“ದ ರೂಲರ್ಸ್” ಚಿತ್ರಕ್ಕೆ ಅಭೂತಪೂರ್ವ ಬೆಂಬಲ
ಸ್ಯಾಂಡಲ್ ವುಡ್ ಅಂಗಳದಲ್ಲಿ ಸದ್ದಿಲ್ಲದೇ ಸಿದ್ದವಾಗಿರುವ ಹೊಸ ಚಿತ್ರ “ದ ರೂಲರ್ಸ್” ಟೈಟಲ್ ನಡಿಯಲ್ಲಿ ಸಂವಿಧಾನದ ಶಕ್ತಿ ಎನ್ನುವ ಅಡಿ ಬರಹ ಹೊಂದಿದೆ.ಟೀಸರ್ ಹೊಸ ವರ್ಷದ ಮೊದಲ ದಿನ ಎ2 ಮ್ಯೂಸಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿ ಬಾರಿ ಸದ್ದು ಮಾಡಿದೆ.
ನಾಲ್ಕೇ ದಿನದಲ್ಲೇ ಒಂದು ಮಿಲಿಯನ್ ಜನರನ್ನ ಈ ಟೀಸರ್ ಸೆಳೆದಿದ್ದು, ರಾಜ್ಯದಾದ್ಯಂತ ಸಿನಿಪ್ರಿಯರಿಂದ ಪ್ರಶಂಸೆಯ ಪ್ರತಿಕ್ರಿಯೆಗಳು ಮತ್ತು ಅಭಿನಂದನೆಯ ಕಮೆಂಟ್ ಗಳು ಬಂದಿವೆ. ಈ ವಿಚಾರವನ್ನು ಚಿತ್ರತಂಡ ಹಂಚಿಕೊಂಡಿದೆ.
ದ ರೂಲರ್ಸ್ ನೈಜ ಘಟನೆಗಳನ್ನಾಧರಿಸಿ ಮಾಡಿರೋ ಚಿತ್ರ. ಕೋಲಾರ ಜಿಲ್ಲೆಯಲ್ಲಿ ನಡೆದಿರೋ,ನಡೆಯುತ್ತಿರೋ ಘಟನಾವಳಿಗಳನ್ನಾಧರಿಸಿ ಮಾಡಿರೋ ಕಥೆ. ಸಂವಿಧಾನವೊಂದು ಆಸರೆ ಮತ್ತು ಶಕ್ತಿ ಎಂಥಹದ್ದು, ಅದು ಭಾರತೀಯ ಪ್ರಜ್ಞೆಗೆ ಕೊಟ್ಟಿರೋ ಶಕ್ತಿ ಎಂಥಹದ್ದು ಅನ್ನೋ ವಿಚಾರವನ್ನ ಮೂಲವಾಗಿಸಿಕೊಂಡು ದ ರೂಲರ್ಸ್ ಚಿತ್ರ ಮಾಡಲಾಗಿದೆ.
ಇಲ್ಲಿ ಮೇಲೂ ಕೀಳು ಅನ್ನೋ ಸಮುದಾಯಗಳ ಸಂಘರ್ಷದಿ ಮರೆಯಾದ ಮಾನವೀಯತೆಯನ್ನ ಒಂದು ಕಡೆ ಬಂಬಿಸಿದ್ರೆ, ಮತ್ತೊಂದು ಕಡೆ ಸಂವಿಧಾನ ಕೊಟ್ಟಿರೋ ಸಮಾನತೆಯ ಹಕ್ಕನ್ನ ಪ್ರತಿಪಾದಿಸೋ, ಅದ್ರ ಶಕ್ತಿಯನ್ನ ಪ್ರದರ್ಶಿಸೋ ಮತ್ತೊಂದು ಮಜಲನ್ನ ಅನಾವರಣಗೊಳಿಸಿದ್ದಾರಂತೆ.
ದ ರೂರಲ್ಸ್ ಹೆಸರೇ ಸೂಚಿಸುವಂತೆ ದ ಅಂದ್ರೆ ದಲಿತ ಇದಕ್ಕೆ ರೂಲಸ್ರ್ಸ್ ಅಂತ ಹೆಸರಿಟ್ಟಿರೋದ್ರ ಹಿಂದೆ ವಿಚಾರ ಇದೆಯಂತೆ. ಈ 5ಜಿ ಜಮಾನದಲ್ಲೂ ಇನ್ನೂ ಜಾತಿ ಅನ್ನೋ ಪಿಡುಗು ಎಷ್ಟರ ಮಟ್ಟಿಗೆ ಶೀತಲವಾಗಿ ಸಮಾದೊಳಗಿದೆ. ಮತ್ತು ಅದರ ಪರಿಣಾಯ ಏನಾಗ್ತಿದೆ ಅನ್ನೋದನ್ನ ಈ ಚಿತ್ರದಲ್ಲಿ ಹೇಳಲಾಗಿದೆಯಂತೆ.
ದ ರೂಲಸ್ರ್ಸ್ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನ ಬರೆದಿರೋದು, ಕೋಲಾರದ ಡಾ. ಕೆ.ಎಮ್ ಸಂದೇಶ್. ಡಾ. ಬಿ.ಆರ್ ಅಂಬೇಡ್ಕರ್ ತತ್ವ ಸಿದ್ದಾಂತವನ್ನ ಮೈಗೂಡಿಸಿಕೊಂಡು, ವರ್ಷಗಳಿಂದ ಸಾಮಾಜಿಕ ಸಮಾನತೆಯಾಗಿ 300ಕ್ಕೂ ಹೆಚ್ಚು ಹೋರಾಟ ಹಾಗೂ 150ಕ್ಕೂ ಹೆಚ್ಚು ಅಂತರ್ಜಾತಿ ವಿವಾಹಗಳನ್ನ ಮಾಡಿಸಿದ್ದಾರೆ.