ಜೆರ್ಸಿ ನಂ 10 ವಿಭಿನ್ನ ಚಿತ್ರ: ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಸಹಕಾರಿ: ಆದ್ಯಾ ತಿಮ್ಮಯ್ಯ
ಮಾಡಲಿಂಗ್ ನಿಂದ ಬಣ್ಣದ ಜಗತ್ತಿಗೆ ಬಂದವರು ಚಿತ್ರರಂಗದಲ್ಲಿ ಅನೇಕರು ಬದುಕು ಕಟ್ಟಿಕೊಟ್ಟಿಕೊಂಡದ್ದಾರೆ. ಇದೀಗ ಅದೇ ಹಾದಿಯಲ್ಲಿ ಕೊಡಗಿನ ಮತ್ತೊಂದು ಪ್ರತಿಬೆ ಆದ್ಯಾ ತಿಮ್ಮಯ್ಯ ಹೆಜ್ಜೆಹಾಕಿದ್ದಾರೆ. ಅವರು ನಾಯಕರಾಗಿ ಜೆರ್ಸಿ 10 ಚಿತ್ರದ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗೆ ಒಡ್ಡಿದ್ದಾರೆ.
ಮಾಡಲಿಂಗ್ ಲೋಕದಿಂದ ಚಿತ್ರರಂಗಕ್ಕೆ ಬಂದ ಬಗೆ ಹಾಗು ಅವರು ನಾಯಕರಾಗಿ ಕಾಣಿಸಿಕೊಂಡಿರುವ ಜರ್ಸಿ ನಂ 10 ಇದೇ ಶುಕ್ರವಾರ ತೆರೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ ನಾಯಕ,ನಿರ್ಮಾಪಕರೂ ಆಗಿರುವ ಆದ್ಯಾ ತಿಮ್ಮಯ್ಯ.
- ಚಿತ್ರರಂಗಕ್ಕೆ ಬಂದದ್ದು ಹೇಗೆ?
ಮಾಡಲಿಂಗ್ ನಲ್ಲಿ ತೊಡಗಿಸಿಕೊಂಡಿದ್ದೆ. ಸಿನಿಮಾಕ್ಕೆ ಬರುವ ಮುನ್ನವೇ 250 ರಿಂದ 300ಕ್ಕೂ ಅಧಿಕ ಶೋಗಳಲ್ಲಿ ಭಾಗಿಯಾಗಿದ್ದೇನೆ. ಮಾಡಲಿಂಗ್ ಮಾಡುತ್ತಲೇ ರಂಗಭೂಮಿಯಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದೆ.ಹಾಗೆ ನಿರ್ದೇಶನ ವಿಭಾಗದಲ್ಲಿಯೂ ತರಬೇತಿ ಪಡೆಯುವ ಅವಕಾಶ ಸಿಕ್ಕಿತು.ಶಾರ್ಪ್ ಶೂಟರ್ ಚಿತ್ರದಲ್ಲಿ ಪಾತ್ರ ಮಾಡುವ ಅವಕಾಶ ಸಿಕ್ಕಿತು ಹೀಗೆ ಸಿನಿಮಾ ಲೋಕದ ಜರ್ನಿ ಆರಂಭವಾಯಿತು.
- ಶಾರ್ಪ್ ಶೂಟರ್ ಚಿತ್ರದ ಬಳಿಕ ಬಂದ ಅವಕಾಶ.
ಶಾರ್ಪ್ ಶೂಟರ್ ಚಿತ್ರದಲ್ಲಿ ಕ್ಯಾಮಿಯೋ ರೋಲ್ ಮಾಡಿದ್ದೆ.ಆದಾದ ಬಳಿಕ ” ರೂಪ” ಚಿತ್ರದಲ್ಲಿ ನಾಯಕನಾಗುವ ಅವಕಾಶ ಒದಗಿ ಬಂತು. ಆ ಚಿತ್ರದ ಬಳಿಕ ವಿಲನ್ ಚಿತ್ರದಲ್ಲಿ ಪಾತ್ರ ಮಾಡಿದ್ದೆ. ಇದಾದ ಬಳಿಕ ನಮ್ಮದೇ ಬ್ಯಾನರ್ ನಲ್ಲಿ ಚಿತ್ರ ಮಾಡಬೇಕು ಎಂದು ನಾನು ಮತ್ತು ನನ್ನ ಅಮ್ಮ ಸೇರಿ ಕಥೆ ಮಾಡಿದೆವು. ಚಿತ್ರಕ್ಕೆ ಬೇಕಾಗುವ ಕಮರ್ಷಿಯಲ್ ಅಂಶಗನ್ನು ಸೇರಿಸಿ ನಾನು ಮತ್ತು ನನ್ನ ಕಸಿನ್ಸ್ ಹಾಗು ತಂದೆ ಸೇರಿ ಜೆರ್ಸಿ 10 ಚಿತ್ರ ಮಾಡಿದ್ದೇವೆ. ಬೇರೆಯವರ ಥರ ಲವ್ ಸ್ಟೋರಿ ಅಂತ ಅಲ್ಲ ವಿಭಿನ್ನವಾದ ಚಿತ್ರ ನೀಡಬೇಕು ಎನ್ನುವ ಉದ್ದೇಶ ಮತ್ತು ತುಡಿತದಿಂದ ಮಾಡಿದ ಚಿತ್ರ. ಎಲ್ಲರಿಗೂ ಇಷ್ಟವಾಗಲಿದೆ ಎನ್ನುವ ವಿಶ್ವಾಸ ಅವರದು.
- ಹಾಕಿ ಬಗ್ಗೆ ಸಿನಿಮಾ ಮಾಡಲು ಪ್ರೇರಣೆ ಏನು? ಅಥವಾ ನೀವು ಕೊಡಗಿನವರು ಅನ್ನುವ ಕಾರಣಕ್ಕಾಗಿ ಸಿನಿಮಾ ಮಾಡಿದ್ದಿರಾ
ಕೊಡಗಿನವನು ಎನ್ನುವುದು ಹೌದು. ನಮ್ಮಲ್ಲಿ ಹಾಕಿ ಕ್ರೀಡೆಯ ಬಗ್ಗೆ ಜನರು ಹೆಚ್ಚು ಆಸಕ್ತಿ ಹೊಂದಿದ್ದಾರೆ. ಇದೂ ಕೂಡ ಚಿತ್ರ ಮಾಡಲು ಒಂದು ಕಾರಣ. ಸಾಮಾನ್ಯವಾಗಿ ಎಲ್ಲರೂ ಲವ್ ,ಆಕ್ಷನ್, ಥ್ರಿಲ್ಲರ್ ಸಿನಿಮಾ ಮಾಡುವ ಮಂದಿಯೇ ಹೆಚ್ಚು ಹೀಗಾಗಿ ನಾವ್ಯಾಕೆ ಹಾಕಿ ಕುರಿತು ಚಿತ್ರ ಮಾಡಬಾರದು ಎಂದು ಯೋಚನೆ ಬಂದಾಗ ಆಗಿದ ಸಿನಿಮಾ ಜೆರ್ಸಿ ನಂ 10. ಹಾಕಿ ಕ್ರೀಡೆಯ ಕುರಿತಾದ ನಾಡಿಮಿಡಿತ ಜನರಿಗೆ ಗೊತ್ತಾಗಬೇಕು. ಈ ಕಾರಣದಿಂದಲೂ ಚಿತ್ರ ಮಾಡಲು ಮೂಲ ಕಾರಣ ಕೂಡ.
- ಜೆರ್ಸಿ ನಂ 10 ಮೂಲಕ ಏನನ್ನು ಹೇಳಲು ಹೊರಟಿದ್ದೀರಿ.
ಹಾಕಿ ಕ್ರೀಡೆಯ ಬಗ್ಗೆ ಮತ್ತಷ್ಟು ಅರಿವು ಮೂಡಿಸುವ ಉದ್ದೇಶ ಹೊಂದಲಾಗಿದೆ. ಇದರ ಜೊತೆಗೆ ಹಾಕಿ ಕ್ರೀಡೆಯನ್ನು ನಂಬಿಕೊಂಡ ಹುಡುಗನೊಬ್ಬ ಏನೆಲ್ಲಾ ಸಮಸ್ಯೆ ಎದುರಿಸುತ್ತಾನೆ. ಜೊತೆಗೆ ಚಿತ್ರದ ಮೂಲಕ ಯುವ ಜನರ ಕೋಪ, ತಾಪ ತಲ್ಲಣಗಳನ್ನು ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ. ಹೀಗಾಗಿ ಚಿತ್ರ ಎಲ್ಲರಿಗೂ ಇಷ್ಟವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು ಆದ್ಯಾ ತಿಮ್ಮಯ್ಯ.
- ಚಿತ್ರದಲ್ಲಿ ಮೊಮ್ಮೊಗನ ಬಗ್ಗೆ ತಾತ ಕಂಡ ಕನಸು ಈಡೇರುತ್ತಾ?
ಚಿತ್ರದಲ್ಲಿ ತಾತನ ಪಾತ್ರವನ್ನು ಹಿರಿಯ ಕಲಾವಿದ ದತ್ತಣ್ಣ ಮಾಡಿದ್ದಾರೆ. ಅವರಿಗೆ ಮೊಮ್ಮಗ ದೊಡ್ಡ ಹಾಕಿ ಆಟಗಾರ ಆಗಬೇಕು ಎನ್ನುವ ಕನಸು ಕಂಡವರು. ಅದಕ್ಕಾಗಿ ಮೊಮ್ಮೊಗನ್ನು ಶಿಸ್ತಿನಿಂದ ಬೆಳಿಸಿರುತ್ತಾರೆ. ತಾತನ ಕನಸು ನನಸಾಗುತ್ತಾ ಇಲ್ಲವೆ ಎನ್ನುವುದನ್ನು ಚಿತ್ರದಲ್ಲಿ ನೋಡಬೇಕು ಎಂದರು.
ಜೀವನದಲ್ಲಿ ಎದುರಾಗುವ ಕಷ್ಟಗಳು, ಆಗಾಗ ಪ್ರೀತಿಯಲ್ಲಿ ಬೀಳುವುದರಿಂದ ಸಮಸ್ಯೆ ಎದುರಾಗುತ್ತದೆ ಇದನ್ನೆಲ್ಲಾ ಮೆಟ್ಟಿನಿಂತು ಹೇಗೆ ಸಾದನೆ ಮಾಡಲು ಮುಂದಾಗುತ್ತಾನೆ ಎನ್ನುವುದು ಚಿತ್ರದ ಕುತೂಹಲ.
- ಚಿತ್ರದ ಮೂಲಕ ಏನನ್ನು ಹೇಳಲು ಹೊರಟ್ಟಿದ್ದೀರಿ.
ಇತ್ತೀಚಿನ ದಿನಗಳಲ್ಲಿ ಯುವಕರು ಅವರವರ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲಿಯೂ ಕೆಲಸಲ್ಲಿ ಮಗ್ನ ರಾಗಿದ್ದಾರೆ. ಯಾರೂ ಕೂಡ ಸಾದನೆ ಕಡೆ ಗಮನ ಹರಿಸುತ್ತಿಲ್ಲ. ಹೀಗಾಗಿ ಪ್ರತಿಯೊಬ್ಬರೂ ಯುವಕರು ಕನಸು ಕಾಣಬೇಕು ಹೊಸ ಆಲೋಚನೆ ಮೂಲಕ ಗುರು ಸಾದಿಸುವ ಕೆಲಸ ಮಾಡಬೇಕು.
ಯಾವುದೇ ಕೆಲಸ ಮಾಡಬೇಕಾದರೆ ಗುರಿ ಇರಬೇಕು. ಗುರಿ ನೋಡಿಕೊಂಡು ಸಾಧನೆ ಮಾಡಬೇಕನ್ನುವುದನ್ನು ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇವೆ.
- ಸುದೀಪ್ ಸಾರ್ ದೊಡ್ಡ ಅಭಿಮಾನಿ ನಾನು.
ಚಿಕ್ಕಂದಿನಿಂದಲೂ ನಟ ಕಿಚ್ಚ ಸುದೀಪ್ ಅವರ ದೊಡ್ಡ ಅಭಿಮಾನಿ ನಾನು. ಹೀಗಾಗಿ ಅವರ ಹಾದಿಯಲ್ಲಿ ನಡೆಯುವ ಕನಸು ಕಂಡಿದ್ದೇನೆ. ಸುದೀಪ್ ಅಭಿಮಾನಿಯಾಗಿರುವ ಕಾರಣ ಹುಚ್ಚದ ಚಿತ್ರದ ಶೈಲಿಯಲ್ಲಿ ನನ್ನ ಬಾಡಿ ಲಾಂಗ್ವೇಜ್ ಬದಲು ಮಾಡಿಕೊಂಡಿದ್ದೇನೆ.
ಚಿತ್ರದ ಮೂಲಕ ಪ್ರೇಕ್ಷರನ್ನು ಬಡಿದೆಬ್ಬಿಸುವ ಕೆಲಸ ಮಾಡಲಾಗಿದೆ. ಪ್ರತಿಯೊಬ್ಬ ಯುವ ಜನರು ನೋಡುವ ಚಿತ್ರ ಜೆರ್ಸಿ ನಂ 10.
” ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಚಿತ್ರ ಸಹಕಾರಿ
ಜೆರ್ಸಿ ನಂ 10 ಚಿತ್ರ ಚಿತ್ರರಂಗದಲ್ಲಿ ನನಗೆ ಬ್ರೇಕ್ ಕೊಡುತ್ತದೆಯೋ ಅಥವಾ ಇಲ್ಲವೋ ಗೊತ್ತಿಲ್ಲ ಆದರೆ ಕಲಾವಿದನಾಗಿ ಗುರುತಿಸಿಕೊಳ್ಳಲು ಚಿತ್ರರಂಗದ ಗಮನ ಸೆಳೆಯಲು ಚಿತ್ರ ಯಶಸ್ವಿಯಾಗಲಿದೆ ಎನ್ನುವ ವಿಶ್ವಾಸ ನನ್ನದು ಎನ್ನುತ್ತಾರೆ ಆದ್ಯಾ ತಿಮ್ಮಯ್ಯ.
ಚಿತ್ರದ ಮತ್ತೊಂದು ಹೈಲೈಟ್ ಅಂದರೆ ಕಥೆ. ಎಲ್ಲರಿಗೂ ಇಷ್ಟವಾಗಲಿದೆ.
- ಹಿರಿಯ ಕಲಾವಿದರ ಸಹಕಾರ ಹೇಗಿತ್ತು
ಚಿತ್ರದಲ್ಲಿ ತಾತನ ಪಾತ್ರದಲ್ಲಿ ಹಿರಿಯ ಕಲಾವಿದ ದತ್ತಣ್ಣ ಹಾಕಿ ತರಬೇತುದಾರನ ಪಾತ್ರದಲ್ಲಿ ಹಿರಿಯ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅಭಿನಯಿಸಿದ್ದಾರೆ. ಚಿತ್ರಕ್ಕೆ ಪೂರಕವಾಗಿ ಪಾತ್ರ ಸಾಗಿ ಬಂದಿದೆ. ಕೊನೆ ತನಕ ನನ್ನ ಬೆನ್ನಿಗೆ ನಿಂತಿದ್ದಾರೆ.ಕೊನೆಯಲ್ಲಿ ನಾನು ಗುರಿ ತುಪಿತ್ತೇನಾ ಅಥವಾ ಇಲ್ಲವಾ ಎನ್ನುವುದು ಚಿತ್ರದ ಕುತೂಹಲ ಎಂದರು.
ಚಿತ್ರದಲ್ಲಿ ಹಿರಿಯ ಕಲಾವಿದರ ಜೊತೆಗೆ ಚಂದನ್ ಆಚಾರ್ ಮಂಡ್ಯ ರಮೇಶ್, ಶಂಕರ್ ಅಶ್ವಥ್, ಎಂ.ಡಿ ಕೌಶಿಕ್, ಟೆನ್ನಿಸ್ ಕೃಷ್ಣ, ಜ್ಯೋತಿ ರೈ, ಸೇರಿದಂತೆ ದೊಡ್ಡ ತಾರಾಗಣವಿದೆ.ಎಲ್ಲರೂ ಅವರವರ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇದು ಚಿತ್ರಕ್ಕೆ ಫಸ್ಲಪಾಯಿಂಟ್