ಸದ್ದು ಮಾಡಿದ “ಭೀಮ” ನ ಸೈಕೋ ಹಾಡು ಬಿಡುಗಡೆ

ಸಲಗ ಚಿತ್ರದ ಬಳಿಕ ವಿಜಯ್ ಕುಮಾರ್ ಆಕ್ಷನ್ ಕಟ್ ಹೇಳಿರುವ “ಭೀಮ” ಚಿತ್ರದ ಸೈಕೋ ಹಾಡು ಬಿಡುಗಡೆಯಾಗಿದ್ದು ಬಾರಿ ಸದ್ದು ಮಾಡುವ ಮುನ್ಸೂಚನೆ ನೀಡಿದೆ.ಎಂಸಿ ಬಿಜ್, ರಾಹುಲ್ ಡಿಟ್ಟೋ ಮತ್ತು ನಾಗಾರ್ಜುನ ಶರ್ಮಾ ಸೇರಿ ಬರೆದಿರುವ ಗೀತೆಗೆ ಎಂಸಿ ಬಿಜ್, ರಾಹುಲ್ ಡಿಟ್ಟೋ ಹಾಡಿದ್ದು ಚರಣ್ ರಾಜ್ ಸಂಗೀತ ನೀಡಿದ್ದಾರೆ.

ದುನಿಯಾ ವಿಜಯ್ ನಿರ್ದೇಶನದ ಮೊದಲ ಸಿನಿಮಾ ಸಲಗ, ಮೇಕಿಂಗ್ ಮತ್ತು ಖಡಕ್ ಡೈಲಾಗ್ ಗಳಿಂದ ಎಷ್ಟು ದೊಡ್ಡ ಹೆಸರು ಮಾಡಿ,ಬ್ಲಾP ಬಸ್ಟರ್ ಹವಾ ಕ್ರಿಯೇಟ್ ಮಾಡಿತ್ತು, ಅದೇ ನಿಟ್ಟಿನಲ್ಲಿ ಭೀಮ ಸಹ ತನ್ನ ಪಾರುಪತ್ಯವನ್ನ ಸಾಧಿಸುವ ಮುನ್ಸೂಚನೆ ನೀಡಿದೆ.

ಈ ವೇಳೆ ಮಾತನಾಡಿದ ನಟ. ನಿರ್ದೇಶಕ ದುನಿಯಾ ವಿಜಯ್, ಚಿತ್ರದ ಮೂಲಕ ಸಾಕಷ್ಟು ಯುವ ಕಲಾವಿದರನ್ನು ಚಿತ್ರದ ಮೂಲಕ ಪರಿಚಯ ಮಾಡಲಾಗಿದೆ ಎಲ್ಲಾ ಅಂದುಕೊಂಡಂತೆ ಆದರೆ ನವಂಬರ್ ತಿಂಗಳಲ್ಲಿ ಚಿತ್ರವನ್ನು ತೆರೆಗೆ ತರಲಾಗುವುದು. ಚಿತ್ರದ ಮೂಲಕ ರಂಗಭೂಮಿ ಕಲಾವಿದೆ ಅಶ್ವಿನಿ ನಾಯಕಿಯಾಗಿ ಪರಿಚಯವಾಗುತ್ತಿದ್ದಾರೆ ಎಂದರು.
ನೈಜ ಘಟನೆಯನ್ನು ಮುಂದಿಟ್ಟುಕೊಂಡು ಸಿನಿಮಾ ಮೂಲಕ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಪೋಷಕರು ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು ಇಲ್ಲದಿದ್ದರೆ ಅನಾಹುತ ಎನ್ನುವ ಸಂದೇಶವನ್ನು ಚಿತ್ರದ ಮೂಲಕ ಕಟ್ಟಿಕೊಡುವ ಕೆಲಸ ಮಾಡಲಾಗಿದೆ. ಸರ್ಕಾರ, ಪೊಲೀಸರು, ಅಧಿಕಾರದಲ್ಲಿರುವ ಮಂದಿ ಪಾರ್ಥೇನಿಯಂ ನಂತರ ಕೆಟ್ಟ ಚಟಕ್ಕೆ ಕಡಿವಾಣ ಹಾಕಬೇಕು ಎಂದರು.

ಭೈರಾಗಿ ಚಿತ್ರದ ನಿರ್ಮಾಣ ಮಾಡಿ,ಅತೀ ಚಿಕ್ಕ ವಯಸ್ಸಿನಲ್ಲೇ ನಿರ್ಮಾಪಕರಾಗಿ ಹೆಸರು ಮಾಡಿ,ತಮ್ಮದೇ ಆದಂತಹ ಒಳ್ಳೆಯ ಸ್ನೇಹ ಸಂಭಂದದ ನೆಟ್‍ವರ್ಕ್ ಹೊಂದಿರುವ ಸದಭಿರುಚಿಯ ವ್ಯಕ್ತಿ,ನಿರ್ಮಾಪಕ ಕೃಷ್ಣ ಸಾರ್ಥಕ ಮತ್ತು ಅವರ ಜೊತೆ ಕೈ ಜೋಡಿಸಿರುವ ಮತ್ತೊಬ್ಬ ವ್ಯಕ್ತಿ ಜಗದೀಶ್,ತಮ್ಮ ಕನಸಿನ ಪ್ರಾಜ್ಜೆಕ್ಟ್ ಭೀಮ ವನ್ನು ಅತ್ಯಂತ ಪ್ರೀತಿ ಹಾಗೂ ಶ್ರದ್ದೆಯಿಂದ ಮಾಡಿ ಮುಗಿಸಿ,ಚಿತ್ರವನ್ನು ನವೆಂಬರ್ ನಲ್ಲಿ ತೆರೆಗೆ ತರುವ ಪ್ರಯತ್ನವನ್ನು ಮಾಡುತ್ತಿದ್ದಾರೆ..

- ಸಂಭಾಷಣೆ ಬರೆದಿರುವ ಮಾಸ್ತಿ ಮಾತನಾಡಿ, ನಿರ್ದೇಶಕ ದುನಿಯಾ ವಿಜಯ್ ಹೇಳಿದ ಹಾಗೆ ಮಾತು ಬರೆದಿದ್ದೇನೆ. ಎಲ್ಲ ಶ್ರೇಯ ಅವರಿಗೆ ಸಲ್ಲಬೇಕು. ಭೀಮ ಬೆಂಗಳೂರಿನ ವಾಸ್ತವ ಜಗತ್ತಿನ ಅನಾವರಣ, ದುನಿಯಾ ವಿಜಯ್ ಅವರು ಕಾಂತಾರ ಮತ್ತು ಕಲ್ಪನಾದಂತಹ ಕಥೆಗಳನ್ನು ಜಯಮ್ಮನ ಮಗ ಚಿತ್ರದಲ್ಲಿಯೇ ಹೇಳಿದ್ಧಾರೆ. ಅತ್ಯುತ್ತಮ ಚಿತ್ರವಾಗಲಿದ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಭೀಮ ಚಿತ್ರದ ಪೋಸ್ಟರ್ ಲಾಂಚ್ ಆದ ದಿನಗಳಿಂದಲೂ ತನ್ನ ವೈಬ್ರೇಶನ್ ಹಾಗೆ ಉಳಿಸಿಕೊಂಡು ಬಂದಿದ್ದ ಚಿತ್ರ ತಂಡ ಇವತ್ತು,ಗೌರಿ ಗಣೇಶ ಹಬ್ಬದ ವಿಶೇಷವಾದ ದಿನದಂದೇ ತಮ್ಮ ಪ್ರೊಡಕ್ಷನ್ಸ್ ನ ಭೀಮ ಚಿತ್ರದ ಸೈಕ್ ಹಾಡನ್ನು ಲಾಂಚ್ ಮಾಡಿ,ಮೊದಲ ಹೆಜ್ಜೆಯಲ್ಲಿ ಕುತೂಹಲ ಕೆರಳಿಸಿದೆ.