ಕೆಂಪು, ಹಳದಿ, ಹಸಿರು ಚಿತ್ರದ ಟ್ರೈಲರ್ ,ಹಾಡು ಬಿಡುಗಡೆ
ಕೆಂಪು ಹಳದಿ ಹಸಿರು ಚಿತ್ರದ ಟ್ರೈಲರ್ ಮತ್ತು ಲಿರಿಕಲ್ ಹಾಡು ಬಿಡುಗಡೆಯಾಗಿದ್ದು ಗಮನ ಸೆಳೆದಿದೆ. ಈ ನಡುವೆ ಚಿತ್ರವನ್ನು ಡಿಸೆಂಬರ್ 5 ರಂದು ತೆರೆಗೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ಚಿತ್ರಕ್ಕೆ ಮಣಿ ಜೇ ಕಾರ್ತಿಕೇಯನ್ ಆಕ್ಷನ್ಕಟ್ ಹೇಳಿದ್ದು ಶ್ರೀಹನ್, ದಿವ್ಯಾ ಸುರೇಶ್ ನಾಯಕ ನಾಯಕಿಯಾಗಿ ಕಾಣಿಕೊಙಡಿದ್ದಾರೆ. ಉಳಿದಂತೆ ಚಿತ್ರದಲ್ಲಿ ತುಳು ಹಾಸ್ಯ ಕಲಾವಿದ ಅರವಿಂದ್ ಬೋಳಾರ್, ಚಿಂದೋಡಿ ವಿಜಯ್ ಕುಮಾರ್,ಶೈಲಶ್ರೀ ಮೂಲ್ಕಿ, ಶ್ರೀಜನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನಿರ್ಮಾಪಕ ಪ್ರಸಾದ್ ಕುಮಾರ್ ನಾಯ್ಯ್ ಬಂಡವಾಳ ಹಾಕಿದ್ದು ಪ್ರಸಾದ್ ಈರ್ಲಾ ಮತ್ತು ಹರೀಸ್ ಧಾಸ್ಮಾನ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ
ನಿರ್ದೇಶಕ ಮಣಿ ಎಜೆ ಕಾರ್ತಿಕೆಯನ್ ಮಾತನಾಡಿ ವಿಭಿನ್ನ ಚಿತ್ರವನ್ನು ಕೆಂಪು ಹಳದಿ ಹಸಿರು ಚಿತ್ರದ ಮೂಲಕ ತೆರೆಗೆ ಕಟ್ಟಿಕೊಡಲಾಗಿದೆ, ಚಿತ್ರದ ಕಥೆ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎನ್ನುವ ವಿಶ್ವಾಸವಿದೆ, ಈ ಹಿಂದೆ ತಾವು ತುಳು ಚಿತ್ರ ಮಾಡಿದ್ದೆ. ಕನ್ನಡದಲ್ಲಿ ಹೊಸದು ಎಂದರು
ನಿರ್ಮಾಪಕ ಪ್ರಸಾದ್ ಕುಮಾರ್ ನಾಯ್ಕ್ ಮಾತನಾಡಿ ನಿರ್ದೇಶಕರು ಹೇಳಿದ ಇಷ್ಟವಾಯಿತು ಚಿತ್ರ ನಿರ್ಮಾಣ ಮಾಡಿದ್ದೇವೆ ಎಂದರು

ನಾಯಕ ಶ್ರೀಯನ್ ದೀಪಕ್ ಮಾತನಾಡಿ ಹೊಸತನದಿಂದ ಕೂಡಿದ ಪಾತ್ರ ಎಲ್ಲರಿಗೂ ಇಷ್ಟವಾಗಲಿದೆ ಎಂದರೆ ಕಲಾವಿದೆ ಶೈಲಶ್ರೀ ಮೂಲ್ಕಿ, ಹಾಸ್ಯ ಕಲಾವಿದ ಅರವಿಂದ್ ಬೋಳಾರ್ ಸೇರಿದಂಎತ ಚಿತ್ರತಂಡ ಮಾಹಿತಿ ಹಂಚಿಕೊಂಡಿತು

