ಡಿಸೆಂಬರ್ 22 ರಂದು ಬಿಡುಗಡೆಯಾಗಲಿದೆ
ಖ್ಯಾತ ನಟ ವಿಶಾಲ್ ಅಭಿನಯದ “ಲಾಠಿ”.
ಅಭಿನಯದ ಜೊತೆಗೆ ಸಮಾಜಮುಖಿ ಕಾರ್ಯಗಳಿಂದಲೂ ಜನಪ್ರಿಯರಾಗಿರುವ ನಟ ವಿಶಾಲ್ ಅಭಿನಯದ ” ಲಾಠಿ ” ಚಿತ್ರ ಇದೇ ಡಿಸೆಂಬರ್ 22 ರಂದು ಬಿಡುಗಡೆಯಾಗುತ್ತಿದೆ. ಈ ಕುರಿತು ವಿಶಾಲ್ ಬೆಂಗಳೂರಿನಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದರು.
ಸಾಮಾನ್ಯವಾಗಿ ಪೊಲೀಸ್ ಕುರಿತಾದ ಸಿನಿಮಾಗಳಲ್ಲಿ ಗನ್ ಬಳಸಿರುತ್ತಾರೆ. ಏಕೆಂದರೆ ಪೊಲೀಸ್ ಅಧಿಕಾರಿಗಳ ಬಳಿ ಗನ್ ಇರತ್ತದೆ. ಆದರೆ, ಕಾನ್ಸ್‌ಟೇಬಲ್ ಹತ್ತಿರ “ಲಾಠಿ” ಇರುತ್ತದೆ. ಎಷ್ಟೋ ಹಿರಿಯ ಅಧಿಕಾರಿಗಳು ಸಹ ಅನುಭವವಿರುವ ಹಿರಿಯ ಕಾನ್ಸ್‌ಟೇಬಲ್ ಗಳ ಸಲಹೆ ತೆಗೆದುಕೊಳ್ಳುತ್ತಾರೆ.
“ಲಾಠಿ” ಜನರ ರಕ್ಷಣೆಗೆ ಸದಾ ಸಿದ್ದ. ಅಂತಹ”ಲಾಠಿ”ಯ ಸುತ್ತ ನಮ್ಮ ಚಿತ್ರದ ಕಥೆ ಸಾಗುತ್ತದೆ. ತೆಲುಗು, ತಮಿಳು ಹಾಗೂ ಕನ್ನಡದಲ್ಲಿ ಡಿಸೆಂಬರ್ 22 ರಂದು ಬಿಡುಗಡೆಯಾಗುತ್ತಿದೆ. ಹಿಂದಿಯಲ್ಲಿ ಡಿಸೆಂಬರ್ 30 ರಂದು ತೆರೆ ಕಾಣಲಿದೆ. 145 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆದಿದೆ. ಚಿತ್ರದ ನಿಜವಾದ ಹೀರೋಗಳೆಂದರೆ ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜ ಹಾಗೂ ಸಾಹಸ ನಿರ್ದೇಶಕ ಪೀಟರ್ ಹೆನ್.
” ಲಾಠಿ ” ಯ ಹಾಡುಗಳು, ರೀರೆಕಾರ್ಡಿಂಗ್ ಹಾಗೂ ಸಾಹಸ ಸನ್ನಿವೇಶಗಳು ಅಷ್ಟು ಅದ್ಭುತವಾಗಿ ಮೂಡಿಬಂದಿದೆ. ಕೊನೆಯ 45 ನಿಮಿಷಗಳ ಸನ್ನಿವೇಶವಂತೂ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲುವಂತೆ ಮಾಡುವುದು ಖಚಿತ. ನಿರ್ದೇಶಕ ವಿನೋದ್ ಕುಮಾರ್ ಉತ್ತಮವಾಗಿ ನಿರ್ದೇಶಿಸಿದ್ದಾರೆ.
“ಲಾಠಿ” ಟಿಕೆಟ್ ನ ಬೆಲೆಯ ಒಂದು ರೂಪಾಯಿಯನ್ನು ರೈತರಿಗೆ ನೀಡಲು ತೀರ್ಮಾನಿಸಿದ್ದೇನೆ. ಬೆಂಗಳೂರು ಕುಮಾರ್ ಕರ್ನಾಟಕದಾದ್ಯಂತ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.ನಾನು ಚಿತ್ರರಂಗಕ್ಕೆ ಬಂದು ಹದಿನೆಂಟು ವರ್ಷಗಳಾಯಿತು. ಅಂದಿನಿಂದಲೂ ನಿಮ್ಮೆಲ್ಲರ ಸಹಕಾರ ಅಪಾರ. ಈ ಚಿತ್ರಕ್ಕೂ ನಿಮ್ಮ ಬೆಂಬಲವಿರಲಿ ಎಂದರು ನಟ ವಿಶಾಲ್.
ನವರಸನ್ ಹಾಗೂ ವಿತರಕ ಬೆಂಗಳೂರು ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು