ಡಿಎಸ್‍ಎಸ್‍ಗೆ ವಸಿಷ್ಠಸಿಂಹ, ತಮಿಳು ನಿರ್ದೇಶಕ ಪಾ.ರಂಜಿತ್ ಸಾಥ್
ಎ.ಆರ್.ಸಾಯಿರಾಮ್ ಕಥೆ,ಚಿತ್ರಕಥೆ, ಸಂಭಾಷಣೆ ಹಾಗೂ ಗೀತರಚನೆ ಮಾಡಿ ಆಕ್ಷನ್ ಕಟ್ ಹೇಳಿರುವ ವಿನೂತನ ಶೀರ್ಷಿಕೆ ಹೊಂದಿರುವ ‘ಧೈರ್ಯಂ ಸರ್ವತ್ರ ಸಾಧನಂ’ -ಡಿಎಸ್‍ಎಸ್ ಚಿತ್ರದ ಟೀಸರ್‍ನ್ನು ನಟ ವಸಿಷ್ಠಸಿಂಹ ಅನಾವರಣಗೊಳಿಸಿ ಶುಭ ಹಾರೈಸಿದ್ದಾರೆ.
ಚಿತ್ರದ ದೃಶ್ಯದಲ್ಲಿ ಮಲಗಿರುವ ವ್ಯಕ್ತಿಯ ಮೇಲೆ, ಒಬ್ಬರ ಮೇಲೊಬ್ಬರು ಒಟ್ಟು ಮೂರು ಜನ ನಿಂತಿರುವುದು ಕುತೂಹಲ ಕೆರಳಿಸಿದೆ. ಇದನ್ನು ತಿಳಿಯಲು ಚಿತ್ರಮಂದಿರಕ್ಕೆ ತಾವುಗಳು ಬರಬೇಕು. ಒಳ್ಳೆ ಸಂದೇಶದೊಂದಿಗೆ ಸಮಾಜದಲ್ಲಿ ನಡೆದಿರತಕ್ಕಂತ ವಿಷಯಗಳನ್ನು ಪರೆದೆ ಮೇಲೆ ತೋರಿಸಿರುವುದು ಕಂಡು ಬಂದಿದೆ. ಇಂತಹ ಸಿನಿಮಾಗಳು ಜನರಿಗೆ ತಲುಪಬೇಕ ಎಂದರು. ಅಲ್ಲದೆ ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ ನಿರ್ದೇಶನ ಮಾಡಿರುವ ಪಾ.ರಂಜಿತ್ ಡಿಜಿಟಲ್‍ನಲ್ಲಿ ಟೀಸರ್ ಬಿಡುಗಡೆ ಮಾಡಿ, ಚಿತ್ರ ನೋಡಲು ನಾನು ಉತ್ಸುಕನಾಗಿದ್ದೇನೆಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಟೀಸರ್ ಹೊರಬಂದ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿ ಸಂಚಲನ ಮೂಡಿಸಿರುವುದು ತಂಡಕ್ಕೆ ಸಂತಸ ತಂದಿದೆ. ಎಲ್ಲಿಯೂ ಗ್ರಾಫಿಕ್ಸ್ ಬಳಸದೆ ನೈಜತೆಯಲ್ಲಿ ಶೂಟ್ ಮಾಡಿರುವುದು ವಿಶೇಷ. ತುಣುಕುಗಳಲ್ಲಿ ಕೆಲವೊಂದು ಅಂಶಗಳನ್ನು ಗಮನಿಸಿದಾಗ ಇದೊಂದು ಶೋಷಿತರ ಸಿನಿಮಾ, ಬಡವ ಶ್ರೀಮಂತ, ಅಪ್ಪ ಮಗನ ಬಾಂಧ್ಯವ, ಅಸ್ತಿತ್ವ, ಜ್ಘಾನ ಶಕ್ತಿ ಹೀಗೆ ಎಲ್ಲದರ ಸಂಕೇತ ಇರಲಿದೆಯಾ ಎನ್ನುವ ಬಗ್ಗೆ ಪ್ರಶ್ನೆ ಮೂಡುತ್ತದೆ.
ಎ.ಪಿ. ಪ್ರೊಡಕ್ಷನ್ಸ್ ಅಡಿಯಲ್ಲಿ ಉದ್ಯಮಿ ಆನಂದ್ ಬಾಬು.ಜಿ ನಿರ್ಮಾಣ ಮಾಡಿದ್ದಾರೆ. ನಾಯಕನಾಗಿ ವಿವಾನ್.ಕೆ.ಕೆ. ನಾಯಕಿಯಾಗಿ ಅನುಷಾರೈ. ವಿಶಿಷ್ಟ ಪಾತ್ರಗಳಲ್ಲಿ ಯಶ್‍ಶೆಟ್ಟಿ, ಬಲರಾಜವಾಡಿ, ಚಕ್ರವರ್ತಿಚಂದ್ರಚೂಡ್, ವರ್ಧನ್, ಪ್ರದೀಪ್‍ಪೂಜಾರಿ ರಾಮ್‍ಪವನ್. ಉಳಿದಂತೆ ಪದ್ಮಿನಿಶೆಟ್ಟಿ, ಅರ್ಜುನ್‍ಪಾಳೆಗಾರ, ರಾಮ್‍ನಾಯಕ್, ಹೊಂಗಿರಣ ಚಂದ್ರು ಮತ್ತು ರಂಗಭೂಮಿ ಕಲಾವಿದರುಗಳಿಗೆ ಅವಕಾಶ ಮಾಡಿಕೊಡಲಾಗಿದೆ.
ಹೃದಯಶಿವ, ಕಿನ್ನಾಳ್‍ರಾಜ್, ಅರಸುಅಂತಾರೆ ಸಾಹಿತ್ಯದ ಐದು ಹಾಡುಗಳಿಗೆ ಜ್ಯೂಡಾಸ್ಯಾಂಡಿ ಸಂಗೀತ ಸಂಯೋಜಿಸಿದ್ದಾರೆ. ಭಾರತದ ಎಲ್ಲಾ ಭಾಷೆಯ ಸೂಪರ್ ಹಿಟ್ ಚಿತ್ರಗಳಿಗೆ ಕೆಲಸ ಮಾಡಿರುವ ರವಿಕುಮಾರ್ ಸನಾ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ಕುಂಗುಫು ಚಂದ್ರು ಸಾಹಸ, ಕ್ಯಾಪ್ಟನ್ ಕಿಶೋರ್ ನೃತ್ಯ ಇರಲಿದೆ. ತುಮಕೂರು, ಕೊರಟಗೆರೆ, ದೇವರಾಯನದುರ್ಗ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ತಾಂತ್ರಿಕತೆಯಲ್ಲಿ ಅದ್ದೂರಿತನ ಇರಲಿದ್ದು, ಈಗಾಗಲೇ ಪ್ರಚಾರ ಕಾರ್ಯ ಶುರು ಮಾಡಿಕೊಂಡಿದೆ. ಮುಂದಿನ ತಿಂಗಳು ತೆರೆಗೆ ತರಲು ತಂಡ ಯೋಜನೆ ರೂಪಿಸಿಕೊಂಡಿದೆ.