Twelfth century Basavanna's avatars "Sharanara Shakti" film release outfit

ಹನ್ನೆರಡನೆ ಶತಮಾನ ಬಸವಣ್ಣನವರ ಅವತಾರಗಳ “ಶರಣರ ಶಕ್ತಿ” ಚಿತ್ರ ಬಿಡುಗಡೆ ಸಜ್ಜು - CineNewsKannada.com

ಹನ್ನೆರಡನೆ ಶತಮಾನ ಬಸವಣ್ಣನವರ ಅವತಾರಗಳ “ಶರಣರ ಶಕ್ತಿ” ಚಿತ್ರ ಬಿಡುಗಡೆ ಸಜ್ಜು

ಹನ್ನೆರಡನೇ ಶತಮಾನದಲ್ಲಿ ಶರಣರು, ಅನುಭವ ಮಂಟಪ ಮತ್ತು ಬಸವಣ್ಣ ಎನ್ನುವುದು ಎಷ್ಟು ಆಕರ್ಷಕವಾಗಿತ್ತು. ಇಂತಹ ಅಂಶಗಳನ್ನು ಸಂಶೋಧನೆ ನಡೆಸಿ ‘ಶರಣರ ಶಕ್ತಿ’ ಎನ್ನುವ ಚಿತ್ರವೊಂದು ಪೋಸ್ಟ್ ಪ್ರೊಡಕ್ಷನ್ಸ್ ಕೆಲಸದಲ್ಲಿ ಬ್ಯುಸಿ ಇದೆ. ‘ತಡಿವ್ಯರ ನೋಡು’ ಎಂಬ ಅಡಿಬರಹವಿದೆ.

‘ಬಸವ ಜಯಂತಿ’ ಮುನ್ನ ದಿನದಂದು ಹಾಡು ಬಿಡುಗಡೆ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ಎಲ್ಲಾ ಕಲಾವಿದರುಗಳು ಪಾತ್ರಧಾರಿಗಳಾಗಿ ವೇದಿಕೆ ಹಂಚಿಕೊಂಡಿದ್ದು ವಿಶೇಷವಾಗಿತ್ತು.

ಶ್ರೀಷ ಫಿಲಂಸ್ ಅಡಿಯಲ್ಲಿ ಆರಾಧನಾ ಕುಲಕರ್ಣಿ ಬಂಡವಾಳ ಹೂಡುವ ಜತೆಗೆ ಅಕ್ಕ ನಾಗಮ್ಮನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಡಾ.ರಾಜ್‍ಕುಮಾರ್ ಸಂಸ್ಥೆಯ ವಜ್ರೇಶ್ವರಿ ಕಂಬೈನ್ಸ್‍ದಲ್ಲಿ ಕೆಲಸ ಮಾಡಿರುವ ದಿಲೀಪ್ ಶರ್ಮ ಸಿನಿಮಾಕ್ಕೆ ರಚನೆ,ಚಿತ್ರಕಥೆ,ಸಂಭಾಷಣೆ, ನಿರ್ದೇಶನ ಅಲ್ಲದೆ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಹಿರಿಯ ಸಾಹಿತಿ, ಜಾನಪದ ವಿದ್ವಾಂಸ, ಅನುಭವ ಮಂಟಪದ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಮಾತನಾಡಿ ಬಸವಣ್ಣ ಇಂದಿಗೂ ಯಾಕೆ ಪ್ರಸ್ತುತ ಎಂಬುದನ್ನು ಇದರಲ್ಲಿ ನಿರೂಪಣೆ ಮಾಡಿದ್ದಾರೆಂಬುದು ತಿಳಿದು ಬಂದಿದೆ. ಅವರು ಧಾರ್ಮಿಕ, ಶೈಕ್ಷಣಿಕ, ಸಾಂಸ್ಕ್ರತಿಕ, ಸಾಮಾಜಿಕ ಎಲ್ಲಾ ಕ್ಷೇತ್ರಗಳಲ್ಲಿ ಹೆಸರು ಮಾಡಿದವರು. ಬಸವಣ್ಣನವರು ಸಾರ್ವಕಾಲಿಕವಾದವರು. ಸರ್ಕಾರವು ನೂತನ ಅನುಭವ ಮಂಟಪ್ಪಕ್ಕೆ ಹಣ ಮಂಜೂರು ಮಾಡಿದೆ. ಕೆಲಸಗಳು ಸದ್ಯದಲ್ಲೆ ಶುರುವಾಗಲಿದೆ. ಚಿತ್ರವು ಎಲ್ಲರಿಗೂ ತಲುಪಲಿ ಎಂದರು.

ನಮ್ಮ ಮನೆಯ ಪಕ್ಕದಲ್ಲಿ ಸ್ಟಾರ್ ನಟನ ಮನೆ ಇದೆ, ಅವರ ಹುಟ್ಟುಹಬ್ಬದಂದು ಪಟಾಕಿ ಸಿಡಿಸಿ ನನ್ನ ಕಿವಿಗೆ ಹಾನಿಯಾಗಿ ಅಷ್ಟಾಗಿ ಕೇಳಿಸುವುದಿಲ್ಲ ಎಂದರು.

ನಿರ್ದೇಶಕ ದಿಲೀಪ್ ಶರ್ಮಾ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿ ರಾಜ್ಯ,ದೇಶ, ವಿದೇಶಗಳಿಂದ ಬಸವಣ್ಣನವರನ್ನು ಹುಡುಕಿಕೊಂಡು ಬಂದಿದ್ದರಿಂದಲೇ ವಿಶ್ವಖ್ಯಾತಿಗೊಂಡರು. ಅವರು ಉತ್ತರ ಕರ್ನಾಟಕ ಭಾಗದವರು ಎಂಬುದು ಹೆಮ್ಮೆಯ ವಿಷಯವಾಗಿದೆ. ಯಾವ ಕಾರಣಕ್ಕೆ ಎಲ್ಲಾ ಶರಣರು ಅನುಭವ ಮಂಟಪಕ್ಕೆ ಬಂದರು. ಇಲ್ಲಿ ಮಹಾನ್ ಪುರುಷನ ಅವತಾರ ಹೇಗಿತ್ತು. ಇಲ್ಲಿಗೆ ಬಂದವರು ಮೂರು ದಿವಸದ ನಂತರ ಕಾಯಕ ಹುಡುಕುವಂತೆ ಮಾಡುತ್ತದೆ ಎಂದರು

ಬಸವಣ್ಣನವರ ಕಲ್ಯಾಣ ಕ್ರಾಂತಿ, ವಚನ ಸಾಹಿತ್ಯ ರಕ್ಷಣೆ ಮಾಡಲು ಹೇಗೆ ಹೋರಾಡಿದರು. ಎಲ್ಲೆಲ್ಲಿ ವಚನಗಳನ್ನು ಬಚ್ಚಿಟ್ಟರು. ಅದನ್ನು ಜನರಿಗೆ ಯಾವ ರೀತಿ ಹರಡಿದರು. ವೇಶ್ಯೆ ಸಂಕವ್ವ ಮಹಾಶರಣೆಯಾಗಿದ್ದು. ತಳವಾರು ಕಾಮಿದೇವ ಶರಣರು ಯಾಕೆ ಕಲ್ಯಾಣಕ್ಕೆ ಬಂದರು. ಚನ್ನಬಸವಣ್ಣನ ಸಾರಥ್ಯದಲ್ಲಿ ಉಳಿವೆ ಮಂಟಪ. ಶರಣರನ್ನು ತಡೆ ಹಿಡಿದರೆ ಏನಾಗುತ್ತದೆ. ಇಂತಹ ಇನ್ನು ಹಲವಾರು ತಿಳಿಯದ ಮಾಹಿತಿಗಳು ಚಿತ್ರದಲ್ಲಿ ನೋಡಬಹುದಾಗಿದೆ ಎಂದು ಹೇಳಿಕೊಂಡರು.

ಬಸವಣ್ಣನಾಗಿ ಮಂಜುನಾಥಗೌಡ ಪಾಟೀಲ್, ನೀಲಾಂಬಿಕೆಯಾಗಿ ಸಂಗೀತ ಮಡ್ಲೂರು, ಶೀಲವಂತನಾಗಿ ವಿಶ್ವರಾಜ್ ರಾಜ್‍ಗುರು, ಚನ್ನಬಸವಣ್ಣನಾಗಿ ಧ್ರುವಶರ್ಮ, ಉಳಿದಂತೆ ರಮೇಶ್‍ಪಂಡಿತ್, ಸಾಚಿಜೈನ್, ವಿನೋದ್ ದಂಡಿನ, ರಾಮಕೃಷ್ಣ ದೊಡ್ಡಮನಿ, ಅಬ್ದುಲ್‍ಲತೀಫ್ ಹಾಗೂ ಆ ಭಾಗದ 140 ರಂಗಭೂಮಿ ಕಲಾವಿದರುಗಳಿಗೆ ಅವಕಾಶ ಮಾಡಿಕೊಡಲಾಗಿದೆ.

ಸಂಗೀತ ವಿನುಮನಸು, ಛಾಯಾಗ್ರಹಣ ಮುಂಜಾನೆ ಮಂಜು, ಸಂಕಲನ ಮಹಾಂತೇಶ್.ಆರ್ ನಿರ್ವಹಿಸಿದ್ದಾರೆ. ಹುಬ್ಬಳ್ಳಿ ಸುತ್ತಮುತ್ತ ನಲವತ್ತು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.

ಋಷಿಕುಮಾರ ಸ್ವಾಮೀಜಿ, ‘ಹಲಗಿ’ ವಾದ್ಯ ಬಾರಿಸುವುದರಲ್ಲಿ ಹೆಸರು ಮಾಡಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿರುವ ಮುನಿವೆಂಕಟಪ್ಪ ಈ ಸಮಯದಲ್ಲಿ ಉಪಸ್ಥಿತರಿದ್ದು ಚಿತ್ರದ ಬಗ್ಗೆ ಮೆಚ್ಚುಗೆಯ ಮಾತನಾಡಿದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin