Ninasam Satish Interview “ಮ್ಯಾಟ್ನಿ” ಹಾರರ್ ಕಾಮಿಡಿ ಚಿತ್ರ; ಎಲ್ಲರಿಗೂ ಇಷ್ಟವಾಗುತ್ತೆ : ನಟ ನೀನಾಸಂ ಸತೀಶ್
“ಪ್ರೆಟ್ರೋಮ್ಯಾಕ್ಸ್” ಚಿತ್ರದ ಬಳಿಕ ಪ್ರತಿಭಾನ್ವಿತ ನಟ ನೀನಾಸಂ ಸತೀಶ್ ಅವರ ಬಹು ನಿರೀಕ್ಷಿತ ಚಿತ್ರ “ಮ್ಯಾಟ್ನಿ” ಚಿತ್ರ ಇದೇ ಶುಕ್ರವಾರ . ಏಪ್ರಿಲ್ 5 ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಹಾರರ್ ಕಾಮಿಡಿ ಜಾನರ್ ಕಥೆ ಹೊಂದಿರುವ ಚಿತ್ರ ನಟ ಸತೀಶ್ ಚಿತ್ರ ಜೀವನದಲ್ಲಿ ವಿಶೇಷ ಮತ್ತು ವಿಭಿನ್ನ.
“ಆಯೋಗ್ಯ” ಚಿತ್ರದ ಯಶಸ್ಸಿನ ನಂತರ ನಟ ನೀನಾಸಂ ಸತೀಶ್ ಮತ್ತು ನಟಿ ರಚಿತಾ ರಾಮ್ ಜೋಡಿ ಮತ್ತೊಮ್ಮೆ ಮೋಡಿ ಮಾಡಲು “ಮ್ಯಾಟ್ನಿ” ಜೊತೆ ಸೇರಿದ್ಧಾರೆ. ಇವರ ಜೊತೆಗೆ ಮತ್ತೊಬ್ಬ ನಟಿ ಅದಿತಿ ಪ್ರಭುದೇವ ಕೂಡ ಸಾಥ್ ನೀಡಿದ್ದಾರೆ.
“ಮ್ಯಾಟ್ನಿ” ಚಿತ್ರ ಬಿಡುಗಡೆಗೆ ಸಜ್ಜಾಗಿರುವ ಹಿನ್ನೆಲೆಯಲ್ಲಿ ಚಿತ್ರದ ಮೇಲಿನ ನಿರೀಕ್ಷೆ ಸೇರಿದಂತೆ ಹಲವು ವಿಷಯಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ ನಟ ನೀನಾಸಂ ಸತೀಶ್.
• “ಮ್ಯಾಟ್ನಿ” ಚಿತ್ರ ಈ ವಾರ ತೆರೆಗೆ ಬರುತ್ತಿದೆ. ಯಾವ ಜಾನರ್ ಚಿತ್ರ. ಈ ಬಗ್ಗೆ ಹೇಳುವುದಾದರೆ.
“ ಮ್ಯಾಟ್ನಿ” ಹಾರರ್ ಮತ್ತು ಕಾಮಿಡಿ ಜಾನರ್ ಕಥಾವಸ್ತು ಇರುವ ಚಿತ್ರ ವಿಶೇಷ. ಸಂಪೂರ್ಣ ಮನರಂಜನೆಗೆ ಒತ್ತು ನೀಡಲಾಗಿದೆ. ಚಿತ್ರ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ಮನೆ ಮಂದಿಯೆಲ್ಲಾ ಕುಳಿತು ನೋಡಬಹುದಾದ ಸಿನಿಮಾ. ಎಲ್ಲಾ ವಯೋಮಾನದವರಿಗೆ ಇಷ್ಟವಾಗಲಿದೆ
• ಮ್ಯಾಟ್ನಿ ಚಿತ್ರ ತ್ರಿಕೋನ ಪ್ರೇಮಕಥೆಯಾ ಚಿತ್ರವಾ?
“ಮ್ಯಾಟ್ನಿ” ಒಂದು ರೀತಿ ಟ್ರಯಾಂಗಲ್ ಲವ್ ಸ್ಟೋರಿಯ ಚಿತ್ರ. ಸಿನಿಮಾದಲ್ಲಿ ನಟಿ ರಚಿತಾ ರಾಮ್, ಅದಿತಿ ಪ್ರಭುದೇವ ಇದ್ದಾರೆ. ಹೀಗಾಗಿ ನೀವೆ ಊಹಿಸಿಕೊಳ್ಳಿ. ಹೊಸತನಕ್ಕೆ ಒತ್ತು ನೀಡಲಾಗಿದೆ. ಎಲ್ಲರಿಗೂ ಇಷ್ಟವಾಗಲಿದೆ,
• ನಿಮ್ಮ ಕೆರಿಯರ್‍ಗೆ ಚಿತ್ರ ಎಷ್ಟು ಮುಖ್ಯ, ಈ ಬಗ್ಗೆ ಹೇಳುವುದಾದರೆ
ಪ್ರತಿಯೊಂದು ಸಿನಿಮಾವೂ ಮುಖ್ಯ. ಚಿತ್ರದ ಯಶಸ್ಸು ಮಾರುಕಟ್ಟೆ ಮೇಲೆ ನಿರ್ಧಾರ ಮಾಡುತ್ತದೆ. ಈ ಚಿತ್ರದಲ್ಲಿ ಹೊಸತನವಿದೆ. ಜೊತೆಗೆ ಜನರು ಆಶ್ಚರ್ಯವಾಗುವ ಸಂಗತಿಗಳಿವೆ. ಹೀಗಾಗಿ ಜನರು ಒಪ್ಪಿಕೊಳ್ಳುವ ವಿಶ್ವಾಸವಿದೆ. ಇದುವರೆಗೂ ತಾವು ಮಾಡದ ಜಾನರ್ ಮತ್ತು ಕಥೆ ಚಿತ್ರದಲ್ಲಿದೆ.
• ಚಿತ್ರಕ್ಕೆ ದರ್ಶನ್ ಸರ್ ಬೆಂಬಲ ನೀಡಿದ್ದಾರೆ. ಇದರ ಬಗ್ಗೆ ಹೇಳುವುದಾದರೆ.
“ಮ್ಯಾಟ್ನಿ” ಚಿತ್ರಕ್ಕೆ ಬೆಂಬಲವಾಗಿ ಹಿರಿಯ ನಟರಾದ ಶಿವಣ್ಣ ಮತ್ತು ದರ್ಶನ್ ನಿಂತಿದ್ದಾರೆ. ಇದು ಇಡೀ ಚಿತ್ರತಂಡಕ್ಕೆ ಡಬ್ಬಲ್ ಖುಷಿ ನೀಡಿದೆ. ದರ್ಶನ್ ಸಾರ್ ಟ್ರೈಲರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಶಿವಣ್ಣ ಹಾಡು ಬಿಡುಗಡೆ ಮಾಡಿ ತಂಡಕ್ಕೆ ಬೆಂಬಲ ನೀಡಿದ್ಧಾರೆ. ಹೀಗಾಗಿ ಚಿತ್ರ ಯಶಸ್ಸುಗಳಿಸುವ ವಿಶ್ವಾಸವಿದೆ. ಇಬ್ಬರು ಹಿರಿಯ ಪ್ರೀತಿ, ಬೆಂಬಲ ಆಶೀರ್ವಾದಕ್ಕೆ ಸದಾಋಣಿ.
• ಆಯೋಗ್ಯ ಚಿತ್ರದ ನಂತರ ರಚಿತಾ ರಾಮ್ ಮತ್ತು ನೀವು ಜೊತೆಯಾಗಿದ್ದೀರಿ. ನಿರೀಕ್ಷೆ ಎಷ್ಟಿದೆ
ಆಯೋಗ್ಯ ಚಿತ್ರ ಪ್ರೇಮಕಥೆಯ ತಿರುಳಿನಿಂದ ಎಲ್ಲರಿಗೂ ಇಷ್ಟವಾಗಿತ್ತು. ಮ್ಯಾಟ್ನಿ, ಹೊಸತನದ ಕಥೆ ಮತ್ತು ನಿರೂಪಣಾ ಶೈಲಿಯಿಂದ ಭಿನ್ನವಾಗಿ ಮೂಡಿಬಂದಿದೆ. ಪ್ರೇಕ್ಷಕನಿಗೂ ಹೊಸತನ ಕಾಣಲಿದೆ. ಚಿತ್ರದ ಮೇಲೆ ನಿರೀಕ್ಷೆ ಕೂಡ ದುಪ್ಪಟ್ಟಾಗಿದೆ
• ಚಿತ್ರ ತಡವಾಯಿತು ಅಲ್ವಾ ಕಾರಣ ಏನು?
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಚಿತ್ರ ಬಿಡುಗಡೆಯಾಗಬೇಕಾಗಿತ್ತು ಕೊರೊನಾ ಕಾರಣದಿಂದ ಚಿತ್ರ ವಿಳಂಬವಾಯಿತು, ತಡವಾದರೂ ಚಿತ್ರ ಚೆನ್ನಾಗಿ ಮೂಡಿಬಂದಿದೆ, ಜನರಿಗೆ ಇಷ್ಟವಾಗಲಿದೆ. ಚಿತ್ರದಲ್ಲಿ ನಟರಾದ ನಾಗಭೂಷಣ್ ,ಶಿವರಾಜ ಕೆ ಆರ್ ಪೇಟೆ, ಪೂರ್ಣ ಮತ್ತು ದಿಗಂತ್ ದಿವಾಕರ್ ಇದ್ದಾರೆ. ಹೀಗಾಗಿ ಮನರಂಜನೆಗೆ ಮೋಸವಿಲ್ಲ. ಹಾಡುಗಳು,ಟ್ರೈಲರ್, ಟೀಸರ್ ಗಮನ ಸೆಳೆದಿದೆ, ಚಿತ್ರ ಕೂಡ ಜನರಿಗೆ ಇಷ್ಟವಾಗಲಿದೆ ಎನ್ನುವ ವಿಶ್ವಾಸವಿದೆ
• ಚಿತ್ರದಲ್ಲಿ ಯಾರೆಲ್ಲಾ ಕಲಾವಿದರಿದ್ದಾರೆ
ಚಿತ್ರವನ್ನು ಮನೋಹರ್ ಕಾಂಪಲ್ಲಿ ನಿರ್ದೇಶನ ಮಾಡಿದ್ದು ಪಾರ್ವತಿ ಎಸ್.ಗೌಡ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಕಲಾವಿದರಾದ ನಾಗಭೂಷಣ್ ,ಶಿವರಾಜ ಕೆ ಆರ್ ಪೇಟೆ, ಪೂರ್ಣ ಮತ್ತು ದಿಗಂತ್ ದಿವಾಕರ್ ಜೊತೆ ಗೂಡಿರುವುದು ಮನರಂಜನೆಯ ಮಹಾಪೂರ ಖಚಿತ. ಜೊತೆಗೆ ಪೂರ್ಣ ಚಂದ್ರ ತೇಜಸ್ವಿ ಸಂಗೀತ, ಸುಧಾಕರ್ ರಾಜ್ ಕ್ಯಾಮರಾ ಚಿತ್ರಕ್ಕಿದೆ.