The song "Madhura Madhura" from the movie "Kadalathirada Bhargava" is eye catching.

ಕಣ್ಮನ ಸೆಳೆಯುತ್ತಿದೆ “ಕಡಲತೀರದ ಭಾರ್ಗವ” ಚಿತ್ರದ “ಮಧುರ ಮಧುರ” ಹಾಡು. - CineNewsKannada.com

ಕಣ್ಮನ ಸೆಳೆಯುತ್ತಿದೆ “ಕಡಲತೀರದ ಭಾರ್ಗವ” ಚಿತ್ರದ “ಮಧುರ ಮಧುರ” ಹಾಡು.
  • ಕಣ್ಮನ ಸೆಳೆಯುತ್ತಿದೆ “ಕಡಲತೀರದ ಭಾರ್ಗವ” ಚಿತ್ರದ “ಮಧುರ ಮಧುರ” ಹಾಡು.ಕನ್ನಡದಲ್ಲೀಗ ಕಂಟೆಂಟ್ ಓರಿಯಂಟೆಡ್ ಚಿತ್ರಗಳೇ ಹೆಚ್ಚಾಗಿ ಜನಪ್ರಿಯಾಗುತ್ತಿದೆ. ಅಂತಹ ಉತ್ತಮ ಕಂಟೆಂಟ್ ಇರುವ ಮತ್ತೊಂದು ಕನ್ನಡ ಚಿತ್ರ “ಕಡಲ ತೀರದ ಭಾರ್ಗವ”.

ವಿಭಿನ್ನ ಕಥೆಯುಳ್ಳ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಬಿಡುಗಡೆಗೆ ಸಿದ್ದವಾಗಿದೆ.ಪಟೇಲ್ ವರುಣ್ ರಾಜು ಹಾಗೂ ಭರತ್ ಗೌಡ ನಿರ್ಮಿಸಿರುವ, ಪನ್ನಗ ಸೋಮಶೇಖರ್ ನಿರ್ದೇಶಿಸಿರುವ ಈ ಚಿತ್ರದ ” ಮಧುರ ಮಧುರ” ಹಾಡು ಇತ್ತೀಚೆಗೆ ARC MUSIC ಮೂಲಕ ಬಿಡುಗಡೆಯಾಗಿದೆ.

ಅನಿಲ್ ಸಿ ಜೆ ಸಂಗೀತ ನೀಡಿರುವ ಈ ಹಾಡನ್ನು ವಾರಿಜಾಶ್ರೀ ಹಾಗೂ ಅನಿಲ್ ಸಿ ಜೆ ಅವರು ಸುಶ್ರಾವ್ಯವಾಗಿ ಹಾಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿರುವ ಈ ಹಾಡು ಜನಪ್ರಿಯವಾಗಿದ್ದು, ಈಗಾಗಲೇ ಐದು ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ.
ಆರ್ಯನ್ ರೋಷನ್ ನೃತ್ಯ ನಿರ್ದೇಶಿಸಿರುವ “ಮಧುರ ಮಧುರ” ಹಾಡಿಗೆ‌ ನಾಯಕ ಭರತ್ ಗೌಡ ಹಾಗೂ ನಾಯಕಿ ಶೃತಿ ಪ್ರಕಾಶ್ ಹೆಜ್ಜೆ ಹಾಕಿದ್ದಾರೆ. ಅನಿಲ್ ಸಿ ಜೆ ಸಂಗೀತಕ್ಕೆ ಹಾಗೂ ಕೀರ್ತನ ಪೂಜಾರಿ ಅವರ ಛಾಯಾಗ್ರಹಣಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸದ್ಯದಲ್ಲೇ ಚಿತ್ರದ ಮತ್ತೊಂದು ಹಾಡು ಬಿಡುಗಡೆಯಾಗಲಿದೆ. ಆನಂತರ ಟ್ರೇಲರ್ ಬರಲಿದ್ದು, ಟ್ರೇಲರ್ ನಲ್ಲೇ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗುವುದೆಂದು ನಿರ್ಮಾಪಕರು ತಿಳಿಸಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin