Trailer of the movie 'Narayana Narayana' released: Curiosity increases

‘ನಾರಾಯಣ ನಾರಾಯಣ’ ಚಿತ್ರದ ಟ್ರೈಲರ್ ಬಿಡುಗಡೆ: ಕುತೂಹಲ ಹೆಚ್ಚಳ - CineNewsKannada.com

‘ನಾರಾಯಣ ನಾರಾಯಣ’ ಚಿತ್ರದ ಟ್ರೈಲರ್ ಬಿಡುಗಡೆ: ಕುತೂಹಲ ಹೆಚ್ಚಳ

“ನಾರಾಯಣ ನಾರಾಯಣ” ಚಂದನವನದಲ್ಲಿ ಬಿಡುಗಡೆಗೆ ತಯಾರಾಗಿರುವ ಹೊಸಬರ ಸಿನಿಮಾ. ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಡುವ ಹೊಸ ಪ್ರತಿಭೆಗಳಿಗೇನು ಕಮ್ಮಿ ಇಲ್ಲ. ಅನೇಕ ಕಲಾವಿದರು ತಂತ್ರಜ್ಞರು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಇದೀಗ ನಾರಾಯಣ ನಾರಾಯಣ ಸಿನಿಮಾ ಮೂಲಕ ಅನೇಕ ಹೊಸ ಪ್ರತಿಭೆಗಳು ಪ್ರವೇಶ ಪಡೆದಿದ್ಧಾರೆ.

ಟೈಟಲ್ ಮೂಲಕವೇ ಗಮನ ಸೆಳೆಯುತ್ತಿರುವ ಚಿತ್ರಕ್ಕೆ ಶ್ರೀಕಾಂತ್ ಕೆಂಚಪ್ಪ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಅನೇಕ ಹೊಸ ಕಲಾವಿದರ ಜೊತೆಗೆ ಕಾಮಿಡಿ ನಟ, ಮಜಾ ಟಾಕಿಸ್ ಖ್ಯಾತಿಯ ಪವನ್ ಕುಮಾರ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.

ನಾರಾಯಣ ನಾರಾಯಣ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ. ಎರಡು ಹಾಡುಗಳು ಮತ್ತು ಟ್ರೈಲರ್ ಬಿಡುಗಡೆ ಮಾಡುವ ಮೂಲಕ ಸಿನಿಮಾ ಪ್ರೇಮಿಗಳು ಕುತೂಹಲ ಹೆಚ್ಚುವಂತೆ ಮಾಡಿದ್ದಾರೆ.

ಸತ್ಯ ರಾಧಕೃಷ್ಣಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಕೃಷ್ಣನ ಬಗ್ಗೆ ಇರುವ ಹಾಡು ಹಾಗೂ ಖ್ಯಾತ ಚಿತ್ರಸಾಹಿತಿ ಕವಿರಾಜ್ ಬರೆದಿರುವ ರೊಮ್ಯಾಂಟಿಂಕ್ ಹಾಡು ಕೇಳಲು ಇಂಪಾಗಿದ್ದು ನಾರಾಯಣ ನಾರಾಯಣ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.ಟ್ರೈಲರ್ ರಿಲೀಸ್ ಮಾಡಿ ಮಾತನಾಡಿದ ಸಿನಿಮಾತಂಡ ನಾಲ್ಕು ವರ್ಷಗಳಿಂದ ಸಿನಿಮಾ ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ ಅದ್ಭುತವಾಗಿ ಸಿನಿಮಾ ಮಾಡಿದ್ದೇವೆ ಎಂದರು. ನಾರಾಯಣ ನಾರಾಯಣ ಕೃಷ್ಣಪ್ಪ ನಿರ್ಮಾಣದಲ್ಲಿ ಮೂಡಿಬಂದಿದೆ.

ನಿರ್ದೇಶಕ ಶ್ರೀಕಾಂತ್ ಮಾತನಾಡಿ ‘ನಾರಾಯಣ ನಾರಾಯಣ ನಾಲ್ಕು ವರ್ಷದ ಶ್ರಮ. ಚಿತ್ರೀಕರಣ ಎಲ್ಲಾ ಮುಗಿಸಿ ಬಿಡುಗಡೆಗೆ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಇಡೀ ತಂಡ ಜೊತೆಯಲ್ಲಿ ನಿಂತಿದೆ’ ಎಂದು ಹೇಳಿದರು.

ನಿರ್ಮಾಪಕ ಕೃಷ್ಣಪ್ಪ ಮಾತನಾಡಿ, ಈಗಾಗಲೇ ಎರಡು ಸಿನಿಮಾಗಳನ್ನು ಮಾಡಿ ಚಿತ್ರರಂಗದ ಸಹವಾಸವೇ ಬೇಡ ಅಂತ ಇದ್ದೆ. ನಿರ್ದೇಶಕ ಶ್ರೀಕಾಂತ್ ಅವರ ಕೃಷ್ಣನ ಕಥೆ ಕೇಳಿ ಇಷ್ಟವಾಯಿತು. ನಾವು ಕೂಡ ಕೃಷ್ಣನ ಭಕ್ತರು. ಹಾಗಾಗಿ ಈ ಸಿನಿಮಾ ಮಾಡಲು ಒಪ್ಪಿಕೊಂಡೆ’ ಎಂದು ಹೇಳಿದ್ದಾರೆ

ಪ್ರಮುಖ ಪಾತ್ರ ಕೃಷ್ಣನಾಗಿ ಮಿಂಚಿರುವ ಕಾಮಿಡಿ ನಟ ಮತ್ತು ಮಜಾ ಟಾಕಿಸ್ ಖ್ಯಾತಿಯ ಪವನ್ ಮಾತನಾಡಿ, ‘ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ದಯವಿಟ್ಟು ಎಲ್ಲರೂ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಕನ್ನಡ ಸಿನಿಮಾ ಗೆಲ್ಲಿಸಿ. ಓಟಿಟಿ ನಲ್ಲಿ ಸಿನಿಮಾ ಬರುತ್ತೆ ಅಂತಾ ಕಾಯಬೇಡಿ’ ಎಂದು ಹೇಳಿದರು.

ಇನ್ನೂ ಸಿನಿಮಾ ಮತ್ತೊಂದು ವಿಶೇಷ ಎಂದರೆ ನಾರಾಯಣ ನಾರಾಯಣ ಸಿನಿಮಾದ ತುಳು ರೈಟ್ಸ್ ಈಗಾಗಲೇ ಮಾರಾಟವಾಗಿದೆ. ಟ್ರೈಲರ್ ರಿಲೀಸ್ ಈವೆಂಟ್ ನಲ್ಲಿ ನಿರ್ಮಾಪಕ ಕೃಷ್ಣಪ್ಪ ಬಹಿರಂಗ ಪಡಿಸಿ ಸಂತಸ ವ್ಯಕ್ತಪಡಿಸಿದರು.

ಚಿತ್ರದಲ್ಲಿ ಗುರುಕಿರಣ್, ನಾಯಕಿಯಾಕಿ ಬಿಂಬಿಕಾ, ಕೀರ್ತಿ ಕೃಷ್ಣ, ದರ್ಶನ್ ಸೇರಿದಂತೆ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ..ಈ ಸಿನಿಮಾದ ವಿತರಣೆ ಹಕ್ಕನ್ನು ರಾಧಿಕಾ ಕುಮಾರಸ್ವಾಮಿ ಅವರ ಸಹೋದರ ರವಿರಾಜ್ ಪಡೆದುಕೊಂಡಿದ್ದಾರೆ. ಸದ್ಯದಲ್ಲಿಯೇ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin