ಚಿತ್ರರಂಗದಲ್ಲಿ ಯಶಸ್ವಿ ನಿರ್ದೇಶಕನಾಗಿ ಸಾಧನೆ ಮಾಡುವ ಹಂಬಲ: ಅಥರ್ವ ಆರ್ಯ

ಬಣ್ಣದ ಬದುಕೇ ಹಾಗೆ, ಎಲ್ಲೋ ಇದ್ದವರನ್ನು ತಂದು ಮುನ್ನೆಲೆಗೆ ಬಿಟ್ಟು ಬಿಡುತ್ತದೆ. ಇಲ್ಲಿ ಪ್ರತಿಭೆ, ಸಾಮಥ್ರ್ಯ ಇದ್ದವರು ಮುಂದೆ ಬರುತ್ತಾರೆ. ಇಲ್ಲದಿದ್ದರೆ ಬಂದ ದಾರಿಗೆ ಸುಂಕವಿಲ್ಲದಂತೆ ಮರಳಿ ಗೂಡು ಸೇರುವ ಮಂದಿಯನ್ನು ಕಣ್ಣ ಮುಂದೆ ನೋಡಿದ್ದೇವೆ. ನೋಡುತ್ತಲೇ ಇರುತ್ತೇವೆಯೂ ಕೂಡ. ಹೀಗೆಲ್ಲಾ ಯಾಕೆ ಎನ್ನುವ ವಿಷಯ. ಮಾಯನಗರಿಯಲ್ಲಿ ಬದುಕು ಕಟ್ಟಿಕೊಳ್ಳಬೇಕೆಂದು ಬಂದ ಯುವಕ ನಿರ್ದೇಶಕನಾಗುವ ತನಕ ಬೆಳದ ಪರಿ ಸೋಜಿಗ. ಅವರು ಯಾರು ಎನ್ನುತ್ತೀರಾ ಅವರೇ ಅಥರ್ವ ಆರ್ಯ.

“ಜೂಜಾಟ’ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿ ಬಿಡುಗಡೆ ಹಂತಕ್ಕೆ ತಂದಿದ್ದಾರೆ. ಇದರ ಜೊತೆ ಸದ್ದಿಲ್ಲದೆ ಮತ್ತೊಂದು ಸಿನಿಮಾ “ ಅಪ್ಪ ಐ ಲವ್ ಯೂ” ಚಿತ್ರವನ್ನು ಪೂರ್ಣಗೊಳಿಸಿ ಬಿಡುಗಡೆಯ ಹೊಸ್ತಿಲಿಗೆ ತಂದು ನಿಲ್ಲಿಸಿದ್ದಾರೆ. ಇನ್ನೂ ಕೈಯಲ್ಲಿ ಕೆಲವು ಚಿತ್ರಗಳಿಗೆ, ಕೆಲವು ಮಾತುಕತೆ ಹಂತದಲ್ಲಿವೆ, ಬಣ್ಣದ ಜಗತ್ತಿಗೆ ಬಂದ ಹಾದಿ, ಇಲ್ಲಿಯೇ ಸಾಧಿಸಿ ತೋರಿಸಬೇಕೆನ್ನು ಹಂಬಲ ಛಲ ಎಲ್ಲವೂ ಇದೆ.ಅಥರ್ವ ಆರ್ಯ ಕಲಾ ಸರಸ್ವತಿ ಸೇವೆ ಮಾಡಿಕೊಂಡು ಬದುಕಿಕೊಂದು ದಾರಿ ಮಾಡಿಕೊಳ್ಳುತ್ತಿದ್ದಾರೆ. ತಾವು ಮಾಡುವ ಪ್ರಾಜೆಕ್ಟ್‍ಗಳ ಮೂಲಕ ಇತರರಿಗೂ ಆಸರೆಯಾಗಿ ನಿಂತಿದ್ದಾರೆ. ಅದನ್ನು ಮುಕ್ತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

ಟಿ . ಎನ್ ಸೀತಾರಾಮ್ ಸೇರಿದಂತೆ ಹಲವು ನಿರ್ದೇಶಕರೇ ಬಳಿ ಕೆಲಸ ಮಾಡಿದ್ದೇನೆ. ರಿಯಾಲಿಟಿ ಶೋಗಳ ಅಬ್ಬರ ಆರ್ಭಟವಿಲ್ಲದ ಕಾಲದಲ್ಲಿ ಧಾರಾವಾಹಿಯೇ ಜನರಿಗೆ ಮನರಂಜನೆಯ ತಾಣ ಎನ್ನುವ ಕಾಲಘಟ್ಟದಲ್ಲಿ ನಿರ್ದೇಶಕ, ನಟ, ನಿರ್ಮಾಪಕರೂ ಆಗಿರುವ ರವಿಕಿರಣ್ ಅವರ ಗರಡಿ ಸೇರಿಕೊಂಡ ಮಂಡ್ಯದ ಹೈದ ಅಥರ್ವ ಆರ್ಯ ಬಣ್ಣದ ಬದುಕಿನ ಯಾನದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
• ಬಣ್ಣದ ಬದುಕಿಗೆ ಬಂದದ್ದು ಹೇಗೆ
ಮನರಂಜನಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದ ಉದಯ ಟಿವಿಯಲ್ಲಿ “ಕುಸುಮಾಂಜಲಿ”ಯಲ್ಲಿ ಸಹಾಯಕ ನಿರ್ದೇಶಕನಾಗಿ ಪ್ರವೇಶ ಪಡೆದ. ಆ ನಂತರ ಹಿರಿಯ ನಟ,ನಿರ್ಮಾಪಕ ನಿರ್ದೇಶಕ ರವಿಕಿರಣ್ ಅವರ ಗರಡಿಯಲ್ಲಿ ಸುಕನ್ಯ, ಬದುಕು ಧಾರಾವಾಹಿಯಲ್ಲಿ ಸಹ ನಿರ್ದೇಶಕ, ಸಂಚಿಕೆ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಇನ್ನೇನು ರವಿ ಕಿರಣ್ ತಮ್ಮದೇ ನಿರ್ಮಾಣ ಸಂಸ್ಥೆಯಲ್ಲಿ ಧಾರಾವಾಹಿ ನಿರ್ದೇಶನಕ್ಕೆ ಅವಕಾಶ ಕೊಡಬೇಕು ಎನ್ನುವಾಗ ಅದರಿಂದ ತಪ್ಪಿಸಿಕೊಂಡು ಸಿನಿಮಾಕ್ಕೆ ಬಂದೆ. ಇದೇ ಕಾರಣಕ್ಕೆ ರವಿಕಿರಣ್ ಎಲ್ಲೇ ಸಿಕ್ಕರೂ ಪ್ರೀತಿಯಿಂದ ಬೈಯ್ಯತ್ತಾರೆ, ನಾನಾಗಿಯೇ ಅವಕಾಶ ಕೊಡುತ್ತೇನೆ ಎಂದರೂ ಕೈಚೆಲ್ಲಿ ಹೋದ ಎನ್ನುತ್ತಾರೆ. ಅವರ ಅನೇಕ ಸ್ನೇಹಿತರ ಬಳಿ ಈ ವಿಷಯವನ್ನು ಹೇಳಿದ್ದೂ ಉಂಟು.

ನನಗೆ ಸಿನಿಮಾದಲ್ಲಿ ಗುರುತಿಸಿಕೊಳ್ಳುವ ಹಂಬಲ ಮತ್ತು ಕಾತುರ ಇತ್ತು. ಕಿರುತೆರೆಯಲ್ಲಿ ಒಂದಷ್ಟು ಕೆಲಸ ಮಾಡಿದ್ದೇನೆ. ಇಲ್ಲಿ ಸಾಕು, ಸಿನಮಾ ರಂಗದಲ್ಲಿ ಕೆಲಸ ಮಾಡೋಣ ಎನ್ನುವ ಉತ್ಸಾಹ ಇತ್ತು. ಇದೇ ಕಾರಣಕ್ಕೆ ರವಿಕಿರಣ್ ಧಾರಾವಾಹಿ ನಿರ್ದೇಶನಕ್ಕೆ ಅವಕಾಶ ಕೊಡುತ್ತೇನೆ ಎನ್ನುವ ವಿಷಯ ಗೊತ್ತಾಗುತ್ತಿದ್ದಂತೆ ಅಲ್ಲಿಂದೆ, ಹೊರ ಬಂದಿದ್ದೆ. ಒಮ್ಮೆ ಅಲ್ಲಿ ಸಿಕ್ಕಿ ಹಾಕಿಕೊಂಡರೆ ಮತ್ತು ಬರಲು ಸಾಧ್ಯವಾಗುವುದಿಲ್ಲ ಎನ್ನುವ ಉದ್ದೇಶ ನನ್ನದಾಗಿತ್ತು.

• ಕಿರುತೆರೆಯಿಂದ ಸಿನಿಮಾಗೆ ಬಂದ ನಿಮಗೆ ಸಿಕ್ಕ ಅವಕಾಶಗಳು
ಧಾರಾವಾಹಿ ನಿರ್ದೇಶನದ ಅವಕಾಶ ಸಿಕ್ಕರೂ ಅದಕ್ಕೆ ಸಿಕ್ಕಿ ಹಾಕಿಕೊಳ್ಳಬಾರದು ಎನ್ನುವ ಉದ್ದೇಶದಿಂದ ಚಿತ್ರರಂಗದತ್ತ ಮುಖ ಮಾಡಿದೆ. ಸಂಜು ವೆಡ್ಸ್ ಗೀತಾ ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಆ ಬಳಿಕ ಗಿರಿರಾಜ್ ಜೊತೆ ಜಟ್ಟ, ಲಕ್ಕಿ ಶಂಕರ್ ಬಳಿ ದೇವ್ರಾಣೆ, 90, ಶಶಾಂಕ್ ಅವರ ಜೊತೆ ತಾಯಿಗೆ ತಕ್ಕ ಮಗ, ಪ್ರಭು ಶ್ರೀನಿವಾಸ್ ಜೊತೆ ಕರಿಯಾ-2 ಹರ್ಷಿಕಾ ಪೂಣಚ್ಚ ನಟನೆ ಚಿಟ್ಟೆ, ರಂಗಪ್ಪ ಹೋಗ್ ಬಿಟ್ನಾ ಹೀಗೆ ಹಲವು ಚಿತ್ರಗಳಲ್ಲಿ ಸಹಾಯಕ, ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದೇನೆ
• ಚಿತ್ರರಂಗದಲ್ಲಿ ನಿಮ್ಮ ಉದ್ದೇಶ ಮತ್ತು ಕನಸು ಏನು
ಚಿತ್ರರಂಗದಲ್ಲಿ ನಿರ್ದೇಶಕನಾಗಿ ಸಾಧಿಸುವ ಹಂಬಲ ಇದೆ. ಅದಕ್ಕಾಗಿ ಎಲ್ಲ ಪ್ರಯತ್ನ ಮಾಡುತ್ತಿದ್ದೇನೆ. ಒಳ್ಳೆಯ ಕತೆಗಳಿವೆ. ಅವುಗಳನ್ನು ಸಿನಿಮಾ ಮಾಡಬೇಕು. ಚಿತ್ರರಂಗಕ್ಕೆ ಉತ್ತಮ ಸಿನಿಮಾ ನೀಡುವ ತವಕವಿದೆ. ವಿಜಯ್ ರಾಘವೇಂದ್ರ ನಟನೆಯ ” ರಾಘು ” ಚಿತ್ರ ಸೇರಿದಂತೆ ಕೆಲವು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದೇನೆ.
• ಜೂಟಾಟ ಚಿತ್ರದ ಮೂಲಕ ನಿರ್ದೇಶಕ ಆಗಿದ್ದೀರಿ ಚಿತ್ರ ಯಾವ ಹಂತದಲ್ಲಿದೆ.
ಧಾರಾವಾಹಿಯಿಂದ ಸಿನಿಮಾಗೆ ಬಂದು ಹಲವು ನಿರ್ದೇಶಕ ಬಳಿಕ ಕೆಲಸ ಮಾಡಿದ ನಂತರ ಮೊದಲ ಬಾರಿಗೆ ನಿರ್ದೇಶನ ಮಾಡುವ ಅವಕಾಶ ಸಿಕ್ಕಿದ್ದುದು “ಜೂಟಾಟ” ಚಿತ್ರದ ಮೂಲಕ. ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ನಟಿ ಅನಿತಾ ಭಟ್ ಸೇರಿದಂತೆ ಹಿರಿ ಕಿರಿಯ ಕಲಾವಿದರು ಚಿತ್ರದಲ್ಲಿದ್ದಾರೆ. ಬಿಡುಗಡೆಗೂ ಸಿದ್ದವಾಗಿದೆ. ನಿರ್ಮಾಪಕ ಟಿ.ಆರ್ ಚಂದ್ರಶೇಖರ್ ಅವರು ಬಂಡವಾಳ ಹಾಕಿದ್ದಾರೆ. ಸಿನಿಮಾ ಮಾಡಿ ಅವರಿಗೆ ಒಪ್ಪಿಸಿದ್ದೇವೆ. ಚಿತ್ರ ಬಿಡುಗಡೆ ಮಾಡುವುದು ನಿರ್ಮಾಪಕರಿಗೆ ಸಂಬಂಧಿಸಿದ್ದು, ಹಲವು ಬಾರಿ ಅವರನ್ನು ಕೇಳಿದಾಗ ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡೋಣ ಎನ್ನುತ್ತಿದ್ದಾರೆ. ಬಿಡುಗಡೆಗಾಗಿ ತಂಡದ ಸದಸ್ಯರಂತೆ ನಾನೂ ಕಾಯುತ್ತಿರುವೆ.

• ಮೊದಲ ಚಿತ್ರ ಬಿಡುಗಡೆ ಮುನ್ನ ಮತ್ತೊಂದು ಸಿನಿಮಾ ನಿರ್ದೇಶನ ಮಾಡಿದ್ದಿರಿ ಅದರ ಬಗ್ಗೆ ಹೇಳುವುದಾದರೆ
ತಂದೆ, ಮಗನ ಭಾಂದವ್ಯದ ಅನಾವರಣ ಮಾಡುವ ಅಪ್ಪ ಐ ಲವ್ ಯೂ
ಚಿತ್ರೀಕರಣ ಪೂರ್ಣಗೊಳಿಸಿ ಬಿಡುಗಡೆಯ ಹಂತಕ್ಕೆ ಬಂದಿದೆ. ಹಿರಿಯ ಕಲಾವಿದ ತಬಲಾ ನಾಣಿ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ನೆನಪಿರಲಿ ಪ್ರೇಮ್, ಮಾನ್ವಿತ್ ಕಾಮತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ವಿಭಿನ್ನವಾದ ಕಥೆಯೊಂದಿಗೆ ತೆರೆಗೆ ಬರಲು ಸಜ್ಜಾಗಿವೆ. ಚಿತ್ರ ಎಲ್ಲರಿಗೂ ಇಷ್ಟವಾಗಲಿದೆ ಎನ್ನುವ ವಿಶ್ವಾಸ ಅವರದು
• ಮುಂದಿನ ಸಿನಿಮಾಗಳಿಗೆ ಅವಕಾಶ ಬಂದಿದೆಯಾ ಹೇಗೆ
ನಟಿ ಪ್ರಿಯಾಂಕ ಉಪೇಂದ್ರ ಅವರಿಗೆ ಸಿನಿಮಾ ಮಾಡಲು ಕಥೆ ಹೇಳಿದೇವೆ. ಅವರಿಗೆ ಅಡ್ವಾನ್ಸ್ ಕೂಡ ಕೊಟ್ಟಾಗಿದೆ. ಒಂದಷ್ಟು ಕಾರಣದಿಂದ ವಿಳಂಬವಾಗಿದೆ. ಯಾವಾಗ ಆರಂಭವಾಗುತ್ತದೆಯೋ ನೋಡಬೇಕು. ಇದರ ಜೊತೆಗೆ ಎರಡು ಮೂರು ಚಿತ್ರಗಳ ಮಾತುಕತೆ ನಡೆಯುತ್ತಿದೆ. ಯಾವುದು ಬೇಗೆ ಆರಂಭವಾಗುತ್ತದೆಯೂ ಸದ್ಯದಲ್ಲಿಯೇ ತಿಳಿಯಲಿದೆ ಎಂದಿದ್ಧಾರೆ.ಚಿತ್ರರಂಗದಲ್ಲಿ ಈ ಮಟ್ಟಕ್ಕೆ ಬರಲು ಹಿರಿಯ ಛಾಯಾಗ್ರಾಹಕ ಸುಂದರ್ ನಾಥ್ ಸುವರ್ಣ ಸೇರಿ ಹಲವು ಮಂದಿ ಕಾರಣ ಎಂದು ಕೃತಜ್ಞತೆಯಿಂದ ಸ್ಮರಿಸಿಕೊಂಡಿದ್ದಾರೆ