“ದಿ ವೆಕೆಂಟ್ ಹೌಸ್” ನವಂಬರ್ 17ಕ್ಕೆ ಬಿಡುಗಡೆ : ನಿರ್ದೇಶಕಿಯಾದ ನಟಿ ಎಸ್ತರ್ ನರೋನ್ಹ
ಕನ್ನಡ, ಕೊಂಕಣಿ, ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ ಕಳೆದ 10 ವರ್ಷಗಳಿಂದ ನಟಿಯಾಗಿ ಗಮನ ಸೆಳೆದಿರುವ ಕರಾವಳಿ ಮೂಲದ ಬೆಡಗಿ ನಟಿ ಎಸ್ತರ್ ನರೋನ್ಹ ಇದೀಗ “ ದಿ ವೆಕೆಂಟ್ ಹೌಸ್” ಚಿತ್ರದ ಮೂಲಕ ನಿರ್ದೇಶಕಿಯಾಗಿ ಬಡ್ತಿ ಪಡೆದಿದ್ದಾರೆ.
ಕೊರೊನಾ ಸಮಯದಲ್ಲಿ ನಿರ್ದೇಶನ ಮಾಡಿದ ” ದಿ ವೆಕೆಂಟ್ ಹೌಸ್” ಎಲ್ಲ ಅಂದುಕೊಂಡಂತೆ ಆಗಿದ್ದರೆ ಈ ವಾರ ಬಿಡುಗಡೆಯಾಗಬೇಕಾಗಿತ್ತು. ಸದ್ಯ ಒಂದು ವಾರ ಮುಂದೂಡಿಕೆಯಾಗಿದೆ. ಹೀಗಾಗಿ ನವಂಬರ್ 17 ರಂದು ಚಿತ್ರ ತೆರೆಗೆ ಬರಲಿದೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಮಹಿಳಾ ನಿರ್ದೇಶಕಿ ಸಿಕ್ಕಂತಾಗಲಿದೆ.
ಕನ್ನಡ ಮತ್ತು ಕೊಂಕಣಿ ಭಾಷೆಯಲ್ಲಿ ಚಿತ್ರ ಸಿದ್ದಗೊಂಡಿದ್ದು ಸದ್ಯ ಕನ್ನಡದಲ್ಲಿ ಬಿಡುಗಡೆಯಾಗಲಿದೆ. ಆ ನಂತರ ಕೊಂಕಣಿ ಸೇರಿದಂತೆ ತೆಲುಗು ಹಾಗು ಇನ್ನಿತರೆ ಭಾಷೆಯಲ್ಲಿ ಚಿತ್ರ ತೆರೆಗೆ ತರುವ ಉದ್ದೇಶವನ್ನು ನಟಿ, ನಿರ್ಮಾಪಕಿ ಎಸ್ತರ್ ನರೊನ್ಹ ಮತ್ತು ಅವರ ತಂಡದ ಉದ್ದೇಶ ಚಿತ್ರಕ್ಕೆ ಜಾನೆಟ್ ಜೆಸಿಂತಾ ನರೋನ್ಹ ಚಿತ್ರಕ್ಕೆ ಬಂಡವಾಳ ಹಾಕುವ ಮೂಲಕ ಮಗಳ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ.
ಈ ವೇಳೆ ಮಾತಿಗಳಿದ ನಟಿ, ನಿರ್ದೇಶಕಿ ಎಸ್ತರ್ ನರೊನ್ಹ ಮಾತನಾಡಿ, ಚಿತ್ರಮಂದಿರದ ಸಮಸ್ಯೆಯ ಹಿನ್ನೆಲೆಯಲ್ಲಿ ಒಂದು ವಾರ ಮುಂದೂಡಲಾಯಿತು. ಕೋವಿಡ್ ಸಮಯದಲ್ಲಿ ಮಾಡಿದ ಚಿತ್ರ ,ಥ್ರಿಲ್ಲರ್ ಕಥಾ ಹಂದರ ಹೊಂದಿದೆ. ಮೊದಲು ಕನ್ನಡದಲ್ಲಿ ಬಿಡುಗಡೆ ಮಾಡಿ ಆ ನಂತರ ತೆಲುಗು ,ಕೊಂಕಣಿ ಭಾಷೆಯಲ್ಲಿ ಬಿಡುಗಡೆ ಮಾಡಲಾಗುವುದು. ಹತಾಶೆ, ಭಾವನೆ, ಸೇರಿದಂತೆ ಮತ್ತಿತರ ವಿಷಯ ವಿಷಯವನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ ಎಂದರು.
ನಿರ್ದೇಶಕಿಯಾಗಿ ನನ್ನ ವಿಷನ್ ಅನ್ನು ಅಂದುಕೊಂಡಿದ್ದನ್ನು ತೆರೆಗೆ ತರಲು ಸಹಕಾರಿಯಾಗಿದೆ.. ಗಾಯಕಿ ಪರಿಚಯವಾಗಿದ್ದು ಆ ನಂತರ ನಾಯಕಿಯಾಗಿದ್ದು ಹತ್ತು ವರ್ಷ ನಾಯಕಿಯಾಗಿ ಕಾಣಿಸಿಕೊಂಡಿದ್ದೇನೆ.ಇದೇ ಮೊದಲ ಬಾರಿಗೆ ನಿರ್ದೇಶಕಿಯಾಗಿದ್ದು ಚಿತ್ರ ಹೊಸತನದ ಫೀಲ್ ಕೊಡಲಿದೆ ಎಂದು ಹೇಳಿದರು
ನಿರ್ಮಾಪಕಿ ಜಾನೆಟ್ ನರೊನ್ಹ, ನಿರ್ದೇಶನ ಮಾಡುತ್ತೇನೆ ಎಂದಾಗ ಖುಷಿ ಆಯ್ತು ಚಿಕ್ಕಂದಿನಿಂದ ಸಾಧನೆ ಮಾಡುತ್ತಾ ಬಂದವಳು, ಪ್ರತಿಯೊಂದು ವಿಷಯದಲ್ಲಿ ಮುಂಚೂಣಿಯಲ್ಲಿದ್ದರು. ಹೀಗಾಗಿ ಮಗಳಿಗೆ ಪೆÇ್ರೀತ್ಸಾಹ ನೀಡಿದೆ. ಇದು ಮೂರನೇ ಚಿತ್ರ, ಈ ಹಿಂದೆ ಎರಡು ಕೊಂಕಣಿ ಚಿತ್ರ ಮಾಡಿದ್ದೆ. ಇದು ಮೂರನೇ ಚಿತ್ರ. ಕನ್ನಡದಲ್ಲಿ ಮಾಡಿದ್ದೇನೆ. ಲಾಕ್ ಡೌನ್ ನಲ್ಲಿ ಮಾಡಿದ ಕಥೆ , ಎಲ್ಲರಿಗೂ ಇಷ್ಟವಾಗಲಿದೆ ಎಂದು ಮಾಹಿತಿ ಹಂಚಿಕೊಂಡರು.
ಕಲಾವಿದ ಸಂದೀಪ್ ಮಲಾನಿ ಮಾತನಾಡಿ ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡು ವಿಭಿನ್ನ ಪಾತ್ರ ಸಿಕ್ಕಿದೆ. ನನ್ನ ಕೋರಿಕೆಯನ್ನು ಮನ್ನಿಸಿ ಚಿತ್ರಕ್ಕೆ ಹರಸಲು ಬಂದ ಬಾಲಿವುಡ್ ಖ್ಯಾತ ಗಾಯಕ ಉದಿತ್ ನಾರಾಯಣ್ ಅವರ ಪತ್ನಿ ಉಷಾ ನಾರಾಯಣ್ ಅವರನ್ನು ಅಭಿನಂಧಿಸುವುದಾಗಿ ತಿಳಿಸಿದರು.
ಇದೇ ವೇಳೆ ಉಷಾ ನಾರಾಯಣ್ ಅವರು ಮುಂಗಾರು ಮಳೆಯ ಕುಣಿದು ಕುಣಿದು ಬಾರೆ ಹಾಡು ಹಾಡುವ ಮೂಲಕ ದಿ ವೆಕೆಂಟ್ ಹೌಸ್ ಚಿತ್ರಕ್ಕೆ ವಿಭಿನ್ನವಾಗಿ ಹಾರೈಸಿದರು