Telugu actor Naga Chaitanya-Sai Pallavi pair reunited

ಮತ್ತೆ ಒಂದಾದ ತೆಲುಗು ನಟ ನಾಗಚೈತನ್ಯ – ಸಾಯಿಪಲ್ಲವಿ ಜೋಡಿ - CineNewsKannada.com

ಮತ್ತೆ ಒಂದಾದ ತೆಲುಗು ನಟ ನಾಗಚೈತನ್ಯ – ಸಾಯಿಪಲ್ಲವಿ ಜೋಡಿ

ಟಾಲಿವುಡ್ ಯುವ ಸಾಮ್ರಾಟ ನಾಗಚೈತನ್ಯ 23ನೇ ಸಿನಿಮಾಗೆ ನಾಯಕಿಯಾಗಿ ಸಾಯಿಪಲ್ಲವಿ ಆಯ್ಕೆಯಾಗಿದ್ದಾರೆ. ಲವ್ ಸ್ಟೋರಿ ಸಿನಿಮಾ ಮೂಲಕ ಮೋಡಿ ಮಾಡಿದ್ದ ಈ ಜೋಡಿ ಮತ್ತೆ ಒಂದಾಗುತ್ತಿರುವುದು ನಿರೀಕ್ಷೆ ಹೆಚ್ಚಿಸಿದೆ.

ಕಾರ್ತಿಕೇಯ-2 ನಂತಹ ಪ್ಯಾನ್ ಇಂಡಿಯಾ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟಿರುವ ಚಂದು ಮೊಂಡೇಟಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಸದ್ಯ ಎನ್ ಸಿ- 23 ಎಂಬ ತಾತ್ಕಾಲಿಕ ಟೈಟಲ್ ಇಡಲಾಗಿದೆ. ತೆಲುಗಿನ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಈ ಸಿನಿಮಾವನ್ನು ಪ್ರಸ್ತುತಪಡಿಸ್ತಿದ್ದು, ಬನ್ನಿ ವಾಸ್ ಗೀತಾ ಆಟ್ರ್ಸ್ ಬ್ಯಾನರ್ ನಡಿ ನಿರ್ಮಾಣ ಮಾಡುತ್ತಿದ್ದಾರೆ.

ಮೀನುಗಾರರ ಸಮುದಾಯದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ನಿರ್ಮಿಸುತ್ತಿರುವ ಪ್ಯಾನ್ ಇಂಡಿಯಾ ಚಿತ್ರ ಇದಾಗಿದೆ. ಇತ್ತೀಚೆಗೆ ನಾಯಕ ಚೈತನ್ಯ ಹಾಗೂ ನಿರ್ದೇಶಕ ಚಂದು ಮೊಂಡೇಟಿ ಆಂಧ್ರಪ್ರದೇಶದ ಶ್ರೀಕಾಕುಳಂಗೆ ಭೇಟಿ ನೀಡಿ, ಮೀನುಗಾರರ ಕುಟುಂಬಗಳ ಜೊತೆ ಕಾಲಕಳೆದಿದ್ದರು. ಮೀನುಗಾರರ ಸಂಸ್ಕೃತಿ, ನೆಲ, ಭಾಷೆ, ಜೀವನಶೈಲಿಯ ಬಗ್ಗೆ ಕೇಳಿ ತಿಳಿದುಕೊಂಡಿದ್ದರು. ಸದ್ಯ ಎನ್ ಸಿ-23 ಸಿನಿಮಾ ಪ್ರೀ ಪೆÇ್ರಡಕ್ಷನ್ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಇಳಿಯುತ್ತಿದೆ.

ಲವ್ ಸ್ಟೋರಿ ಸಿನಿಮಾದಲ್ಲಿ ಸಾಯಿಪಲ್ಲವಿ ಹಾಗೂ ನಾಗಚೈತನ್ಯ ಜೋಡಿಯ ಕೆಮಿಸ್ಟ್ರೀ ಸಖತ್ ವರ್ಕೌಟ್ ಆಗಿತ್ತು. ತೆರೆಮೇಲೆ ಮ್ಯಾಜಿಕ್ ಮಾಡಿದ್ದ ಚೈ ಮತ್ತು ಮಲರ್ ಬ್ಯೂಟಿ ಮತ್ತೊಮ್ಮೆ ಕೈ ಜೋಡಿಸಿರುವುದು ಅಭಿಮಾನಿಗಳಿಗೆ ಖುಷಿಕೊಟ್ಟಿದೆ. ಬಹಳ ಅದ್ಧೂರಿಯಾಗಿ ನಿರ್ಮಾಣವಾಗ್ತಿರುವ ಈ ಸಿನಿಮಾದ ಉಳಿದ ತಾರಾಬಳಗ ಹಾಗೂ ತಾಂತ್ರಿಕವರ್ಗದ ಬಗ್ಗೆ ಶೀಘ್ರದಲ್ಲಿಯೇ ಅಪ್ ಡೇಟ್ ನೀಡಲಿದೆ ಚಿತ್ರತಂಡ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin