With Natural Star Nani Dixit Shetty shines in ``Dussehra''

ನ್ಯಾಚುರಲ್ ಸ್ಟಾರ್ ನಾನಿ ಜೊತೆ
ದೀಕ್ಷಿತ್ ಶೆಟ್ಟಿ `ದಸರಾ’ ಚಿತ್ರದಲ್ಲಿ ಮಿಂಚು - CineNewsKannada.com

ನ್ಯಾಚುರಲ್ ಸ್ಟಾರ್ ನಾನಿ ಜೊತೆದೀಕ್ಷಿತ್ ಶೆಟ್ಟಿ `ದಸರಾ’ ಚಿತ್ರದಲ್ಲಿ ಮಿಂಚು

‘ದಿಯಾ’ ಸಿನಿಮಾ ಮೂಲಕ ಖ್ಯಾತಿ ಗಳಿಸಿರುವ ದೀಕ್ಷಿತ್ ಶೆಟ್ಟಿ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಬೆಳ್ಳಿ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ‘

DIxith Shetty

ದಿಯಾ’ ಸಿನಿಮಾದಲ್ಲಿ ಸಿಂಪಲ್ ಹುಡುಗನ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದ ದೀಕ್ಷಿತ್ ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ‘ದಸರಾ’ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ಇದೇ ಮಾರ್ಚ್ 30ರಂದು ‘ದಸರಾ’ ವರ್ಲ್ಡ್ ವೈಡ್ ಬಿಡುಗಡೆಯಾಗುತ್ತಿದ್ದು, ಸೂರಿ ಪಾತ್ರದ ಮೂಲಕ ದೀಕ್ಷಿತ್ ಶೆಟ್ಟಿ ತೆರೆ ಮೇಲೆ ಬರ್ತಿದ್ದಾರೆ.

ಶ್ರೀಕಾಂತ್ ಒಡೆಲಾ ನಿರ್ದೇಶನದಲ್ಲಿ ನ್ಯಾಚುರಲ್ ಸ್ಟಾರ್ ನಾನಿ, ಕೀರ್ತಿ ಸುರೇಶ್ ಅಭಿನಯದ ‘ದಸರಾ’ ಸಖತ್ ಬಝ್ ಕ್ರಿಯೇಟ್ ಮಾಡಿದೆ. ಟೀಸರ್ ಮೂಲಕ ವರ್ಲ್ಡ್ ವೈಡ್ ಸಖತ್ ಸೌಂಡ್ ಮಾಡಿರುವ ಈ ಚಿತ್ರ ನಾನಿ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಪ್ರಾಜೆಕ್ಟ್. ಈ ಚಿತ್ರದಲ್ಲಿ ಕನ್ನಡದ ನಟ ದೀಕ್ಷಿತ್ ಶೆಟ್ಟಿ ನ್ಯಾಚುರಲ್ ಸ್ಟಾರ್ ಜೊತೆ ಸ್ಕ್ರೀನ್ ಶೇರ್ ಮಾಡಿರೋದು ವಿಶೇಷ.

ನಾನಿ ಸರ್ ಪ್ರೊಡಕ್ಷನ್ ಹೌಸ್ ನಡಿ ನಿರ್ಮಾಣವಾದ ‘ಮೀಟ್ ಕ್ಯೂಟ್’ ವೆಬ್ ಸೀರೀಸ್ ನಲ್ಲಿ ನಟಿಸಿದ್ದೆ. ವೆಬ್ ಸೀರೀಸ್ ಸಹ ನಿರ್ದೇಶಕರಾದ ವಿನಯ್ ನನ್ನ ಅಭಿನಯ ನೋಡಿ ದಸರಾ ಸಿನಿಮಾಗೆ ರೆಫರ್ ಮಾಡಿದ್ರು. ನಾನಿ ಸರ್ ಕೂಡ ವೆಬ್ ಸೀರೀಸ್ ನಲ್ಲಿ ನನ್ನ ಅಭಿನಯ ನೋಡಿ ಮೆಚ್ಚಿಕೊಂಡಿದ್ರು ಇದ್ರಿಂದ ದಸರಾ ಸಿನಿಮಾದಲ್ಲಿ ನಟಿಸೋ ಅವಕಾಶ ಸಿಕ್ತು ಎನ್ನುತ್ತಾರೆ ದೀಕ್ಷಿತ್ ಶೆಟ್ಟಿ.

ಚಿತ್ರದಲ್ಲಿ ಸೂರಿ ಎಂಬ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದೇನೆ. ಇಡೀ ಸಿನಿಮಾದಲ್ಲಿ ಈ ಪಾತ್ರ ಕ್ಯಾರಿಯಾಗುತ್ತೆ. ಹತ್ತು ತಿಂಗಳು ‘ದಸರಾ’ ಸಿನಿಮಾ ತಂಡದೊಂದಿಗೆ ಕೆಲಸ ಮಾಡಿದ್ದೇನೆ. ಈ ಚಿತ್ರ ಅದ್ಭುತ ಅನುಭವ ನೀಡಿದೆ. ನಿರ್ದೇಶಕರ ಜೊತೆಗೆ ನಾನಿ ಸರ್ ಕೂಡ ನನ್ನ ಪಾತ್ರ ನಿರ್ವಹಿಸಲು ಒಂದಿಷ್ಟು ಸಲಹೆ ನೀಡುತ್ತಿದ್ರು ಎಂದು ತಮ್ಮ ಪಾತ್ರ ಹಾಗೂ ‘ದಸರಾ’ ತಂಡದ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ ದೀಕ್ಷಿತ್ ಶೆಟ್ಟಿ.

‘ದಿಯಾ’ ನಂತರ ದೀಕ್ಷಿತ್ ಶೆಟ್ಟಿ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದೇ ರೀತಿಯ ಕಥೆ, ಪಾತ್ರಕ್ಕೆ ಸೀಮಿತವಾಗದೇ ಅಳೆದು ತೂಗಿ ಸಿನಿಮಾವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ‘ಕೆಟಿಎಂ’ ಹಾಗೂ ‘ಬ್ಲಿಂಕ್’ ಸಿನಿಮಾಗಳು ಕನ್ನಡದಲ್ಲಿ ಬಿಡುಗಡೆಗೆ ರೆಡಿಯಾಗಿವೆ. ಅದಕ್ಕೂ ಮೊದಲು ‘ದಸರಾ’ ಮೂಲಕ ಸೂರಿ ಪಾತ್ರದಲ್ಲಿ ತೆರೆ ಮೇಲೆ ರಂಜಿಸಲು ರೆಡಿಯಾಗಿದ್ದಾರೆ ದೀಕ್ಷಿತ್ ಶೆಟ್ಟಿ.

ಪೂರ್ತಿಯಾಗಿ ಓದಿ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin