ಗೋಲ್ಡನ್ ಸ್ಟಾರ್ ಗಣೇಶ್‍ಗೆ ಪ್ಯಾನ್ ಇಂಡಿಯಾ ಚಿತ್ರ ವಿಖ್ಯಾತ್ ಪ್ರೋಡಕ್ಷನ್ ನಿಂದ ನಿರ್ಮಾಣ
ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರ ಹುಟ್ಟುಹಬ್ಬ ಇಂದು (ಜುಲೈ 2). ಈ ಹಿನ್ನೆಲೆಯಲ್ಲಿ ನಟ ಗಣೇಶ್ ಅವರ ಹೊಸ ಪ್ಯಾನ್ ಇಂಡಿಯಾ ಚಿತ್ರ ಪ್ರಕಟವಾಗಿದೆ. ಈ ಚಿತ್ರವನ್ನು ವಿಖ್ಯಾತ್ ಚಿತ್ರ ಪ್ರೊಡಕ್ಷನ್ ನಿರ್ಮಾಣ ಮಾಡಲು ಮುಂದಾಗಿದ್ದಾರೆ.
ದುಬಾರಿ ಬಜೆಟ್‍ನಲ್ಲಿ ಮೂಡಿ ಬರುತ್ತಿರುವ ದೊಡ್ಡ ಕ್ಯಾನ್ವಾಸಿನ ಪ್ಯಾನ್ ಇಂಡಿಯಾ ಚಿತ್ರ. ಈ ಮೂಲಕ ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಪ್ಯಾನ್ ಇಂಡಿಯಾ ನಾಯಕರಾಗಲು ಹೊರಟಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅವರ ಪಾಲಿಗೆ ಹುಟ್ಟುಹಬ್ಬದ ಸಂಭ್ರಮ. ಗಣೇಶ್ ಅವರ ಹುಟ್ಟುಹಬ್ಬಕ್ಕೆ ವಿಖ್ಯಾತ್ ಚಿತ್ರ ಪ್ರೊಡಕ್ಷನ್ಸ್ ಕಡೆಯಿಂದೊಂದು ದೊಡ್ಡ ಪ್ರಕಟನೆ ಹೊರಬಿದ್ದಿದೆ.
ಇದುವರೆಗೂ ವಿಶಿಷ್ಟ ಕಥಾನಕ ಹೊಂದಿರುವ ಚಿತ್ರ ನಿರ್ಮಾಣ ಮಾಡಿ ಗಮನ ಸೆಳೆದಿರುವ ಯುವ ನಿರ್ಮಾಪಕ ವಿಖ್ಯಾತ್, ನಟ ಗೋಲ್ಟನ್ ಸ್ಟಾರ್ ಗಣೇಶ್ ಅವರಿಗಾಗಿ ಚಿತ್ರ ನಿರ್ಮಾಣ ಮಾಡಲು ಮುಂದಾಗಿದ್ದಾರೆ…
ನಟ ಗಣೇಶ್ ಅವರ ವೃತ್ತಿ ಬದುಕಿನಲ್ಲಿ ಮಹತ್ತರವಾಗಿ ದಾಖಲಾಗಬಹುದಾದ ಚಿತ್ರ ಎನ್ನಲಾಗಿದೆ. ಈ ಚಿತ್ರ ಗಣೇಶ್ ಅವರ 42ನೇ ಚಿತ್ರ ಕೂಡ.ವಿಖ್ಯಾತ್ ಚಿತ್ರ ಪ್ರೊಡಕ್ಷನ್ಸ್ ನಿರ್ಮಾಣದ 6ನೇ ಚಿತ್ರವಾಗಿದೆ.
ಪ್ಯಾನ್ ಇಂಡಿಯಾ ಚಿತ್ರದ ಬಗ್ಗೆ ಸಿನಿಮಾ ಬಗೆಗಿನ ತಯಾರಿಗಳು ಆರಂಭವಾಗಿವೆ. ಚಿತ್ರದ ನಿರ್ದೇಶಕರು, ತಾರಾಗಣ, ತಾಂತ್ರಿಕ ವರ್ಗ, ನಾಯಕಿ ಯಾರು ಎಂಬ ವಿಚಾರಗಳು ಇಷ್ಟರಲ್ಲಿಯೇ ಬಯಲಾಗಲಿವೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.ನಟ ಗಣೇಶ್ ಅವರ ಹುಟ್ಟುಹಬ್ಬಕ್ಕೆ ಹೊಸ ಪ್ಯಾನ್ ಇಂಡಿಯಾ ಚಿತ್ರವನ್ನು ಪ್ರಕಟಿಸಲಾಗಿದೆ.