ಗನ್ ಮ್ಯಾನ್ ಮದುವೆಯಲ್ಲಿ ಭಾಗಿಯಾದ ಸ್ಯಾಂಡಲ್ವುಡ್ ಯುವರಾಜ ನಿಖಿಲ್
ಕನ್ನಡ ಚಿತ್ರರಂಗದ ಯುವರಾಜ ನಿಖಿಲ್ ಕುಮಾರಸ್ವಾಮಿ ತಮ್ಮ ಗನ್ ಮ್ಯಾನ್ ಉಮೇಶ್ ಮದುವೆಯಲ್ಲಿ ಭಾಗಿಯಾಗಲು ಚಿತ್ರದ ಚಿತ್ರೀಕರಣ ಮುಂದೂಡುವ ಮೂಲಕ ತಮ್ಮ ಜೊತೆ ಇರುವ ಮಂದಿಯನ್ನು ಖುಷಿ ಪಡಿಸುವ ಕೆಲಸ ಮಾಡುವ ಮೂಲಕ ದೊಡ್ಡತನ ಮೆರೆದಿದ್ದಾರೆ.
ಲೈಕಾ ಸಂಸ್ಥೆಯಲ್ಲಿ ಅದ್ದೂರಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಇನ್ನೂ ಹೆಸರಿಡದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಿಖಿಲ್ ಅವರು ಗನ್ ಮ್ಯಾನ್ ಮದುವೆಯಲ್ಲಿ ಪಾಲ್ಗೊಂಡು ದಂಪತಿಗೆ ಶುಭ ಹಾರೈಸಿದ್ದಾರೆ.
ಇದೇ ವೇಳೆ ತಮ್ಮ ಪಕ್ಷದ ಜೆಡಿಎಸ್‍ನ ಹಿರಿಯ ನಾಯಕ ಹಾಗು ಮಾಜಿ ಸಚಿವ ಬಂಡೆಪ್ಪ ಕಾಂಶಪೂರ್ ಅವರ ನಿವಾಸಕ್ಕೆ ಭೇಟಿ ನೀಡಿ ಸಮಾಲೋಚನೆ ನಡೆಸಿದ್ದಾರೆ.
ಬಳಿಕ ಬಂಡೆಪ್ಪ ಕಾಂಶಫೂರ್ ಅವರ ಜೊತೆ ಬೀದರ್ ಗೆ ಭೇಟಿಕೊಟ್ಟಾಗ ಬೀದರ್ ಕೋಟೆ ಸುತ್ತಾಡಿ ಖುಷಿ ಪಟ್ಟ ಸ್ಯಾಂಡಲ್ ವುಡ್ ಯುವರಾಜ ಎಲ್ಲರೊಂದಿಗೆ ಸಂತಸ ಹಂಚಿಕೊಂಡಿದ್ದಾರೆ
ಬೀದರ್ ಕೋಟೆಯಲ್ಲಿ ನಿಖಿಲ್ ಕಂಡು ಸೆಲ್ಫಿಗಾಗಿ ಮುಗಿಬಿದ್ದ ಪ್ರವಾಸಿಗರು,ಅಭಿಮಾನಿಗಳಿಗೆ ನಿರಾಸೆ ಮೂಡಿಸದೆ ಎಲ್ಲರೊಂದಿಗೆ ಸೆಲ್ಪಿ ತೆಗೆದುಕೊಂಡು ಕೋಟೆಯ ಸೌಂದರ್ಯಕ್ಕೆ ಮನಸೋತು ಫೆÇೀಟೋ ಕ್ಲಿಕ್ಕಿಸಿಕೊಂಡು ಖುಷಿ ಪಟ್ಟಿದ್ದಾರೆ ಯುವರಾಜ ನಿಖಿಲ್.