Acting with Bollywood actor Sanjay Dutt Unforgettable Experience: Yash Shetty

Exclusive Interview ಬಾಲಿವುಡ್ ನಟ ಸಂಜಯ್‍ದತ್ ಜೊತೆ ನಟನೆ ಮರೆಯಲಾಗದ ಅನುಭವ: ಯಶ್ ಶೆಟ್ಟಿ - CineNewsKannada.com

Exclusive Interview ಬಾಲಿವುಡ್ ನಟ ಸಂಜಯ್‍ದತ್ ಜೊತೆ ನಟನೆ ಮರೆಯಲಾಗದ ಅನುಭವ: ಯಶ್ ಶೆಟ್ಟಿ

ಕನ್ನಡ ಚಿತ್ರರಂಗದಲ್ಲಿ ಖಳನಾಯಕನಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಕಲಾವಿದ ಯಶ್ ಶೆಟ್ಟಿ. ಇದೀಗ ಧ್ರವ ಸರ್ಜಾ ನಾಯಕರಾಗಿರುವ ಪ್ರೇಮ್ ನಿರ್ದೇಶನದ “ಕೆಡಿ” ಚಿತ್ರದಲ್ಲಿ ಖಳ ನಟನ ಪಾತ್ರದಲ್ಲಿ ರೆಟ್ರೋ ಲುಕ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಯಶ್ ಶೆಟ್ಟಿ. ಅದರೂ ಬಾಲಿವುಡ್ ನಟ ಸಂಜಯ್‍ದತ್ ಜೊತೆ ತೆರೆ ಹಂಚಿಕೊಂಡಿದ್ದಾರೆ.

ಕೆಡಿ ಚಿತ್ರದಲ್ಲಿ ಒಂದೊಳ್ಳೆ ಪಾತ್ರ ದಲ್ಲಿ ಕಾಣಿಸಿಕೊಂಡಿರುವ ಯಶ್ ಶೆಟ್ಟಿ ಸಿನಿಮಾದ ಅನುಭವ ಹಂಚಿಕೊಂಡಿದ್ದಾರೆ. ಅದರಲ್ಲಿಯೂ ಬಾಲಿವುಡ್ ನಟ ಸಂಜಯ್ ದತ್ ಅವರ ಜೊತೆಗಿನ ನಟನೆ ಜೀವನದಲ್ಲಿ ಮರೆಯಲಾಗದ ಅನುಭವ ಎಂದು ಹೇಳಿಕೊಂಡಿದ್ದಾರೆ.

• ಸಂಜಯ್ ದತ್ ಜೊತೆ ತೆರೆ ಹಂಚಿಕೊಂಡಿದ್ದೀರಾ ಅನುಭವ ಹೇಗಿತ್ತು?

ಬಾಲಿವುಡ್ ಚಿತ್ರರಂಗದಲ್ಲಿ ಖಳನಾಯಕ್ ಎಂದೇ ಗುರುತಿಸಿಕೊಂಡಿರುವ ಹಿರಿಯ ನಟ ಸಂಜಯ್ ದತ್ ಜೊತೆ ಚಿತ್ರಜೀವನದಲ್ಲಿ ಮರೆಯಲಾಗದ ಅನುಭವ. ಚಿತ್ರದ ಪ್ರತಿಸೀನ್ ಅಚ್ಚುಕಟ್ಟಾಗಿ ಬರುವ ತನಕ ಕೆಲಸ ಮಾಡುತ್ತಾರೆ.ಅಂತಹ ಹಿರಿಯ ನಟರಿಂದ ಕಲಿಯುವುದು ಸಾಕಷ್ಟಿದೆ. ದೊಡ್ಡ ನಟನಾಗಿದ್ದರೂ ಯಾವುದೇ ಯಾವುದೇ ಹಮ್ಮು ಬಿಮ್ಮು ಇಲ್ಲದೆ ನಟಿಸುತ್ತಾರೆ. ಅವರ ಸರಳತೆ ನಾವೂ ಅಳವಡಿಸಿಕೊಳ್ಳಬೇಕಾಗಿದೆ.

• ಚಿತ್ರೀಕರಣದ ಸೆಟ್‍ನಲ್ಲಿ ಸಂಜಯ್ ದತ್ ಹೇಗಿರುತ್ತಾರೆ

ಸಂಜಯ್ ದತ್ ಅವರು ಒಮ್ಮೆ ಚಿತ್ರೀಕರಣದ ಸೆಟ್‍ಗೆ ಬಂದರೆ ನಿರ್ದೇಶಕರು ಕಟ್ ಹೇಳುವ ತನಕ ತಾವಿದ್ದ ಸ್ಥಳದಿಂದ ಅಲುಗಾಡುವುದಿಲ್ಲ. ಸ್ಟಾರ್ ನಟರಾದರೂ ಅವರಿಗೆ ಯಾವುದೇ ಬಿಗುಮಾನವಿಲ್ಲ. ಅವರಿಗೆ ಯಾವುದೇ ಶಾಟ್ ಇಷ್ಟ ಆಗದಿದ್ದರೆ ಮತ್ತೊಂದು ಶಾಟ್ ತೆಗೆಯಬಹುದಾ ಎನ್ನುತ್ತಾರೆ. ಇಂತಹ ಕಲಾವಿದರ ಜೊತೆ ನಟನೆ ನಿಜಕ್ಕೂ ಅದೃಷ್ಠ.

• ಕೆಡಿ ಚಿತ್ರ ನಿಮ್ಮ ಕೆರಿಯರ್ ನಲ್ಲಿ ಯಾವ ರೀತಿಯ ಪ್ರಭಾವ ಬೀರಬಹುದಾದ ಚಿತ್ರ

ಚಿತ್ರ ಜೀವನದಲ್ಲಿ ಕೆಡಿ ಚಿತ್ರ ವಿಶೇಷ ಅನುಭವ ನೀಡುವಂತಂಹದ್ದು, ನನ್ನ ಚಿತ್ರ ಜೀವನಕ್ಕೆ ತಿರುವು ನೀಡಬಹುದಾದ ಚಿತ್ರ. ರೆಟ್ರೋ ಸ್ಟೈಲ್‍ನಲ್ಲಿ ಪಾತ್ರ ಬರಲಿದೆ. ಪಾತ್ರದ ಕಡೆ ಸಂಪೂರ್ಣ ಗಮನ ಹರಿಸುವ ಸಲುವಾಗಿ ಏಳರಿಂದ ಎಂಟು ಚಿತ್ರ ಬಿಟ್ಟಿದ್ದೇನೆ. ಪಾತ್ರದ ಕಡೆಗೆ ಸಂಪೂರ್ಣ ಚಿತ್ತ ಹರಿಸಿದ್ದೇನೆ.

• ನಿಮ್ಮ ಭಾಗದ ಚಿತ್ರೀಕರಣ ಎಷ್ಟಾಗಿದೆ, ಇನ್ನೂ ಎಷ್ಟು ಬಾಕಿ ಇದೆ.

ಸರಿ ಸುಮಾರು 28 ದಿನಗಳ ಕಾಲ ನನ್ನ ಭಾಗದ ಚಿತ್ರೀಕರಣ ಮುಗಿದಿದೆ, ಇನ್ನು 20 ದಿನಕ್ಕೂ ಹೆಚ್ಚಿನ ನನ್ನ ಭಾಗದ ಚಿತ್ರೀಕರಣ ಬಾಕಿ ಉಳಿದಿದೆ. ಇನ್ನು ಸಿನಿಮಾ 50 ದಿನ ಚಿತ್ರೀಕರಣವಾಗಿದೆ. ಒಟ್ಟಾರೆ 100ಕ್ಕೂ ಹೆಚ್ಚು ದಿನದ ಚಿತ್ರೀಕರಣ ಬಾಕಿ ಇದ್ದು ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಅದ್ದೂರಿ ಮತ್ತು ಪ್ಯಾನ್ ಇಂಡಿಯಾ ಚಿತ್ರವಾಗಲಿದೆ. ಜೊತೆಗೆ ಚಿತ್ರ ಮತ್ತು ಪಾತ್ರದ ಮೇಲೆ ನಿರೀಕ್ಷೆ ಕೂಡ ಹೆಚ್ಚಾಗಿದೆ.ಜೊತೆಗೆ ಚಿತ್ರದ ಮೂಲಕ ನನ್ನ ಇಮೇಜ್ ಕೂಡ ಬದಲಾಗಲಿದೆ.

• ನಿರ್ದೇಶಕ ಪ್ರೇಮ್ ಬಗ್ಗೆ ಹೇಳುದಾದರೆ?

ಏಕ್ ಲವ್ ಯಾ ಚಿತ್ರದ ಬಳಿಕ ಕೆಡಿ ಚಿತ್ರದಲ್ಲಿ ಪ್ರೇಮ್ ಅವರ ನಿರ್ದೇಶನದಲ್ಲಿ ಕೆಲಸ ಮಾಡುತ್ತಿದ್ದೇನೆ. ಪ್ರತಿಯೊಂದು ಸೀನ್ ಕೂಡ ಅಚ್ಚುಕಟ್ಟಾಗಿ ಬರುವ ತನಕ ಬಿಡುವುದಿಲ್ಲ. ತಾವಾಯಿತು ತಮ್ಮ ಕೆಲಸವಾಯಿತು ಎಂದು ಸಂಪೂರ್ಣ ಕೆಲಸದ ಕಡೆಗೆ ಗಮನ ಹರಿಸುತ್ತಾರೆ. ಅವರ ಜೊತೆ ಕೆಲಸ ಮಾಡುವುದು ಖುಷಿಯ ಸಂಗತಿ. ಅವರ ಜೋಗಿ ಸೇರಿದಂತೆ ಅನೇಕ ಚಿತ್ರಗಳು ಯಾಕೆ ಹಿಟ್ ಆದವು ಎನ್ನವುದು ಅವರ ಕೆಲಸ ರೀತಿ ನೋಡಿದಾಗ ತಿಳಿಯುತ್ತದೆ. ಅವರಂತಹ ಅನುಭವಿ ಮತ್ತು ತನಗೆ ಏನು ಬೇಕೋ ಅದನ್ನು ಕಲಾವಿದರಿಂದ ತೆಗೆಸುವ ತನಕ ಬಿಡದ ಛಲದಂಕಮಲ್ಲ ಪ್ರೇಮ್. ಅವರ ಜೊತೆ ಇನ್ನಷ್ಟು ಕೆಲಸ ಮಾಡಬೇಕು ಅನ್ನಿಸುತ್ತದೆ.

• ನಿಮಗೆ ನಾಯಕನಾಗಬೇಕು ಅನ್ನಿಸಲಿಲ್ಲವೇ?

ಚಿತ್ರರಂಗದಲ್ಲಿ ನಾಯಕನಾಗಬೇಕು ಎಂದರೆ ಗಾಡ್‍ಪಾದರ್ ಗಳು ಇರಬೇಕು . ಇಲ್ಲ ನಿರ್ಮಾಪಕ ಚಿಕ್ಕಪ್ಪನೋ ಅಥವಾ ದೊಡ್ಡಪ್ಪನೋ ಆಗಿರಬೇಕು. ಅದನ್ನು ಬಿಟ್ಟು ಯಾವ ಹಿನ್ನೆಲೆಯೂ ಇಲ್ಲದ ಕಲಾವಿದರೂ ನಟರಾಗುವುದು ತುಂಬಾನೇ ಕಷ್ಟದ ಕೆಲಸ. ಸಿಕ್ಕ ಕೆಲಸವನ್ನು ಮಾಡಿಕೊಂಡು ಹೋಗಬೇಕು. ಆ ಕೆಲಸ ಮಾಡುತ್ತಿದ್ದೇವೆ. ಒಂದು ಚಿತ್ರದಲ್ಲಿ ನಟಿಸಿ ಗಮನ ಸೆಳೆಯುತ್ತೇವೆ. ಮತ್ತೊಂದು ಚಿತ್ರ ಬರುವ ತನಕ ನಮ್ಮನ್ನು ನಾವು ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವ ಕೆಲಸ ಮಾಡಬೇಕಾಗಿದೆ.

• ನಿರ್ದೇಶನದ ತರಬೇತಿ ಪಡೆದಿದ್ದೀರಾ, ನಿರ್ದೇಶಕನಾಗಬೇಕು ಅನ್ನಿಸುತ್ತಲ್ಲವೇ?

ಚಿತ್ರರಂಗಕ್ಕೆ ನಿರ್ದೇಶಕನಾಗಲು ತರಬೇತಿ ಪಡೆದು ಬಂದೆ. ಈಗ ಖಳನಟನಾಗಿದ್ದೇನೆ. ಚಿತ್ರಕ್ಕಾಗಿ ಸಾಕಷ್ಟು ಸಿದ್ದತೆ ಮತ್ತು ಪೇಷನ್ಸ್ ಬೇಕು. ಒಳ್ಳೆಯ ಸಮು ಬಂದಾಗ ನೋಡೋಣ

• ತುಳುನಾಡಿನವರಾಗಿ ಮೊದಲ ಬಾರಿಗೆ ತುಳು ಸಿನಿಮಾದಲ್ಲಿ ನಟಿಸಿದ್ದೀರಾ ಹೇಗನಿಸಿತು

ತುಳು ಚಿತ್ರ ಸರ್ಕಸ್ ಚಿತ್ರದಲ್ಲಿ ನಟಿಸುವ ತನಕ ತುಳುನಾಡಿನ ಮಂದಿ ನನ್ನನ್ನು ಬೆಂಗಳೂರು ಭಾಗದವನು ಅಂದುಕೊಂಡಿದ್ದರು. ತುಳು ಚಿತ್ರದಲ್ಲಿ ನಟಿಸಿದ ಮೇಲೆ ಇವ ಕೂಡ ನಮ್ಮ ಭಾಗದವನು ಎಂದು ಜನರಿಗೆ ಪರಿಚಯವಾಗಿದೆ. ಜೊತೆಗೆ ತುಳು ಚಿತ್ರರಂಗದ ದಿಗ್ಗಜ ಕಲಾವಿದರೊಂದಿಗೆ ನಟಿಸಿದ್ದೇನೆ.ಅದನ್ನು ಎಂದಿಗೂ ಮರೆಯಲಾಗದ್ದು .

ಪೂರ್ತಿಯಾಗಿ ಓದಿ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin