Interviw actress Asiya Firdose “ದ್ವಂದ್ವ “ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿ ಆಸಿಯಾ ಫಿರ್ದೋಸ್

ಮಾಡಲಿಂಗ್‍ಗೂ ಬಣ್ಣದ ನಂಟಿಗೂ ಒಂದಕ್ಕೊಂದು ಬಿಟ್ಟಿರಲಾರದ ನಂಟು. ಮಾಡಲಿಂಗ್‍ನಿಂದ ಬಂದು ಬಣ್ಣದ ಜಗತ್ತಿನಲ್ಲಿ ಯಶಸ್ಸು ಪಡೆಯುತ್ತಿರುವ ನಟಿಯರ ಸಾಲಿಗೆ ಹೊಸ ಸೇರ್ಪಡೆ ನಟಿ ಆಸಿಯಾ ಫಿರ್ದೋಸ್.

ಯಾರೂ ಈ ಆಸಿಯಾ ಫಿರ್ಧೋಸ್ ಎನ್ನುವ ಮಂದಿಗೆ ಥಟ್ಟನೆ ನೆನಪಾಗುವುದು “ಕಿರುತೆರೆಯಲ್ಲಿ ಮೂಡಿ ಬಂದ “ಕನ್ಯಾಕುಮಾರಿ” ಧಾರಾವಾಹಿಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡು ಅಲ್ಪ ಅವಧಿಯಲ್ಲಿಯೇ ಎಲ್ಲರ ಮನ ಗೆದ್ದ ಪ್ರತಿಭಾನ್ವಿತ ನಟಿ ಈಕೆ.
ಧಾರಾವಾಹಿ ಸಂಚಿಕೆ ಹೆಚ್ಚಾದಂತೆಲ್ಲಾ ತನ್ನ ಅಭಿನಯದಿಂದ ಎಲ್ಲರ ಮನೆ ಮಾತಾದ ಪ್ರತಿಭಾನ್ವಿತ ನಟಿ. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಮೊದಲ ಪ್ರಯತ್ನದಲ್ಲಿಯೇ ಕಿರುತೆರೆಯಲ್ಲಿ ಮೋಡಿ ಮಾಡಿದ್ದಾರೆ. ಇದರ ಬೆನ್ನಲೇ ಹಿರಿತೆರೆಗೂ ಕಾಲಿಟ್ಟು ಚಿತ್ರರಂಗದಲ್ಲಿ ಉತ್ತಮ ನಟಿ ಎನ್ನುವ ಪ್ರಶಂಸೆ ಪಡೆಯುವ ನಿಟ್ಟಿನಲ್ಲಿ ಹೆಜ್ಜೆ ಹಾಕಿದ್ದಾರೆ.

ದ್ವಂದ್ವ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಸಿನಿಮಾದಲ್ಲಿಯೂ ನಾಯಕಿಯಾಗಿದ್ದಾರೆ. ಕಿರುತೆರೆಯಲ್ಲಿ ಸಿಕ್ಕ ಯಶಸ್ಸನ್ನು ಸಿನಿಮಾದಲ್ಲಿಯೂ ಪಡೆಯುವ ಹಂಬಲ ಮತ್ತು ಕನಸು ಆಸಿಯಾ ಫಿರ್ದೋಸ್ ಅವರದು.

ಈ ವೇಳೆ ಮಾತಿಗೆ ಸಿಕ್ಕ ನಟಿ ಆಸಿಯಾ ಫಿರ್ದೋಸ್, ಮಾಡಲಿಂಗ್‍ನಲ್ಲಿ ತೊಡಗಿಸಿಕೊಂಡಿದ್ದೆ. ಆಗ ಸಿಕ್ಕ ಅವಕಾಶವೇ ಕಿರುತೆರೆಯಲ್ಲಿ ಮೂಡಿ ಬಂದ ಧಾರಾವಾಹಿ “ ಕನ್ಯಾಕುಮಾರಿ”. ಧಾರಾವಾಹಿ ಕಡಿಮೆ ದಿನದಲ್ಲಿಯೇ ಹೆಚ್ಚು ಜನಮನ್ನಣೆ ತಂದುಕೊಟ್ಟಿತು.ಜೊತೆಗೆ ನಾಯಕಿಯಾಗಿ ತಮ್ಮ ಪ್ರತಿಭೆಯನ್ನು ಸಾಬೀತು ಪಡಿಸಲು ಸಹಕಾರಿಯಾಯಿತು. ಧಾರಾವಾಹಿ ರಾತ್ರಿ 10 ಗಂಟೆಗೆ ಪ್ರಸಾರ ವಾಗುತ್ತಿದ್ದರೂ ಹೆಚ್ಚು ಜನರಿಂದ ಮನ್ನಣೆದ ಗಳಿಸಿತ್ತು ಆ ನಂತರ 10.30ಕ್ಕೆ ಸಮಯ ಬದಲಾದಾಗಲೂ ಜನರಿಂದ ಪ್ರಶಂಸೆ ಸಿಕ್ಕಿತು.
ಬಿಗ್ ಬಾಸ್ ರಿಯಾಲಿಟಿ ಶೋ ಆರಂಭವಾಗಬೇಕಾಗಿದ್ದ ಹಿನ್ನೆಲೆಯಲ್ಲಿ ಧಾರಾವಾಹಿ ಜನಪ್ರಿಯವಾಗಿದ್ದ ಹಿನ್ನೆಲೆಯಲ್ಲ ಬಿಗ್ ಬಾಸ್‍ಗೆ ಸಮಯ ನೀಡಬೇಕಾದ ಹಿನ್ನೆಲೆಯಲ್ಲಿ ನಮ್ಮ ಧಾರಾವಾಹಿಯನ್ನು ನಿಲ್ಲಿಸಲಾಯಿತು. ಆನಂತರ ಅನೇಕ ಧಾರಾವಾಹಿಗಳಿಂದಲೂ ಅವಕಾಶ ಬಂದವು.

ಈ ನಡುವೆ ದ್ವಂದ್ವ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದೆ.ಈ ಚಿತ್ರದಲ್ಲಿ ನನ್ನದು ವಿಭಿನ್ನ ಪಾತ್ರ. ಹೈಪರ್‍ಟೈಮಿಸಿಯಾ ಖಾಯಿಲೆ ಇರುವ ಹುಡುಗಿಯು ಒಂದು ಸಲ ಏನನ್ನಾದರೂ ನೋಡಿದರೆ 10-20 ವರ್ಷದ ಜ್ಘಾಪಕ ಇರುವ ಶಕ್ತಿ ಹೊಂದಿರುವ ಪಾತ್ರ. ವಿಭಿನ್ನವಾಗಿ ಮೂಡಿ ಬಂದಿದೆ ಎಂದರು.
ಈ ನಡುವೆ ಕೋಮಲ್ ಸಾರ್ ಅವರ ಜೊತೆ “ ಕಾಲಾಯ ನಮ:” ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದೇನೆ. ಆ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದೆ. ಈ ಚಿತ್ರದ ಬಳಿಕ ಮತ್ತಷ್ಟು ಅವಕಾಶಗಳು ಚಿತ್ರರಂಗದಲ್ಲಿ ಬರಬಹುದು ಎನ್ನುವ ವಿಶ್ವಾಸ ನಟಿ ಆಸಿಯಾ ಫಿರ್ದೋಸ್ ಅವರದರು.