Muhurta for the film “Manikantha” in the presence of Naga Sadhus

“ಮಣಿಕಂಠ” ಚಿತ್ರಕ್ಕೆ ನಾಗಸಾಧುಗಳ ಸಮ್ಮುಖದಲ್ಲಿ ಮುಹೂರ್ತ - CineNewsKannada.com

“ಮಣಿಕಂಠ” ಚಿತ್ರಕ್ಕೆ ನಾಗಸಾಧುಗಳ ಸಮ್ಮುಖದಲ್ಲಿ ಮುಹೂರ್ತ

‘ಮಣಿಕಂಠ’ ಹೆಸರಿನಲ್ಲಿ ಸಿನಿಮಾ ಸಿದ್ದಗೊಳ್ಳುತ್ತಿದೆ. ನಾಗಾಸಾಧುಗಳ ಸಮ್ಮುಖದಲ್ಲಿ ಮಹೂರ್ತ ನಡೆದಿದೆ. ಅಶ್ವಿನಿ ಸಂತೋಷ್ ಸಿಂಹ ನಿರ್ಮಾಣ ಮಾಡುವ ಜೊತೆಗೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಸಂತೋಷ್ ಸಿಂಹ ಕಥೆ ಬರೆದು ನಿರ್ದೇಶನ ಅಲ್ಲದೆ ನಾಯಕನಾಗಿ ನಟಿಸುತ್ತಿದ್ದಾರೆ.

ಹಾಗೂ ಇವರ ಇಬ್ಬರು ಮಕ್ಕಳು ಬಣ್ಣ ಹಚ್ಚುತ್ತಿದ್ದಾರೆ. ಒಂದು ರೀತಿಯಲ್ಲಿ ಇಡೀ ಕುಟುಂಬ ಚಿತ್ರದಲ್ಲಿ ತೊಡಗಿಕೊಂಡಿರುವುದು ಚಿತ್ರದ ವಿಶೇಷ.

ಮಹೂರ್ತದ ಬಳಿಕ ಮಾತಿಗಿಳಿದ ನಿರ್ದೇಶಕ ಅಶ್ವಿನಿ ಸಂತೋಷ್ ಸಿಂಹ್, ಮಣಿಕಂಠ ಪ್ರತಿಯೊಬ್ಬರ ಜೀವನದಲ್ಲಿ ಆವರಿಸಿಕೊಂಡು ಪವಾಡ ಮಾಡಿದ್ದಾನೆ. ಅದನ್ನು ಅನುಭವಿಸಿದಾಗ ಮಾತ್ರ ತಿಳಿಯುತ್ತದೆ. ಹುಡುಕುತ್ತಾ ಹೋದರೆ ಮುಗಿಯುವುದಿಲ್ಲ. ಇಪ್ಪತ್ತೈದು ವರ್ಷ ದೊಡ್ಡಪಾದಕ್ಕೆ ಹೋಗಿ ಭಕ್ತಿಯಿಂದ ಸ್ವಾಮಿ ದರ್ಶನ ಮಾಡಿದ್ದೇನೆ. ಬದುಕಲ್ಲಿ ನಡೆದ ಸತ್ಯ ಘಟನೆಗಳು, ಸ್ವಾಮಿಯ ಪವಾಡಗಳನ್ನು ತೋರಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದರು

ಚಿತ್ರದಲ್ಲಿ ತಾಯಿ ಸೆಂಟಿಮೆಂಟ್, ಪ್ರೀತಿ ಎಲ್ಲವು ತುಂಬಿಕೊಂಡಿರುತ್ತದೆ. ಹೆಣ್ಣು ಮಕ್ಕಳು ಋತುಮತಿ ಆದ ತರುವಾಯ ಹೋಗದೆ ಇದ್ದಾಗ, ಅವರ ಯಾತನೆಗಳು, ಭಕ್ತರುಗಳಿಗೆ ಕರಪುಸ್ವಾಮಿ ಬಗ್ಗೆ ತಿಳಿಯದ ಸಂಗತಿಗಳು, ಮಾಲಾಧಾರಿಗಳು ತೊಂದರೆಗೆ ಸಿಲುಕಿಕೊಂಡಾಗ ಕರಪುಸ್ವಾಮಿ ಹೇಗೆ ಕಾಪಾಡುತ್ತಾರೆ. ಕೆಲವು ಸನ್ನಿವೇಶಗಳಲ್ಲಿ ಪಾರಿವಾಳ ಬಂದು ಹೋಗಲಿದೆ ಎಂದು ಹೇಳಿದರು

ಗುರು ಜೀವನ್ ಸಿಂಹ, ತನುಶ್ರೀ ಸಿಂಹ, ಬಿ.ಎಸ್.ಮಂಜುಳಾ, ವೈಷ್ಣವಿ,ಎಸ್.ಡಿ. ಶರತ್.ಎಸ್.ಎಂ. ಮಮತಾ, ಶಿವಣ್ಣ ಮುಂತಾದವರು ಅಭಿನಯಿಸಿದ್ದಾರೆ. ಚೇತನ್ ಕುಮಾರ್ ಸಾಹಿತ್ಯದ ಐದು

ಸ್ವರೂಪ್.ಆರ್ ಸಂಗೀತ ಛಾಯಾಗ್ರಹಣ-ಸಂಕಲನ ವರ್ಷಿತ್.ಎಸ್.ಎನ್. ಸಾಹಸ ಗಣೇಶ್ ಅವರದಾಗಿದೆ. ಬೆಂಗಳೂರು, ಶಬರಿಮಲೆ, ಪಂಪ, ದೊಡ್ಡಪಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಲು ತಂಡ ಯೋಜನೆ ರೂಪಿಸಿಕೊಂಡಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin