನಾಯಕಿಯರಾಗಿ ಅಭಿನಯಿಸಿರುವ ಬಹು ನಿರೀಕ್ಷಿತ “ಕಲ್ಟ್” ಚಿತ್ರದ ಎರಡನೇ ಹಾಡು “ಬ್ಲಡಿ ಲವ್” ಕಿತ್ತೂರು ಉತ್ಸವದಲ್ಲಿ ಬಿಡುಗಡೆಯಾಗಿದೆ.

ನಿರ್ದೇಶಕ ಅನಿಲ್ ಕುಮಾರ್ ಬರೆದಿರುವ ಹಾಡನ್ನು ಚಂದನ್ ಶೆಟ್ಟಿ ಹಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾಗಿರುವ ಈಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿರುವ ಈ ಚಿತ್ರ ಜನವರಿ 23 ರಂದು ಬಿಡುಗಡೆಯಾಗುತ್ತಿದೆ..
ನಾಯಕ ಝೈದ್ ಖಾನ್ ಮಾತನಾಡಿ ಚಿತ್ರದ ಮೊದಲ ಹಾಡು “ಅಯ್ಯೋ ಶಿವನೇ”ಗೆ ತಾವೆಲ್ಲಾ ನೀಡಿದ ಪೆÇ್ರೀತ್ಸಾಹಕ್ಕೆ ಧನ್ಯವಾದ. ಎರಡನೇ ಹಾಡು “ಬ್ಲಡಿ ಲವ್” ನಿಮ್ಮೆಲ್ಲರ ಸಮ್ಮುಖದಲ್ಲಿ ಬಿಡುಗಡೆಯಾಗಿದೆ. ಹಾಡಿಗೂ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಲವ್, ಆಕ್ಷನ್, ಸೆಂಟಿಮೆಂಟ್ ಹೀಗೆ ನೋಡುಗರಿಗೆ ಬೇಕಾದ ಅಂಶಗಳು ಚಿತ್ರದಲ್ಲಿವೆ
ಮಲೈಕಾ ವಸುಪಾಲ್ ಮಾತನಾಡಿ ದಾವಣಗೆರೆ ಹುಡುಗಿ. ನಟನೆಯ ಆರಂಭದ ದಿನಗಳಿಂದಲೂ ತಾವೆಲ್ಲಾ ತೋರುತ್ತಿರುವ ಪ್ರೋತ್ಸಾಹಕ್ಕೆ ಚಿರ ಋಣಿ. “ಕಲ್ಟ್” ನಮ್ಮ ಚಿತ್ರದ ಎರಡನೇ ಹಾಡು ಬಿಡುಗಡೆಯಾಗಿದೆ. ಸಹಕಾರವಿರಲಿದೆ ಎಂದರು
ಜೆ.ಎಸ್ ವಾಲಿ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ ಸಾಹಸ ನಿರ್ದೇಶನ ಚಿತ್ರಕ್ಕಿದೆ.

