Actress Pranitha Subhash mingling at Paris Fashion Week

ಪ್ಯಾರಿಸ್ ಫ್ಯಾಷನ್ ವೀಕ್‍ನಲ್ಲಿ ನಟಿ ಪ್ರಣಿತಾ ಸುಭಾಷ್ ಮಿಂಚಿಂಗ್ - CineNewsKannada.com

ಪ್ಯಾರಿಸ್ ಫ್ಯಾಷನ್ ವೀಕ್‍ನಲ್ಲಿ ನಟಿ ಪ್ರಣಿತಾ ಸುಭಾಷ್ ಮಿಂಚಿಂಗ್

ಮದುವೆ, ಮಕ್ಕಳಾದ ಮೇಲೆ ನಟಿಯರು ಮನೆಯಲ್ಲಿರುವುದೇ ಅಧಿಕ. ಅಂದರೆ ಅವಕಾಶಗಳು ಕಡಿಮೆಯಾಗುತ್ತವೆ. ಆದರೆ ಕೆಲ ನಟಿಯರ ವಿಷಯದಲ್ಲಿ ಹಾಗಲ್ಲ, ಮದುವೆಯಾಗಲಿ, ಮಕ್ಕಳಾಗಲಿ ಅವರಿಗೆ ಅದು ಕೌಂಟೇ ಆಗುವುದಿಲ್ಲ.

ಅಂತಹ ನಟಿಯರಲ್ಲಿ ನಟಿ ಪ್ರಣೀತಾ ಸುಭಾಷ್ ಕೂಡ ಒಬ್ಬರು. ಮದುವೆ, ಮಕ್ಕಳಾದ ನಂತರವೂ ಸಿನಿಮಾ, ಫ್ಯಾಷನ್‍ನಲ್ಲಿ ಬ್ಯುಸಿಯಾಗಿದ್ದಾರೆ.ಪ್ಯಾರಿಸ್ ಫ್ಯಾಷನ್ ವೀಕ್ ನಲ್ಲಿ ಭಾಗಿಯಾದ ಕನ್ನಡದ ಮೊದಲ ನಟಿ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ

ಪ್ಯಾರಿಸ್ ಸ್ಟ್ರೀಟ್ ನಲ್ಲಿ ಕ್ಯಾಮರಾಗೆ ಸಖತ್ ಪೋಸ್ ನೀಡಿದ ಪ್ರಣಿತಾ ತಾಯಿಯಾದ ನಂತರ ಮತ್ತಷ್ಟು ಅಂದ ಹೆಚ್ಚಿಸಿಕೊಂಡು ಮಾದಕ ಅವತಾರದಲ್ಲಿ ಯುವ ನಟಿಯರಿಗೆ ಪೈಪೋಟಿ ನೀಡುತ್ತಿದ್ದಾರೆ.

ಕೆಲವೇ ದಿನಗಳಲ್ಲಿ ಮತ್ತೆ ಸಿನಿಮಾರಂಗದಲ್ಲಿ ಬ್ಯುಸಿ ಆಗಲಿರೋ ನಟಿ ಪ್ರಣೀತಾ ಸುಭಾಷ್ ಪ್ಯಾರೀಸ್ ಪ್ಯಾಷನ್ ವೀಕ್ ನಲ್ಲಿ ಪಾಲ್ಗೊಳ್ಳುವ ಮೂಲಕ ಭಾರತೀಯ ಚಿತ್ರರಂಗದ ನಟಿಯರಲ್ಲಿ ಮತ್ತಷ್ಟು ಹೊಸ ಹುರುಪು ವಿಶ್ವಾಸ ಹೆಚ್ಚುವಂತೆ ಮಾಡಿದ್ದಾರೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin