Medical drama ``Heartbeat'' debuts in Kannada on Jio Hotstar

ಜಿಯೋ ಹಾಟ್ ಸ್ಟಾರ್ ನಲ್ಲಿ ಮೆಡಿಕಲ್ ಡ್ರಾಮಾ “ಹಾರ್ಟ್‍ಬೀಟ್” ಕನ್ನಡದಲ್ಲಿ ಆರಂಭ - CineNewsKannada.com

ಜಿಯೋ ಹಾಟ್ ಸ್ಟಾರ್ ನಲ್ಲಿ ಮೆಡಿಕಲ್ ಡ್ರಾಮಾ “ಹಾರ್ಟ್‍ಬೀಟ್” ಕನ್ನಡದಲ್ಲಿ ಆರಂಭ

ಬಹುನಿರೀಕ್ಷಿತ ಮೆಡಿಕಲ್ ಡ್ರಾಮಾ ಸರಣಿ “ಹಾರ್ಟ್‍ಬೀಟ್” ಅನ್ನು ಕನ್ನಡದಲ್ಲಿ 28 ನವೆಂಬರ್ 28ರಿಂದ ಆರಂಭವಾಗಿದ್ದು 100 ಎಪಿಸೋಡ್‍ಗಳನ್ನು ಒಳಗೊಂಡಿರುವ ಭವ್ಯ ಸೀಸನ್, ವೈದ್ಯಕೀಯ ಲೋಕದ ಸವಾಲುಗಳು, ಸಂಬಂಧಗಳ ಸಂಘರ್ಷಗಳು ಮತ್ತು ಮಾನವೀಯ ಭಾವನೆಗಳ ರೋಚಕ ಸಂಯೋಜನೆಯನ್ನು ಪ್ರೇಕ್ಷಕರಿಗೆ ಆವರಿಸುವಂತೆ ತರುತ್ತದೆ.

ಮುಖ್ಯ ಪಾತ್ರದಲ್ಲಿ ದೀಪಾ ಬಾಲು, ಜೊತೆಗೂಡಿ ಅನುಮೋಲ್, ಚಾರುಕೇಶ್, ಕಾರ್ತಿಕ್ ಕುಮಾರ್ ಮತ್ತು ಹಲವಾರು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಸರಣಿಯನ್ನು ದೀಪಕ್ ಸುಂದರರಾಜನ್ ಬರೆದು, ದೀಪಕ್ ಸುಂದರರಾಜನ್, ಅಬ್ದುಲ್ ಕಬೀಝ್ ಮತ್ತು ಚಿದಂಬರಂ ಮಣಿವಣ್ಣನ್ ನಿರ್ದೇಶಿಸಿದ್ದಾರೆ.

ಅಮೇರಿಕದ ಖ್ಯಾತ ಮೆಡಿಕಲ್ ಡ್ರಾಮಾಗಳಾದ ನ್ಯೂ ಆಮ್ಸ್‍ಟರ್ಡ್ಯಾಮ್ ಮತ್ತು ಗ್ರೇ’ಸ್ ಅನಾಟಮಿ ಶೈಲಿ ಹೋಲುವ ಈ ಸರಣಿ, ಗಾಲ್ಪಿಕಮಲ್ಟಿ-ಸ್ಪೆಷಾಲಿಟಿ ಹಾಸ್ಪಿಟಲ್ ಅನ್ನು ಹಿನ್ನಲೆಯಲ್ಲಿ ಇಟ್ಟುಕೊಂಡಿದೆ. ಇಲ್ಲಿ ಸರ್ಜಿಕಲ್ ಇಂಟರ್ನ್‍ಗಳು, ರೆಸಿಡೆಂಟ್‍ಗಳು ಮತ್ತು ಅಟೆಂಡಿಂಗ್ ವೈದ್ಯರ ದಿನನಿತ್ಯದ ವೃತ್ತಿಜೀವನದ ಒತ್ತಡಗಳು ಹಾಗೂ ಅವರ ವೈಯಕ್ತಿಕ ಬದುಕಿನ ಸಂಘರ್ಷಗಳು ನೈಜವಾಗಿ ಮೂಡಿ ಬರುತ್ತವೆ.

ಸೀಸನ್ 1 ಕಥಾಸಾರಾಂಶ:

ಹಾರ್ಟ್‍ಬೀಟ್ -ರಿನಾ ಎಂಬ ಪ್ರತಿಭಾವಂತ ಯುವ ವೈದ್ಯೆಯ ಕಥೆ ಆಧರಿಸಿದೆ. ಜನರಲ್ ಸರ್ಜನ್ ಡಾ. ರಧಿ ದೂರವಾದ ಮಗಳು ಎಂಬುದು ಬಹಿರಂಗವಾದಾಗ, ರಿನಾ ಮತ್ತು ರಧಿಯ ಜೀವನಗಳು ಹೊಸ ತಿರುವನ್ನು ಪಡೆಯುತ್ತವೆ. ಹಾಸ್ಪಿಟಲ್‍ನ ಸರ್ಜಿಕಲ್ ರೆಸಿಡೆನ್ಸಿ ಪೆÇ್ರೀಗ್ರಾಂಗೆ ಸೇರಿರುವ ರಿನಾ, ತನ್ನ ಸಹ-ಇಂಟರ್ನ್‍ಗಳಾದ ತೇಜು, ನವೀನ್ , ರಾಕಿ, ಗುಣ ಹಾಗೂ ಹಿರಿಯ ರೆಸಿಡೆಂಟ್‍ಗಳಾದ ಅನಿತಾ ಮತ್ತು ರವಿ ಅವರೊಂದಿಗೆ ವೈಯಕ್ತಿಕ-ವೃತ್ತಿಜೀವನದ ಒತ್ತಡಗಳನ್ನು ನಿಭಾಯಿಸುವ ಪ್ರಯತ್ನ ಮಾಡುತ್ತಾಳೆ.

ಅರ್ಜುನ್, ರಿನಾ ಜೀವನದಲ್ಲಿ ಪ್ರೇಮದ ಹೊಸ ಅಧ್ಯಾಯ ತೆರೆಯುವಲ್ಲಿ ಪ್ರಮುಖ ಪಾತ್ರವಹಿಸ್ತಾನೆ. ಆದರೆ ಭೂತಕಾಲದ ರಹಸ್ಯಗಳು ಬೆಳಕಿಗೆ ಬರುತ್ತಿದ್ದಂತೆ, ಸಂಬಂಧಗಳು, ಕರ್ತವ್ಯಗಳು ಮತ್ತು ಭಾವನೆಗಳು ಪರಸ್ಪರ ಮುಖಾಮುಖಿಯಾಗುತ್ತವೆ. ಹಾರ್ಟ್‍ಬೀಟ್ ವೈದ್ಯಕೀಯ ಜಗತ್ತಿನ ಮಾನವೀಯ ಮುಖವನ್ನು ಹಿಡಿದಿಡುವ, ಹೃದಯಕ್ಕೆ ಹತ್ತಿರದ ಕಥೆಗಳೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸಲು ಸಜ್ಜಾಗಿದ್ದು ಜಿಯೋ ಹಾಟ್‍ಸ್ಟಾರ್‍ನಲ್ಲಿ ಲಭ್ಯವಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin