Rebel star Ambareesh dialogues the film titled “Yavo Ivu”.

ಚಿತ್ರದ ಶೀರ್ಷಿಕೆಯಾದ “ಯಾವೋ ಇವು” ರೆಬೆಲ್ ಸ್ಟಾರ್ ಅಂಬರೀಷ್ ಡೈಲಾಗ್ - CineNewsKannada.com

ಚಿತ್ರದ ಶೀರ್ಷಿಕೆಯಾದ “ಯಾವೋ ಇವು” ರೆಬೆಲ್ ಸ್ಟಾರ್ ಅಂಬರೀಷ್ ಡೈಲಾಗ್

ರೆಬಲ್ ಸ್ಟಾರ್ ಅಂಬರೀಷ್ ನೆನಪು ಸದಾ ಕಾಲ ಕಾಡುತ್ತಲೇ ಇರುತ್ತದೆ. ಅವರು ಮಾತನಾಡುತ್ತಿದ್ದ ಶೈಲಿ, ಡೈಲಾಗ್ ಅಲ್ಲದೆ ‘ಯಾವೋ ಇವೆಲ್ಲಾ’ ಅಂತ ಹೆಚ್ಚಾಗಿ ಬಳಸುತ್ತಿದ್ದರು. ಈಗ ಇದೇ ಸಂಭಾಷಣೆ ಚಿತ್ರದ ಹೆಸರು ಆಗಿದೆ. ಪ್ರಚಾರದ ಮೊದಲ ಹಂತವಾಗಿ ಧ್ವನಿಸಾಂದ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಒಂಬತ್ತು ವರ್ಷಗಳ ಕಾಲ ಚಿತ್ರರಂಗದಲ್ಲಿ ವಿವಿಧ ವಿಭಾಗಗಳಲ್ಲಿ ಅನುಭವ ಪಡೆದುಕೊಂಡಿರುವ ಶಿವಮೊಗ್ಗದ ಹರೀಶ್.ಸಾ.ರಾ ಸಿನಿಮಾ ಮಾಡಲು ಹಲವು ಸ್ಟಾರ್ ನಟರನ್ನು ಸಂಪರ್ಕಿಸಿದ್ದರು. ಆದರೆ ಅವರಿಂದ ಸೂಕ್ತ ಸ್ಪಂದನೆ ಸಿಗದ ಕಾರಣ, ನಾನೇ ಯಾಕೆ ನಾಯಕನಾಗಬಾರದೆಂದು ತೀರ್ಮಾನ ತೆಗೆದುಕೊಂಡು ಕಥೆ ಬರೆದು ನಿರ್ದೇಶನದ ಜವ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಇವರ ಪ್ರಯತ್ನಕ್ಕೆ ಪತ್ನಿ ಸುಜಾತ.ಎಸ್ ರಾಶ್ರೀ ಆಟ್ರ್ಸ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.

ಚಿಕ್ಕಂದಿರಲ್ಲಿ ಪೆÇೀಷಕರು ತಮ್ಮ ಮಕ್ಕಳನ್ನು ಇವರ ಮನೆಗೆ ಕೊಡಬೇಕೆಂದು ನಿರ್ಧಾರ ಕೈಗೊಂಡಿರುತ್ತಾರೆ. ಮುಂದೆ ಶ್ರೀಮಂತರ ಮನೆಯಿಂದ ಪ್ರಸ್ತಾಪ ಬಂದರೆ ಎಲ್ಲವನ್ನು ಮರೆಯುತ್ತಾರೆ. ದೂರದ ಬೆಟ್ಟ ನುಣ್ಣಗೆ ಅನ್ನುವಂತೆ ಹತ್ತಿರದ ಸಂಬಂಧಗಳಿಗೆ ಮೊದಲ ಅದ್ಯತೆ ಕೊಡಿ. ಬೇರೆ ಆಯ್ಕೆ ಇಲ್ಲದೆ ಹೋದಲ್ಲಿ ಹೊಸ ಸಂಬಂಧವನ್ನು ನೋಡಿಕೊಳ್ಳಿ. ಜೊತೆಗಿದ್ದವರು ನಿಮಗೆ ನೆರವಾಗುತ್ತಾರೆ. ಅಕಸ್ಮಾತ್ ಸಣ್ಣತನವಿರುವ ಮನಷ್ಯನಿಂದ ಅವಘಡಗಳು ಬಂದರೆ, ನಾಯಕನಾದವನು ಅದೆಲ್ಲಾವನ್ನು ಹೇಗೆ ಬಗೆಹರಿಸುತ್ತಾನೆ ಎನ್ನುವ ಅಂಶಗಳು ಅರ್ಥಪೂರ್ಣ ಸನ್ನಿವೇಶಗಳ ಮೂಲಕ ಬರಲಿದೆ. ಟೈಟಲ್‍ಗೆ ತಕ್ಕಂತೆ ಪಾತ್ರಗಳು ಸೃಷ್ಟಿಯಾಗಿರುವುದು ವಿಶೇಷ.

ಕಿರುಚಿತ್ರಗಳಲ್ಲಿ ನಟಿಸಿರುವ ಸಿರಸಿ ಮೂಲದ ಶಿಲ್ಪನಾಯಕ್ ನಾಯಕಿ. ಉಳಿದಂತೆ ಜಗನ್‍ಸೇಟ್, ಮೌನಿಕಪೂಜಾರಿ, ಕಾವ್ಯಭಾರದ್ವಾಜ್, ಪಾಲಾಕ್ಷ, ಹನುಮಂತಮೂರ್ತಿ.ಕೆ, ಕೀರ್ತಿವೆಂಕಟೇಶ್ ಅಭಿನಯಿಸಿದ್ದಾರೆ.

ಹರ್ಸಿವ್‍ಭಗೀರ ಸಾಹಿತ್ಯಕ್ಕೆ ಹರ್ಷಕಾಗೋಡ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಗಿರೀಶ್‍ಶಿರಗನಹಳ್ಳಿ, ಸಂಕಲನ ಸುನಯ್.ಎಸ್.ಜೈನ್, ನೃತ್ಯ ಸಚಿನ್.ಎನ್ ಅವರದಾಗಿದೆ.ಬೆಂಗಳೂರು, ಹೆಸರಘಟ್ಟ, ಕನಕಪುರ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರವು ಸದ್ಯದಲ್ಲೆ ಸೆನ್ಸಾರ್ ಅಂಗಳಕ್ಕೆ ಹೋಗಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin