ಖಳನಟ ಸೂರ್ಯ ಪ್ರವೀಣ್ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಳ
ಕನ್ನಡ ಚಿತ್ರರಂಗ ಗಡಿಯಾಚೆ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡು ಮೂಗು ಮುರುಯುವ ಮಂದಿಯ ಮುಂದೆ ಸೆಟೆದು ನಿಂತು ಕನ್ನಡ ಚಿತ್ರರಂಗಕ್ಕೆ ಜನಮನ್ನಣೆ ತಂದುಕೊಡುತ್ತಿರುವ ಕಾಲಘಟ್ಟದಲ್ಲಿ ಪ್ರತಿಭಾನ್ವಿತ ಕಲಾವಿದರ ಸಂಖ್ಯೆಯೂ ಹೆಚ್ಚುತ್ತಿದೆ. ಆ ಸಾಲಿಗೆ ಮತ್ತೊಬ್ಬ ನಟ ಸೂರ್ಯ ಪ್ರವೀಣ್ ಕೂಡ ಒಬ್ಬರು.
ಇತ್ತೀಚೆಗೆ ತೆರೆಗೆ ಬಂದ ನಟ ಗಣೇಶ್ ಅಭಿನಯದ “ಬಾನದಾರಿಯಲಿ” ಚಿತ್ರದಲ್ಲಿ ಖಳನಟನಾಗಿ ಮಿಂಚಿದ ಸೂರ್ಯ ಪ್ರವೀಣ್ಗೆ ಒಂದರ ಹಿಂದೆ ಒಂದು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಈ ಮೂಲಕ ದಿನದಿಂದ ದಿನಕ್ಕೆ ಖಳನಟನಾಗಿ ಬೇಡಿಕೆಯನ್ನೂ ಹೆಚ್ಚಿಸಿಕೊಳ್ಳುತ್ತಿದ್ದಾರೆ.ಅದಕ್ಕೆ ಅವರಿಗೆ ಸಿಗುತ್ತಿರುವ ಚಿತ್ರಗಳೇ ಸಾಕ್ಷಿ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಭರವಸೆಯ ಖಳನಟ ಸೂರ್ಯ ಪ್ರವೀಣ್ ಅವರು, ಬಾನದಾರಿಯಲಿ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಯಿತು. ಈ ಚಿತ್ರದಿಂದ ಎರಡೂ ಮೂರು ಸಿನಿಮಾದಿಂದ ಆಫರ್ ಬಂದಿದೆ… ರಿಲೀಸ್ ಗೆ “ದಿಲ್ ಖುಷ್” ಸಿನಿಮಾ ಇದೆ ಗೋಲ್ಡ್ ಬಾಬು ಅನ್ನೋ ನೆಗೆಟಿವ್ ಶೇಡ್ ಪಾತ್ರ ಖಂಡಿತ ಮತ್ತೊಮ್ಮೆ ಬ್ರೇಕ್ ಸಿಗುವ ನಿರೀಕ್ಷೆಯಲ್ಲಿದ್ದೇನೆ ಎನ್ನುತ್ತಾರೆ ಅವರು.
ಉಗ್ರಾವತಾರ, ರಾಮನ ಅವತಾರ, ಒಂದು ಸರಳ ಪ್ರೇಮಕಥೆ ಚಿತ್ರಗಳಲ್ಲಿ ಕೂಡ ಒಳ್ಳೆಯ ಪಾತ್ರಗಳು ಸಿಕ್ಕಿವೆ. ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು ಬಿಡುಗಡೆಯ ಹಂತದಲ್ಲಿವೆ ಇವು ಬಿಡುಗಡೆಯಾದ ನಂತರ ಕನ್ನಡ ಚಿತ್ರರಂಗದಲ್ಲಿ ಮತ್ತಷ್ಟು ಅವಕಾಶಗಳು ಹುಡುಕೊಂಡು ಬರುತ್ತವೆ ಎನ್ನುವ ವಿಶ್ವಾಸ ಮತ್ತು ನಂಬಿಕೆ ಉದಯೋನ್ಮುಖ ಖಳನಟ ಸೂರ್ಯ ಪ್ರವೀಣ್ ಅವರದು.
ಇನ್ನೂ ಅರ್ಜುನ್ ಜನ್ಯ ನಿರ್ದೇಶನದಲ್ಲಿ ಶಿವಣ್ಣ,ಉಪೇಂದ್ರ ರಾಜ್ ಬಿ ಶೆಟ್ಟಿ ಅಭಿನಯದ “45” ಚಿತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ ಇದರಲ್ಲಿಯೂ ಪ್ರಮುಖ ಪಾತ್ರವಿದೆ. ಇದರ ಜೊತೆ ಜೋಗಿ ಪ್ರೇಮ್ ಸರ್ ನಿರ್ದೇಶನದ , ಧ್ರುವ ಸರ್ಜಾ ಸರ್ ಅಭಿನಯದ “ಕೆಡಿ” ಚಿತ್ರ ದಲ್ಲಿ ಅಭಿನಯಿಸಿರೋದು ಖುಷಿ ಇದೆ ಎಂದಿದ್ಧಾರೆ.
ವಿನೋದ್ ಪ್ರಭಾಕರ್ ಅಭಿನಯದ ನೆಲ್ಸನ್ ನಲ್ಲಿ ಮತ್ತೊಮೆ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಇದಲ್ಲದೆ ಧರಣಿ, ಅಶೋಕ ಬ್ಲೇಡ್, ಆಯುಧ, ಭೈರ್ಯ, ಬರ್ಬರಿಕ, ಹೀಗೆ ಒಂದಷ್ಟು ಸಿನಿಮಾಗಳು ಶೂಟಿಂಗ್ ಹಂತದಲ್ಲಿ ಇದೆ ಎನ್ನುವ ಮಾಹಿತಿ ಹಂಚಿಕೊಂಡಿದ್ದಾರೆ.
ಸಿನಿಮಾ ಜೊತೆ ಜೊತೆಯಲ್ಲಿ ಸೀರಿಯಲ್ ಯೂ ಉತ್ತಮ ಅವಕಾಶ ಹುಡುಕಿಕೊಂಡು ಬರುತ್ತಿವೆ. ಜನಪ್ರಿಯ ಕೊಟ್ಟಿದು ಸದ್ಯಕ್ಕೆ ಎಂ. ಕುಮಾರ್ ನಿರ್ದೇಶನದ, ಪಂಕಜ್ ಎಸ್ ನಾರಾಯಣ್ ನಾಯಕರಾಗಿರುವ “ಊರ್ಮಿಳ” ಸೀರಿಯಲ್ ನಲ್ಲಿ ಮುಖ್ಯ ಖಳನಟನಾಗಿ ಅಭಿನಯಿಸುತ್ತಿದ್ದೇನೆ. ಸಿನಿಮಾ ಮತ್ತು ಸೀರಿಯಲ್ ಜನಪ್ರಿಯತೆ ತಂದುಕೊಡುತ್ತಿವೆ ಎಂದಿದ್ಧಾರೆ.