Actress Harshika Poonacha wedding in Virajpet on 23rd and 24th August

ಆಗಸ್ಟ್ 23 ಮತ್ತು 24 ರಂದು ವಿರಾಜಪೇಟೆಯಲ್ಲಿ ನಟಿ ಹರ್ಷಿಕಾ ಪೂಣಚ್ಚ ಮದುವೆ - CineNewsKannada.com

ಆಗಸ್ಟ್ 23 ಮತ್ತು 24 ರಂದು ವಿರಾಜಪೇಟೆಯಲ್ಲಿ ನಟಿ ಹರ್ಷಿಕಾ ಪೂಣಚ್ಚ ಮದುವೆ

ಕನ್ನಡ ಚಿತ್ರರಂಗದಲ್ಲಿ ಗ್ಲಾಮರ್ ಬೊಂಬೇ ಎಂದೇ ಗುರುತಿಸಿಕೊಂಡಿರುವ ಕೊಡಗಿನ ಬೆಡಗಿ ನಟಿ ಹರ್ಷಿಕಾ ಪೂಣಚ್ಚ ಇದೇ 23 ಮತ್ತು 24 ರಂದು ವಿರಾಜಪೇಟೆಯಲ್ಲಿ ಬಹುಕಾಲದ ಗೆಳೆಯ ಹಾಗು ನಟ ಭುವನ್ ಪೊನ್ನಣ್ಣ ಅವರನ್ನು ವರಿಸಲಿದ್ದಾರೆ.

ಹಲವು ವರ್ಷಗಳಿಂದ ಈ ಜೋಡಿ ಪರಸ್ಪರ ಪ್ರೀತಿಯಲ್ಲಿತ್ತು ಎನ್ನುವುದು ಚಿತ್ರರಂಗದ ಬಹುತೇಕರಿಗೆ ಗೊತ್ತಿದ್ದ ಸಂಗತಿ, ಇದೀಗ ಆ ಪ್ರೀತಿಗೆ ಮದುವೆ ಎನ್ನುವ ಅಧಿಕೃತ ಮುದ್ರೆ ಒಪ್ಪಲು ಈ ಜೋಡಿ ನಿರ್ದರಿಸಿದೆ ಇದೇ 23 ಮತ್ತು 24 ರಂದು ಮದುವೆಯಾಗುತ್ತಿರುವ ವಿಷಯವನ್ನು ನಟಿ ಹರ್ಷಿಕಾ ಪೂಣಚ್ಚ ಖಚಿತಪಡಿಸಿದ್ದು ಮದುವೆಗೆ ಬನ್ನಿ ಎಂದು ಆಪ್ತರು ಹಾಗು ಸ್ನೇಹಿತರಲ್ಲಿ ಮನವಿ ಮಾಡಿದ್ದಾರೆ.

ನಟಿ ಹರ್ಷಿಕಾ ಪೂಣಚ್ಚ ಹೇಳುವುದಕ್ಕೂ ಮುನ್ನ ಹಿರಿಯ ಕಲಾವಿದ ಸಾಧುಕೋಕಿಲ ಅವರು ಹರ್ಷಿಕಾ ಪೂಣಚ್ಚ ಮದುವೆಯಾಗುತ್ತಿದ್ದಾರೆ ಎನ್ನುವ ವಿಷಯ ಬಹಿರಂಗ ಪಡಿಸಿದರು. ಹೀಗಾಗಿ ಅನಿವಾರ್ಯವಾಗಿ ನಟಿ ಹರ್ಷಿಕಾ ಪೂಣಚ್ಚ ಮದುವೆ ದಿನಾಂಕವನ್ನು ಆಪ್ತರ ಜೊತೆ ಹಂಚಿಕೊಂಡು ಮದುವೆ ಆಹ್ವಾನಿಸಿದ್ದಾರೆ.

ಪಿಯುಸಿ ಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದ ನಟಿ ಹರ್ಷಿಕಾ ಪೂಣಚ್ಚ ಕಳೆದ 15 ವರ್ಷಗಳ ಅವಧಿಯಲ್ಲಿ ವಿಭಿನ್ನ ಚಿತ್ರಗಳಲ್ಲಿ ಸಿಕ್ಕ ಬೇರೆ ಬೇರೆ ಪಾತ್ರ ಮಾಡುವ ಮೂಲಕ ಗಮನ ಸೆಳೆದಿದ್ಧಾರೆ.

ಕಳೆದ 15 ವರ್ಷಗಳಿಂದ ಚಿತ್ರರಂಗದಲ್ಲಿದ್ದರೂ ಯಾವುದೇ ವಿವಾದಕ್ಕೆ ಆಸ್ಪದ ಮಾಡಿಕೊಡದೆ ತಾವಾಯಿತು ತಮ್ಮ ಕೆಲಸವಾಯಿತು ಎಂದು ಕೆಲಸದ ಮೇಲೆ ನಂಬಿಕೆ ಇಟ್ಟವರು. ಇದೀಗ ಹೊಸ ಬಾಳಿಗೆ ಹೆಜ್ಜೆ ಇಡುತ್ತಿದ್ದು ಮದುವೆಯ ನಂತರ ಚಿತ್ರರಂಗದಲ್ಲಿ ಮುಂದುವರಿಯುವುದು ಅಥವಾ ಬಿಡುವುದು ಪತಿಯೊಂದಿಗೆ ಚರ್ಚೆ ಮಾಡಿ ನಿರ್ದಾರ ಕೈಗೊಳ್ಳಲು ಮುಂದಾಗಿದ್ದಾರೆ.

ಕನ್ನಡದ ಜೊತೆ ಜೊತೆಗೆ ಬೋಜಪುರಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ನಟಿಸುವ ಮೂಲಕ ಕನ್ನಡದ ನಟಿಯರು ಎಲ್ಲಾ ಭಾಷೆಯಲ್ಲಿ ನಟಿಸಲು ಸಿದ್ದ ಎನ್ನುವುದನ್ನು ನಿರೂಪಿಸಿದ್ದಾರೆ. ಮದುವೆ ನಂತರ ಚಿತ್ರರಂಗದಲ್ಲಿ ಮುಂದುವರಿಯುತ್ತಾರಾ ಅಥವಾ ಇಲ್ಲವೇ ಎನ್ನುವುದನ್ನು ನಟಿ ಹರ್ಷಿಕಾ ಪೂಣಚ್ಚ ಸ್ಪಷ್ಟಪಡಿಸಬೇಕಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin