ಟ್ಯೂನ್ 123 ಆಡಿಯೋ ಆರಂಭ: ಐಟಿ ಉದ್ಯೋಗಿ ಮಂಜುನಾಥ್ ಹೊಸ ಸಾಹಸ
ಚಿತ್ರರಂಗದಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ಕನಸು ಮತ್ತು ಹಂಬಲದೊಂದಿಗೆ “ಟ್ಯೂನ್ 123 ಆಡಿಯೋ” ಸಂಸ್ಥೆ ಆರಂಭಿಸಿರುವ ಉತ್ತರ ಕರ್ನಾಟಕದ ಹೂಡೆಲ್ ಮುಂಬರುವ ದಿನಗಳಲ್ಲಿ ಉತ್ತರ ಕರ್ನಾಟಕದ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಒದಗಿಸುವ ಕನಸು ಕಟ್ಟಿಕೊಂಡಿದ್ದಾರೆ.
ಐಟಿ ಉದ್ಯೋಗಿಯಾಗಿರುವ ಮಂಜುನಾಥ್ ಹೂಡೆಲ್ ಅವರು ಚಿತ್ರರಂಗದಲ್ಲಿ ನಿರ್ದೇಶನ ಮಾಡುವುದು, ಆಡಿಯೋ ಕಂಪನಿ ಮೂಲಕ ಹೊಸ ನಿರ್ಮಾಪಕರಿಗೆ ಅವಕಾಶ ಮಾಡಿಕೊಡುವುದು ಅಲ್ಲದೆ, ಗೀತ ರಚನೆಕಾರರಿಗೆ ವೇದಿಕೆ ಒದಗಿಸುವ ಉದ್ದೇಶವನ್ನೂ ಹೊಂದಿದ್ದಾರೆ.
ಟ್ಯೂನ್ 123 ಆಡಿಯೋ ಕಂಪನಿ ಬಿಡುಗಡೆ ಮತ್ತು ತಾವೇ ರಚಿಸಿ ನಿರ್ಮಾಣ ಮಾಡಿರುವ ಹಾರೋ ಬಣ್ಣದ ಚಿಟ್ಟೆ ಹಾಡು ಬಿಡುಗಡೆ ಬಳಿಕ ಮಾತಿಗಳಿದ ಮಂಜುನಾಥ್ ಹೂಡೆಲ್, ಜನರಿಗೆ ಫ್ಯಾಥೋ ಹಾಡು ಬೇಗ ತಲುಪುತ್ತದೆ ಎನ್ನುವ ಕಾರಣಕ್ಕೆ ಇದೇ ಹಾಡನ್ನು ಮೊದಲ ಹಾಡಾಗಿ ಆಯ್ಕೆ ಮಾಡಿಕೊಂಡಿದ್ದೇವೆ.ಗುಲ್ಬರ್ಗಾ ಬಳಿಕ ಹಳ್ಳಿಯಿಂದ ಬೆಂಗಳೂರಿಗೆ ಬಂದು ಬದುಕುಕಟ್ಟಿಕೊಂಡಿದ್ದೇನೆ. ಒಂದಷ್ಟು ದಿನ ಐಟಿ ಕಂಪನಿಯಲ್ಲಿ ಕೆಲಸ ಮಾಡಿ ಹಣ ಸಂಪಾದಿಸಿದೆ. ನಿರ್ದೇಶನ ಮಾಡುವ ಆಸೆ ಇದೆ. ಅದಕ್ಕೆ ಮೊದಲು ಚಿತ್ರರಂಗದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವ ಉದ್ದೇಶದಿಂದ ಆಡಿಯೋ ಕಂಪನಿ ಆರಂಭಿಸಿದ್ದೇವೆ ಎಂದರು.
ಅಪ್ಪು ಸಾರ್ ಅಗಲಿದಾಗ ಅವರ ಕುರಿತು ಹಾಡು ಬರೆದಿದ್ದೆ. ಆ ಹಾಡನ್ನು ನಮ್ಮದೇ ಆಡಿಯೋ ಕಂಪನಿಯಲ್ಲಿ ಬಿಡುಗಡೆ ಮಾಡಲಾಗಿದೆ. ಜೊತೆಗೆ ಉತ್ತರ ಕರ್ನಾಟಕ ಪ್ರತಿಭೆಗಳನ್ನು ಬೆಳಕಿಗೆ ತರುವ ಜೊತೆಗೆ ಹೊಸ ಹೊಸ ಗುರಿಗಳಿವೆ ಎಂದರು.
ಖ್ಯಾತ ಗಾಯಕ ವಿಜಯ್ ಪ್ರಸಾದ್ ಹಾಡಿರುವ ಹಾಡು ಸೇರಿದಂತೆ ಅನೇಕ ಹಾಡುಗಳಿದ್ದು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಬಿಡುಗಡೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿಕೊಂಡರು.
ಸಂಗೀತ ನಿರ್ದೇಶಕ ಗೀತಾಸನ್ ಅಂಕೋಲಾ ಮಾತನಾಡಿ ಹಿರಿಯ ಸಂಗೀತ ನಿರ್ದೇಶಕ ರಾಜನ್ ನಾಗೇಂದ್ರ ಅವರ ಬಳಿ ಅನೇಕ ವರ್ಷಗಳ ಕಾಲ ಸಹಾಯಕನಾಗಿ ಕೆಲಸ ಮಾಡಿದ್ದೇನೆ. ಈ ಸಮಯದಲ್ಲಿ ಪರಿಚಯವಾದ ಮಂಜುನಾಥ್ ಹೂಡೆಲ್ ಅವರು ಚಿತ್ರರಂಗದ ಬಗ್ಗೆ ಅಪಾರ ಕನಸು ಕಟ್ಟಿಕೊಂಡಿದ್ದರು. ಅದಕ್ಕೆ ಪೂರಕವಾಗಿ ಮೊದಲ ಬಾರಿಗೆ ಫ್ಯಾಥೋ ಹಾಡು ಬಿಡುಗಡೆ ಮಾಡಿದ್ದೇವೆ. ಸಂಗೀತದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಸಾಧನೆ ಮಾಡುವ ಕನಸು ಕಟ್ಟಿಕೊಂಡಿದ್ದೇವೆ ಎನ್ನುವ ಮಾಹಿತಿ ಹಂಚಿಕೊಂಡರು
ಗಾಯಕ ಅರ್ಫಾಜ್ ಉಲ್ಲಾಳ, ಮೋಸಗಾತಿ ಹಾಡಿನ ಮೂಲಕ ಹೆಚ್ಚು ಜನಪ್ರಿಯವಾಗಿದ್ದೆ. ಇದೀಗ ಹಾರೋ ಚಿಟ್ಟೆ ಹಾಡು ಹಾಡಿದ್ದೇನೆ. ಈ ಹಾಡು ಕೂಡ ಹಿಟ್ ಆಗಲಿದ ಎಂದು ಹೇಳಿಕೊಂಡರು.
ಇದೇ ವೇಳೆ ನಿರ್ಮಾಪಕ ಶಶಿಧರ್ ಸೇರಿದಂತೆ ನಿರ್ಮಾಪಕ ಮಂಜುನಾಥ್ ಕುಟುಂಬದ ಅನೇಕ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದು ಹೊಸ ಪ್ರಯತ್ನಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು.