ಜನವರಿ 29 ರಂದು “ಲೇಡಿಸ್ ಬಾರ್” ಚಿತ್ರದ ಟ್ರೇಲರ್ ಬಿಡುಗಡೆ
![ಜನವರಿ 29 ರಂದು “ಲೇಡಿಸ್ ಬಾರ್” ಚಿತ್ರದ ಟ್ರೇಲರ್ ಬಿಡುಗಡೆ](https://www.cininewskannada.com/wp-content/uploads/2024/01/12-1.jpg?v=1705819055)
ಡಿ.ಎಂ.ಸಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಟಿ.ಎಂ.ಸೋಮರಾಜು ನಿರ್ಮಿಸಿರುವ ಹಾಗೂ ಮುತ್ತು ಎ.ಎನ್ ನಿರ್ದೇಶಿಸಿರುವ “ಲೇಡಿಸ್ ಬಾರ್” ಚಿತ್ರದ ಟ್ರೇಲರ್ ಜನವರಿ 29 ರಂದು ಬಿಡುಗಡೆಯಾಗಲಿದ್ದು ಚಿತ್ರ ಬಿಡುಗಡೆಯಾಗಲಿದೆ.
![](https://www.cininewskannada.com/wp-content/uploads/2024/01/11.jpg?v=1705819128)
ಈಗಾಗಲೇ ಸಿರಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿರುವ ಚಿತ್ರದ ಟೀಸರ್ ಹಾಗೂ ಹಾಡುಗಳು ಎಲ್ಲರ ಮೆಚ್ಚುಗೆ ಪಡೆದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.
“ಲೇಡಿಸ್ ಬಾರ್” ಶೀರ್ಷಿಕೆ ಕೇಳಿದ ತಕ್ಷಣ ಕುಡಿತದ ಬಗ್ಗೆ ಸಿನಿಮಾ ಅಂದುಕೊಳ್ಳುವುದು ಸಹಜ. ಆದರೆ ಈ ಚಿತ್ರದಲ್ಲಿ ಬರೀ ಕುಡಿತವಷ್ಟೇ ತೋರಿಸಿಲ್ಲ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಪ್ರಯತ್ನ ಮಾಡಲಾಗಿದಯಂತೆ. ಈಗಾಗಲೇ ಚಿತ್ರೀಕರಣ ಮುಕ್ತಾಯವಾಗಿದ್ದು, ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಸದ್ಯದಲ್ಲೇ ತೆರೆಗೆ ಬರಲಿದೆ.
![](https://www.cininewskannada.com/wp-content/uploads/2024/01/13-2.jpg?v=1705819136)
ಟಿ.ಎಂ.ಸೋಮರಾಜು ಚಿತ್ರವನ್ನು ನಿರ್ಮಿಸುವುದರ ಜೊತೆಗೆ ಪ್ರಮುಖಪಾತ್ರದಲ್ಲೂ ನಟಿಸಿದ್ದಾರೆ. ಹರೀಶ್ ರಾಜ್, ಶಿವಾನಿ, ಮೀನಾಕ್ಷಿ, ಮಾಧುರಿ, ಗಣೇಶ್ ರಾವ್, ಆರಾಧ್ಯ , ಪ್ರೇರಣಾ, ಚೈತ್ರ ಮುಂತಾದವರು ತಾರಾಬಳಗದಲ್ಲಿದ್ದಾರೆ. ಹರ್ಷ ಕಾಗೋಡ್ ಸಂಗೀತ ನಿರ್ದೇಶನ, ವೀನಸ್ ಮೂರ್ತಿ ಛಾಯಾಗ್ರಹಣ ಹಾಗೂ ಜಗ್ಗು ಮಾಸ್ಟರ್ ನೃತ್ಯ ನಿರ್ದೇಶನ “ಲೇಡಿಸ್ ಬಾರ್” ಚಿತ್ರಕ್ಕಿದೆ.
![](https://www.cininewskannada.com/wp-content/uploads/2024/01/14-3.jpg?v=1705819148)
ನಿರ್ದೇಶಕ ಎ ಎನ್ ಮುತ್ತು ಅವರು ಹೇಳಿದ ಕಥೆ ನನಗೆ ತುಂಬಾ ಇಷ್ಟವಾಯಿತು . ಸಮಾಜಕ್ಕೆ ಒಂದೊಳ್ಳೆ ಸಂದೇಶ ಇರುವ ಚಿತ್ರವಾಗಿರುವುದರಿಂದ ಚಿತ್ರಕ್ಕೆ ಬಂಡವಾಳ ಹೂಡಿದ್ದೇನೆ ಹಾಗೂ ಒಂದು ಪ್ರಮುಖ ಪಾತ್ರದಲ್ಲಿ ನಟನೆ ಕೂಡ ಮಾಡಿದ್ದೇನೆಂದು ನಿರ್ಮಾಪಕ ಸೋಮರಾಜ್ ಹೇಳಿದರು.
ಛಾಯಾಗ್ರಹಣ ವಿನಸ್ ಮೂರ್ತಿ, ಹರ್ಷ ಕೋಗೋಡ್‍ರವರ ಸಂಗೀತ, ಮನ್ವರ್ಷಿ ನವಲಗುಂದ, ಶ್ರೀ ತೇಜ್. ರಾಜು ಚಿತ್ರಪುರ ಅವರ ಸಾಹಿತ್ಯವಿದ್ದು ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿವೆ. ನೃತ್ಯ ನಿರ್ದೇಶಕ ಜಗ್ಗು, ಸಂಕಲನ ಶಿವರಾಜ್ ಮೇವು, ಸಾಹಸ ನಿರ್ದೇಶನ ಚಂದ್ರು ಬಂಡೆ ಅವರದಿದೆ.
![](https://www.cininewskannada.com/wp-content/uploads/2024/01/15-3.jpg?v=1705819165)
ಚಿತ್ರದಲ್ಲಿ ಕಲಾವಿದರಾದ ಹರೀಶ್ ರಾಜ್, ಕೆಂಪೇಗೌಡ, ಚಿಲ್ಲರ್ ಮಂಜು, ಸೀತಾರಾಮ್, ಕುರಿರಂಗ, ಚೈತ್ರ ಗೌಡ, ಶಿವಾನಿ ಗೌಡ, ಗಣೇಶ್ ರಾವ್ ಕೇಸರಕರ್ ಮುಂತಾದವರು ಮನೋಜ್ಞವಾಗಿ ಅಭಿನಯಿಸಿದ್ದಾರೆ. ಪಿಆರ್ ಓ ಸುಧೀಂದ್ರ ವೆಂಕಟೇಶ್ ,ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಗಿ ಚಿತ್ರಕ್ಕೆ ಎಸ್ ಎನ್ ರಾಜಶೇಖರ್ ಸಹ ನಿರ್ಮಾಪಕರಾಗಿದ್ದಾರೆ.ಎ ಎನ್ ಮುತ್ತು ರವರು ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನದಲ್ಲಿ ತೆರೆಗೆ ಬರುವ ಈ ಚಿತ್ರದ ನಿರ್ದೇಶಕರು ಬಾಗಲಕೋಟ ಜಿಲ್ಲೆಯವರೆಂಬುದು ವಿಶೇಷವಾಗಿದೆ.