“ಬೈರಾದೇವಿ”ಯ ಕಾಳಿ ಪಾತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ನೋಡಿ ಭಯವಾಗುತ್ತಿತ್ತು: ನಟ ರಮೇಶ್ ಅರವಿಂದ್
ಆಪ್ತಮಿತ್ರ” ಚಿತ್ರದ ನಾಗವಲ್ಲಿಯ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ಮುಗಿಸಿ ಬಂದಾಗ ನಟಿ ಸೌಂದರ್ಯ ಅವರನ್ನು ನೋಡೋಕೆ ಭಯವಾಗುತ್ತಿತ್ತು. ಆ ರೀತಿ “ಬೈರಾದೇವಿ” ಚಿತ್ರದಲ್ಲಿನ ಕಾಳಿ ಪಾತ್ರದಲ್ಲಿ ನಟಿ ರಾಧಿಕಾ ಅವರನ್ನು ಕಂಡೆ. ಅವರ ಕಣ್ಣುಗಳನ್ನು ನೋಡಿ ಭಯ ಆಗುತ್ತಿತ್ತು ಎಂದು ಹಿರಿಯ ನಟ ರಮೇಶ್ ಅರವಿಂದ್ ಹೇಳಿದ್ದಾರೆ.
ಬಹಳ ದಿನಗಳ ನಂತರ ರಾಧಿಕಾ ಕುಮಾರಸ್ವಾಮಿ ನಟಿಸಿ ನಿರ್ಮಾಣ ಮಾಡಿರುವ “ಬೈರಾದೇವಿ” ಚಿತ್ರದಲ್ಲಿ ಕನ್ನಡದ ಬಹುಮುಖ ಪ್ರತಿಭೆ,ಸರಳ ಸಜ್ಜನಿಕೆ ಮತ್ತೊಂದು ಹೆಸರಾಗಿರುವ ರಮೇಶ್ ಅರವಿಂದ್ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ವಿಭಿನ್ನ ಪಾತ್ರದ ಮೂಲಕ ಜನ ಮನಗೆಲ್ಲಲು ಮುಂದಾಗಿದ್ದಾರೆ.
“ಬೈರಾದೇವಿ” ಚಿತ್ರದ ಟ್ರೈಲರ್ ಬಿಡುಗಡೆ ಮತ್ತು ಪ್ರೀರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ರಮೇಶ್ ಅರವಿಂದ್,
ಚಿತ್ರದ ಟ್ರೈಲರ್ ನೋಡಿದರೆ ಆಪ್ತಮಿತ್ರ’ ಚಿತ್ರ ಮತ್ತೆ ಮತ್ತೆ ಕಾಡಿತ್ತು. ನಟಿ ರಾಧಿಕಾ ಕುಮಾರಸ್ವಾಮಿ ಅವರರನ್ನು ಕಾಳಿ ಮೇಕಪ್‍ನಲ್ಲಿ ನೋಡಿದಾಗ, ಭಯ ಆಗುತ್ತೆ
ಮೇಡಂ ದಯವಿಟ್ಟು ಮೇಕಪ್ ತೆಗೆದು ಬನ್ನಿ ಎಂದಿದ್ದೆ. ಇದೇ ಮಾತನ್ನು `ಆಪ್ತಮಿತ್ರ’ ಚಿತ್ರದ ಚಿತ್ರೀಕರಣ ಸಮಯದಲ್ಲಿ ನಟಿ ಸೌಂದರ್ಯ ಅವರಿಗೂ ಇದೇ ಹೇಳಿದ್ದೆ ಎಂದಿದ್ಧಾರೆ.
“ಆಪ್ತಮಿತ್ರ” ಚಿತ್ರ ನೆನಪು ಮಾಡಿಕೊಂಡ ಅವರು ಮನೆಯಲ್ಲೊಂದು ಸಮಸ್ಯೆ ಇರುತ್ತದೆ. ಆಗ ಅವಿನಾಶ್ ಅವರು ಬಂದು ಇಲ್ಲಿ ಏನೋ ಸಮಸ್ಯೆ ಇದೆ ಎಂದು ಹೇಳುತ್ತಾರೆ. ಅದೇ ರೀತಿ ಈ ಚಿತ್ರದಲ್ಲಿ ಇನ್ನೊಂದು ಸಮಸ್ಯೆ ಎದುರಿಸುತ್ತಿರುತ್ತೀನಿ ಅದನ್ನು ಪರಿಹರಿಸೋಕೆ ” ಭೈರಾದೇವಿ’ ಬರುತ್ತಾರಾ, ಇಲ್ಲವೋ ಎಂಬುದನ್ನು ಚಿತ್ರದಲ್ಲಿ ನೋಡಬೇಕು ಎಂದರು.
ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದೇನೆ. ಚಿತ್ರದಲ್ಲಿ ಅವರಿಗಿರುವ ವೈರಿ ರಾಜ್ಯ,ದೇಶದವರಲ್ಲ, ಬದಲಿಗೆ ಈ ಲೋಕದಲ್ಲಿರುವವರೇ ಅಲ್ಲ. ಬೇರೆ ಲೋಕದಿಂದ ಬಂದ ಶಕ್ತಿಯ ವಿರುದ್ಧ ಹೋರಾಡಬೇಕು. ಪೊಲೀಸ್ ಅಧಿಕಾರಿ ಏನು ಮಾಡುತ್ತಾನೆ ಎನ್ನುವುದು ಕಥೆ. ಚಿಕ್ಕವಯಸ್ಸಿನಲ್ಲಿ “ದಿ ಎಕ್ಸೊರ್‍ಸಿಸ್ಟ್” ಚಿತ್ರ ನೋಡಿದ್ದೆ. ಚಿತ್ರದಲ್ಲಿ ತಲೆ ಇದಕ್ಕಿದ್ದಂತೆ ಹಿಂದೆ ತಿರುಗುವ ದೃಶ್ಯವಿದೆ.
ಅದನ್ನು ನೋಡಿ ಬಹಳ ಭಯವಾಗಿತ್ತು. ವಾಪಸ್ಸು ಬರುವಾಗ, ಕೆಲವು ಸ್ನೇಹಿತರು ಮಧ್ಯದಲ್ಲಿ ಇಳಿದು ಹೊರಟರು. ಕೊನೆಗೆ ನಾನೊಬ್ಬನೇ ಉಳಿದೆ. ಐದು ಜನ ಒಟ್ಟಿಗೆ ನೋಡುವುದು ಬೇರೆ. ಕೊನೆಗೆ ನಾನೊಬ್ಬನೇ. ವಾಪಸ್ಸು ಹೋಗುವಾಗ ರಾತ್ರಿ, ಕರೆಂಟ್ ಇರಲಿಲ್ಲ. ಒಬ್ಬನೇ ಮನೆ ತಲುಪಿಕೊಳ್ಳುವಷ್ಟರಲ್ಲಿ ಪ್ರಾಣ ಹೋದ ಅನುಭವ ಎಂದು ನೆನಪು ಮಾಡಿಕೊಂಡರು.
ಹಾರರ್ ಚಿತ್ರಗಳ ಮಜ, ಲವ್, ಆಕ್ಷನ್ ಚಿತ್ರಗಳನ್ನು ನೋಡಿದಾಗ, ಎಷ್ಟೋ ಬಾರಿ ಅದನ್ನು ಅಲ್ಲೇ ಮರೆತು ವಾಪಸ್ಸು ಬಂದುಬಿಟ್ಟಿರುತ್ತೇವೆ. ಆದರೆ, ಹಾರರ್ ಚಿತ್ರಗಳು ಜೊತೆಗೆ ಬರುತ್ತವೆ. `ಭೈರಾದೇವಿ’ ಆ ತರಹದ ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ನೋಡಬೇಕು ಮತ್ತು ಆ ಸೌಂಡ್ ಅನುಭವಿಸಬೇಕು’ ಎಂದು ಕೇಳಿಕೊಂಡರು
ಚಿತ್ರದಲ್ಲಿ ಕಾಶಿಯನ್ನು ನೋಡಲು ಆಗದ ಮಂದಿ ಬೈರಾದೇವಿ ನೋಡಿ. ಕಾಶಿಯನ್ನು ಬಹಳ ಸೆರೆ ಹಿಡಿಯಲಾಗಿದೆ ಪಕ್ಕದಲ್ಲಿ ಹೆಣಗಳನ್ನು ಸಾಲು ಸಾಲಾಗಿ ಸುಡುತ್ತಿದ್ದರು.ಅಲ್ಲಿಯೇ ಹೋಗಿ ಎನ್ನುತ್ತಿದ್ದರು ನಿರ್ದೇಶಕರು ಜೊತೆಗೆ ಬೆಂಗಳೂರಿನ ಸ್ಮಶಾನದಲ್ಲಿ 20 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ಶಾಂತಿನಗರದ ಸ್ಮಶಾನದಲ್ಲಿ ರಾತ್ರಿ ಚಿತ್ರೀಕರಣ ಮಾಡುವ ವೇಳೆ ಒಂದು ರಾತ್ರಿ ಒಬ್ಬರು ಲೇಡಿ ಕಾನ್ಸಟಬಲ್ ಸೆಲ್ಫಿ ಬೇಕು ಎಂದರು. `ಮೂರು ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ಒಂದು ದಿನ ಸಹ ಇಲ್ಲಿಗೆ ಬಂದಿರಲಿಲ್ಲ. ಪೆÇಲೀಸರೇ ಹಾಗೆ ಹೇಳುವಾಗ, ಇವರು 10 ದಿನ ಚಿತ್ರೀಕರಣ ಮಾಡಿದ್ದಾರೆ. ನಮ್ಮ ಪರಿಸ್ಥಿತಿ ಹೇಗಾಗಿರಬೇಡ ಎಂದು ಹೇಳಿದರು.
ನಟಿ ಅನುಪ್ರಭಾಕರ್ ಗೆ ಅಭಿನಂಧನೆ
“ಹೃದಯ ಹೃದಯ” ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದು 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಟಿ ಅನು ಪ್ರಭಾಕರ್ ಅವರನ್ನು ನಟ ರಮೇಶ್ ಅರವಿಂದ್ ಅಭಿನಂಧಿಸಿದರು.
ಹೃದಯ ಹೃದಯ ಚಿತ್ರದಲ್ಲಿ ನಾನು ಮತ್ತು ಶಿವರಾಜಕುಮಾರ್ ಇಬ್ಬರೂ ನಟಿಸಿದ್ದೆವು. ಅನು ಅವರ ಜೊತೆಗೆ ಎಂಟೊಂಬತ್ತು ಚಿತ್ರಗಳಲ್ಲಿ ನಟಿಸಿದ್ದೇನೆ. ಅವರ ಜೊತೆಗೆ ನಟಿಸಿದ್ದು ಅದ್ಭುತ ಅನುಭವ. ಆ ಚಿತ್ರದಲ್ಲೂ ಗಂಡ-ಹೆಂಡತಿಯಾಗಿ ನಟಿಸಿದ್ದೆವು. ಈ ಚಿತ್ರದಲ್ಲೂ ನಟಿಸಿದ್ದೇವೆ. ಇದೊಂದು ಬರೀ ಹಾರರ್ ಚಿತ್ರವಷ್ಟೇ ಅಲ್ಲ, ಫ್ಯಾಮಿಲಿ ಚಿತ್ರವೂ ಹೌದು. ಅಕ್ಟೋಬರ್ 3ರಂದು ಚಿತ್ರ ಬಿಡುಡಗೆಯಾಗುತ್ತಿದೆ ಚಿತ್ರ ನೋಡಿ ಎಂದು ಕೇಳಿಕೊಂಡರು.
ಈ ವೇಳೆ ನಟಿ ಅನುಪ್ರಭಾಕರ್ ಅವರು ಬೈರಾದೇವಿ ಚಿತ್ರದಲ್ಲಿ ನಟ ರಮೇಶ್ ಅರವಿಂದ್ ಅವರ ಪತ್ನಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಹಲವು ವರ್ಷಗಳ ನಂತರ ಅವರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಚಿತ್ರರಂಗಕ್ಕೆ ಬಂದು 25 ವರ್ಷ ಆಗಿದೆ. ಈ ಖುಷಿ ಸಂತಸದಲ್ಲಿ ಪ್ರತಿಯೊಬ್ಬರು ಭಾಗಿ ಎಂದರು.