Interview: ಅಮ್ಮ ಐಸಿಯುನಲ್ಲಿದ್ದಾಗ ಬಿಗ್ ಬಾಸ್‍ನಲ್ಲಿ ವೈಲೆಂಟ್ ಶೋ ನಡೆಸಿದ್ದೇನೆ: ಕಿಚ್ಚ ಸುದೀಪ್
![Interview: ಅಮ್ಮ ಐಸಿಯುನಲ್ಲಿದ್ದಾಗ ಬಿಗ್ ಬಾಸ್‍ನಲ್ಲಿ ವೈಲೆಂಟ್ ಶೋ ನಡೆಸಿದ್ದೇನೆ: ಕಿಚ್ಚ ಸುದೀಪ್](https://www.cininewskannada.com/wp-content/uploads/2024/12/1-22.jpg?v=1734497510)
“ತಾಯಿ ಆಸ್ಪತ್ರೆಯಲ್ಲಿ ತೀವ್ರ ನಿಗಾಘಟಕದಲ್ಲಿದ್ದ ದಿನ ಬಿಗ್‍ಬಾಸ್‍ನ ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮ ನಡೆಸಿಕೊಟ್ಟಿದ್ದೆ. ಅಂದು ಬಿಗ್ ಬಾಸ್‍ನಲ್ಲಿ ವೈಲೆಂಟ್ ಶೋ ಆಗಿತ್ತು, ಅದನ್ನು ನಿಬಾಯಿಸುವುದೂ ಕೂಡ ನನ್ನ ಜವಾಬ್ದಾರಿ ಆಗಿತ್ತು, ಇದು ನನ್ನ ಕರ್ತವ್ಯ ಪ್ರಜ್ಞೆ…”
![](https://www.cininewskannada.com/wp-content/uploads/2024/12/16-9.jpg)
ಹೀಗಂತ ಮಾತು ಹಂಚಿಕೊಂಡರು ಕಿಚ್ಚ ಸುದೀಪ್,.
ಬಹುನಿರೀಕ್ಷಿತ “ಮ್ಯಾಕ್ಸ್” ಚಿತ್ರ ಡಿಸೆಂಬರ್ 25 ರಂದು ಬಿಡುಗಡೆಗೆ ಸಜ್ಜಾಗಲಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಬಗ್ಗೆ ಮಾಹಿತಿ ನೀಡಲು ಕರೆದಿದ್ದ ವೇಳೆ ತಾಯಿ ಬಗ್ಗೆ ಇದ್ದ ಪ್ರೀತಿ, ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.
ಅಮ್ಮ ಅಂದರೆ ಆಕಾಶದಷ್ಟು ಪ್ರೀತಿ ಮಾಡುವÀ, ಒಳ್ಳೆಯದು ಕೆಟ್ಟದರಲ್ಲಿ ಬೆನ್ನುತಟ್ಟಿ ಪ್ರೋತ್ಸಾಹಿಸುವ ಜೀವ. ಆ ಜೀವಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ. ತಾಯಿ ಜೊತೆ ನಿತ್ಯ ಬೆಳಗ್ಗೆ ಚಾಟ್ ಮಾಡುತ್ತಿದ್ದದ್ದು, ಪ್ರೀತಿ, ಮಮತೆ, ಅವರ ಜೊತೆಗಿನ ಒಡನಾಟ ಮಿಸ್ ಮಾಡಿಕೊಳ್ಳುತ್ತಿದ್ದೇನೆ.
ಪ್ರತಿಬಾರಿ ಬಿಗ್‍ಬಾಸ್ ಕಾರ್ಯಕ್ರಮ ನಡೆಸಿಕೊಡಲು ಬಂದಾಗ ಹೊಸ ವಿನ್ಯಾಸದ ಬಟ್ಟೆ ತೊಟ್ಟಾಗ ಕನ್ನಡಿ ಮುಂದೆ ನಿಂತು ಮೊದಲು ಪೋಟೋ ತೆಗೆದು ಅಮ್ಮನಿಗೆ ಕಳುಹಿಸುತ್ತಿದೆ. ಅದನ್ನು ನೋಡಿ ಖುಷಿ ಪಡುತ್ತಿದ್ದರು. ಅವರಿಗೆ ತುಂಬಾ ಮೆಚ್ಚುಗೆ ಆಗಿದ್ದರೆ “ಥೂ.. ನಾಯಿ” ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಮನೆಗೆ ಹೋದ ತಕ್ಷಣ ದೃಷ್ಠಿ ತೆಗೆಯುತ್ತಿದ್ದರು.
![](https://www.cininewskannada.com/wp-content/uploads/2024/12/13-8-1024x677.jpg?v=1734497705)
ಅಮ್ಮ ಬಿಟ್ಟು ಹೋದ ಮೇಲೆ ಕುರ್ತಾ ಹಾಕುತ್ತಿದ್ದೆ. ಯಾವುದರ ಮೇಲೆಯೂ ಆಸಕ್ತಿ ಇರಲಿಲ್ಲ, ಬಿಗ್ ಬಾಸ್ ಶೋ ನಡೆಸಿಕೊಡಬೇಕಾದ ಹಿನ್ನೆಲೆಯಯಲ್ಲಿ ಮಾಮೂಲಿ ಡಿಸೈನ್ ಬಟ್ಟೆ ಹಾಕುತ್ತಿದ್ದೇನೆ..
ಪೈಲ್ವಾನ್ ಚಿತ್ರದ ತನಕ ನನ್ನ ಪ್ರತಿ ಸಿನಿಮಾವನ್ನು ಅಮ್ಮ ಚಿತ್ರಮಂದಿರಕ್ಕೆ ಬಂದು ಮೊದಲ ದಿನ ಮೊದಲ ಶೋ ನೋಡಿ ತಮ್ಮ ಅಭಿಪ್ರಾಯಕೊಟ್ಟಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ನಡೆದಾಗ ಬಂದು ನೋಡಿದ್ದಾರೆ. ಆ ನಂತರ ವಯಸ್ಸು ಮತ್ತು ಆರೋಗ್ಯದ ಸಮಸ್ಯೆಯಿಂದ ಚಿತ್ರಮಂದಿರಕ್ಕೆ ಬರಲು ಆಗುತ್ತಿರಲಿಲ್ಲ, ಆದರೆ ಚಿತ್ರೀಕರಣದ ಪ್ರತಿಯೊಂದು ಹಂತದಲ್ಲಿ ತುಣುಕುಗಳನ್ನು ಅಮ್ಮನಿಗೆ ತೋರಿಸುತ್ತಿದ್ದೆ.
ಇತ್ತೀಚೆಗಷ್ಟೇ ನನ್ನ ವಿವಾಹವಾರ್ಷಿಕೋತ್ಸವ ನಡೆದಿತ್ತು ಅಂದು ಅಮ್ಮ ನನಗೆ ಶುಭಕೋರಿದ್ದರು. ಐಸಿಯುನಲ್ಲಿದ್ದಾಗ ಮನೆಯಿಂದ ಮಾಹಿತಿ ಬಮದ ನಂತರ ಬಿಗ್ ಬಾಸ್ ಶೋ ನಡೆಸಿಕೊಟ್ಟು ನೇರ ಆಸ್ಪತ್ರೆಗೆ ತೆರಳಿದ್ದೆ, ಹೃದಯದ ಬಡಿತ ಏರಿಳಿತವಾಗುತ್ತಿತ್ತು. ಒಮ್ಮೆ ನಿಂತು ಹೋಯಿತು, ಆಗ ವೈದ್ಯರ ಬಳಿ ಏನಾದರೂ ಮಾಡಿ ಎಂದು ಕೇಳಿಕೊಳ್ಳುತ್ತಿದ್ದೆ. ಅವರು ಹೃದಯ ಬಡಿತ ಹೆಚ್ಚಿಸಲು ಏನೇನೋ ಸಆಹಸ ಮಾಡುತ್ತಿದ್ದರು., ಇದನ್ನು ಮುಂಚೆಯೇ ಮಾಡಬಾರದಿತ್ತಾ ಎಂದು ವೈದ್ಯರನ್ನು ಕೇಳಿದ್ದೂ ಉಂಟು..
ಕಣ್ಣ ಮುಂದೆಯೇ ಅಮ್ಮ ಹೋದಾಗ ಅದನ್ನು ಅರಗಿಸಿಕೊಳ್ಳಲು ಆಗಲಿಲ್ಲ, ಪ್ರತಿದಿನ ಬೆಳಗ್ಗೆ 5.45 ಆದ ನಂತರ ತಕ್ಷಣ ಎಚ್ಚರವಾಗಿ ಬಿಡುತ್ತದೆ.ಅಮ್ಮ ನನ್ನ ಸ್ವರ್ವಸ್ವ ಮತ್ತು ಜೀವ ಎಂದು ತಾಯಿ ಬಗ್ಗೆ ಇಟ್ಟಿದ್ದ ಪ್ರೀತಿ, ಅಭಿಮಾನದ ಮಾತುಗಳನ್ನು ಕಿಚ್ಚ ಸುದೀಪ್ ಹಂಚಿಕೊಂಡರು.