“ಬೈರಾದೇವಿ” ಚಿತ್ರರಂಗದಲ್ಲಿ ಕೊನೆಯ ಚಿತ್ರವಾಗಬಹುದು : ರಾಧಿಕಾ ಕುಮಾರಸ್ವಾಮಿ ಭಾವುಕ
“ಬೈರಾದೇವಿ” ಚಿತ್ರೀಕರಣದ ಸಮಯದಲ್ಲಿ ಅನೇಕ ಅಡೆ ತಡೆ ದಾಟಿ ಸಿನಿಮಾ ಚಿತ್ರೀಕರಣ ಪೂರ್ಣಗೊಳಿಸಿದ್ದೇವೆ. ಚಿತ್ರಕ್ಕಾಗಿ ಸಾಕಷ್ಟು ಶ್ರಮ ಹಾಕಿದ್ದೇನೆ. ಚಿತ್ರ ಗೆದ್ದರೆ ಚಿತ್ರರಂಗದಲ್ಲಿ ಇನ್ನಷ್ಟು ಸಿನಿಮಾ ಮಾಡುವೆ ಸೋತರೆ. ಬೈರಾದೇವಿಯೇ ನನ್ನ ಕಡೆಯ ಚಿತ್ರವಾಗಬಹುದು…..
ಹೀಗಂತ ಹೇಳುತ್ತಲೇ ಹಿರಿಯ ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಅರೆ ಕ್ಷಣೆ ಭಾವುಕರಾಗಿ ಕಣ್ಣಲ್ಲಿ ನೀರು ತುಂಬಿಕೊಂಡ ಘಟನೆಗೆ ಸಾಕ್ಷಿಯಾಯಿತು.
ಅಕ್ಟೋಬರ್ 3 ರಂದು ರಾಧಿಕಾ ಕುಮಾರಸ್ವಾಮಿ ನಿರ್ಮಾಣ ಮತ್ತು ನಟನೆಯಲ್ಲಿ ಮೂಡಿಬಂದಿರುವ “ಬೈರಾದೇವಿ” ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಟ್ರೈಲರ್ ಬಿಡುಗಡೆ ಮತ್ತು ಚಿತ್ರದ ಪ್ರಿರಿಲೀಸ್ ಕಾರ್ಯಕ್ರಮದಲ್ಲಿ ಅಚ್ಚರಿ ಹೇಳಿಕೆ ನಿಡುವ ಮೂಲಕ ಬೆಚ್ಚಿ ಬೀಳುವಂತೆ ಮಾಡಿದ್ದಾರೆ.
ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ರಾಧಿಕಾ ಕುಮಾರಸ್ವಾಮಿ,. ನಿರ್ದೇಶಕ ಶ್ರೀಜೈ ಬಂದು ಕತೆ ಹೇಳದಿದ್ದರೆ, ಬೈರಾದೇವಿ ಚಿತ್ರ ಆಗುತ್ತಿರಲಿಲ್ಲ, ಚಿತ್ರೀಕರಣದ ಸಮಯದಲ್ಲಿ ಸಾಕಷ್ಟು ಅಡೆ ತಡೆ ಎದುರಿಸಿದ್ದೇವೆ. ಎಲ್ಲವನ್ನು ದಾಟಿ ಈಗ ಬಿಡುಗಡೆ ಹಂತಕ್ಕೆ ತಂದಿದ್ದೇವೆ.ಅದರ ಹಿಂದೆಯೂ ಒಂದು ಕತೆ ಇದೆ. ಚಿತ್ರೀಕಣ ಪೂರ್ಣಗೊಂಡ ನಂತರ ಬಿಡುಗಡೆ ವಿಚಾರವಾಗಿ ಸುಮ್ಮನಿದ್ದೆ. ವಿಮಾನ ನಿಲ್ದಾಣದಿಂದ ಹೊರ ಬರುವ ವೇಳೆ ದಂಪತಿಯೊಂದು ಶಿವ ಪಾರ್ವತಿಯ ರೂಪದಲ್ಲಿ ಆಡಿದ ಮೆಚ್ಚುಗೆಯ ಮಾತು ಬೈರಾದೇವಿ ಚಿತ್ರ ಬಿಡುಡಗೆಗೆ ಪೂರಕವಾಯಿತು.
ಈ ದಂಪತಿ `ಭೈರಾದೇವಿ’ಯಾಗಿ ಬಂದರು. ಭೈರಾ ಎಂದರೆ ಈಶ್ವರ, ದೇವಿ ಎಂದರೆ ಪಾರ್ವತಿ. ನನ್ನ ಜೀವನದಲ್ಲಿ ಬಂದು ಒಳ್ಳೆಯ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಪ್ರೇರಣೆ ಕೊಟ್ಟು ಹೋದರು’. ಹೀಗಾಗಿ ಅಕ್ಟೋಬರ್ 3 ರಂದು ಬೈರಾದೇವಿ ಬಿಡುಗಡೆಯಾಗುತ್ತಿದೆ ಎಂದರು
ಬೈರಾದೇವಿ ಚಿತ್ರ ಗೆದ್ದರೆ ಕನ್ನಡದಲ್ಲಿ ಇನ್ನು ಹಲವು ಸಿನಿಮಾ ಮಾಡುತ್ತೇನೆ. ಸೋತರೆ ಇದು ನನ್ನ ಕಡೆಯ ಸಿನಮಾ ಆಗಲಿದೆ. ನಾನು ಚಿತ್ರರಂಗದಲ್ಲಿ ಮುಂದುವರಿಯುವುದು ಅಥವಾ ಬಿಡುವುದು ಪ್ರೇಕ್ಷಕರ ಮಡಿಲಿಗೆ ಹಾಕಿದ್ದೇನೆ, ನಿರ್ದೇಶಕರು ಈ ಸಿನಿಮಾ ಮಾಡಿಸಿದ್ದಾರೆ. ಚಿತ್ರ ಯಶಸ್ಸಾಗುತ್ತದೆ ನಂಬಿಕೆ ನನಗಿದೆ. ಕುಟುಂಬ ಸಮೇತ ನೋಡುವಂತಹ ಸಿನಿಮಾ ಇದು ಎಂದರು
ಬೈರಾದೇವಿ ಚಿತ್ರೀಕರಣದ ಸಮಯದಲ್ಲಿ ಸಾಕಷ್ಟು ತೊಂದರೆ ಎದುರಿಸಿದ್ದೇನೆ, ನಾನು ಮಾತ್ರವಲ್ಲಿ ಇಡೀ ತಂಡ ಹಲವು ಸಮಸ್ಯೆ ಎದುರಿಸಿದೆ.ಕಲಾವಿದರು ಯಾಕೆ ಇಷ್ಟೊಂದು ಕಷ್ಟಪಡುತ್ತಾರೆ ಎಂದು ಕೆಲವೊಮ್ಮೆ ಅನಿಸುತ್ತದೆ. ಹಾಡಿನ ಹಿಂದೆ ಹಲವರ ಶ್ರಮ ಇದೆ. ಅಘೋರಿ ಗೆಟಪ್ ಹಾಕಿಕೊಂಡು ಹೆಣ್ಮಕ್ಕಳು ಅಳೋರು. ಮೈ ಉರಿಯುತ್ತಿದೆ ಎಂದು ಹೇಳುತ್ತಿದ್ದರು. ತುಂಬಾ ಸಮಸ್ಯೆ ಎದುರಿಸಿದ್ದಾರೆ. ಅವರೆಲ್ಲರಿಗೂ ಧನ್ಯವಾದಗಳು. ಚಿತ್ರದ ಶ್ರಮವನ್ನು ಪ್ರೇಕ್ಷಕರು ಒಪ್ಪಿಕೊಂಡರೆ ಸಾರ್ಥಕ ಎಂದರು
ನಟ ರಮೇಶ್ ಅರವಿಂದ್ ಅವರು ಚಿತ್ರದಲ್ಲಿ ಪಾತ್ರ ಮಾಡಲು ಒಪ್ಪದಿದ್ದರೆ ಭೈರಾದೇವಿ ಚಿತ್ರ ಆಗುತ್ತಿರಲಿಲ್ಲ ಪಾತ್ರಕ್ಕೆ ಅವರೇ ಬೇಕಿತ್ತು. ನಿರ್ದೇಶಕರು ಸಹ ಅದೇ ಹೇಳಿದ್ದರು. ರಮೇಶ್ ಬಿಟ್ಟರೆ ಬೇರೆ ಯಾರೂ ಈ ಪಾತ್ರಕ್ಕೆ ಆಗಲ್ಲ ಎಂದು ಹೇಳಿದ್ದರು. ಇನ್ನು, ಅನು ಪ್ರಭಾಕರ್ ಅವರ ಜೊತೆಗೆ
‘ತವರಿಗೆ ಬಾ ತಂಗಿ’ ಚಿತ್ರದಲ್ಲಿ ನಟಿಸಿದ್ದೆ
ಆ ಸಂದರ್ಭದಲ್ಲಿ ಹೊಸಬಳು. ಅನು ಅಕ್ಕ ಅವರಿಂದ ಸಾಕಷ್ಟು ಕಲಿತಿದ್ದೇನೆ. ನನಗೆ ಅವರು ನಟನೆ ಹೇಳಿಕೊಡುತ್ತಿದ್ದರು ಆಗ ಅವರ ಮುಖದಲ್ಲಿದ್ದ ನಗು, ಈಗಲೂ ಹಾಗೆಯೇ ಇದೆ ಸ್ವಲ್ಪವೂ ಬದಲಾಗಿಲ್ಲ ಭಜರಂಗಿ’ ಮೋಹನ್ ಅವರು ಮೂರು ಹಾಡುಗಳನ್ನು ಮಾಡಿಕೊಟ್ಟಿದ್ದಾರೆ. ಬಹಳ ಚೆನ್ನಾಗಿ ನೃತ್ಯ ನಿರ್ದೇಶನ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.