ಮೊದಲ ವಾರವೇ ಡಬ್ಬಲ್ ಶಾಕ್ ನೀಡಿದ ಬಿಗ್‍ಬಾಸ್: ಕರಿಬಸಪ್ಪ, ಅಮಿತ್ ಹೊರಕ್ಕೆ
ಹನ್ನೆರಡನೆ ಸೀಸನ್ ಬಿಗ್ ಬಾಸ್ ಈ ಹಿಂದಿನ ಸೀಸನ್‍ಗಳಂತೆ ಅಲ್ಲ ಎನ್ನುವುದನ್ನು ಬಿಗ್‍ಬಾಸ್ ಮತ್ತೊಮ್ಮೆ ನಿರೂಪಿಸಿದೆ. ಬಿಗ್ ಬಾಸ್ ಆರಂಭದ ದಿನವೇ ಕರಾವಳಿ ಬೆಡಗಿ ರಕ್ಷಿತಾ ಶೆಟ್ಟಿಯನ್ನು ಮನೆಯಿಂದ ಹೊರಹಾಕಿದ್ದ ಬಿಗ್‍ಬಾಸ್ ಮೊದಲ ವಾರ ಡಬ್ಬಲ್ ಶಾಕ್ ನೀಡಿದೆ.

12ನೇ ಆವೃತ್ತಿಯ ಬಿಗ್‍ಬಾಸ್‍ಗೆ ಜೋಡಿಯಾಗಿ ಮನೆ ಪ್ರವೇಶಿಸಿದ್ದ ಅಂತರಾಷ್ಟ್ರೀಯ ದೇಹದಾಡ್ಯ ಸ್ಪರ್ಧಿ ಕರಿಬಸಪ್ಪ ಮತ್ತು ಆರ್ ಜೆ ಅಮಿತ್ ಈ ವಾರ ಬಿಗ್‍ಬಾಸ್ ಮನೆಯಲ್ಲಿ ಇಬ್ಬರ ಪ್ರಯಾಣ ಅಂತ್ಯವಾಗಿದೆ. ಮೊದಲವಾರದ ಎಲಿಮಿನೇಷನ್‍ಲ್ಲಿ ಈ ಇಬ್ಬರು ಮನೆಯಿಂದ ಹೊರಬಂದಿದ್ಧಾರೆ.
ಮನೆಗೆ ಪ್ರವೇಶಿಸುವ ವೇಳೆ ಒಂದಷ್ಟು ನಿರೀಕ್ಷೆ ಮತ್ತು ಭರವಸೆ ಇಟ್ಟುಕೊಂಡು ಹೋಗಿದ್ದ ಕರಿಬಸಪ್ಪ, ಮತ್ತು ಮನೆಯಲ್ಲಿ ಇರಲು ನಾಟಕ ಮಾಡಬೇಕುಎಂದು ಹೇಳಿದ್ದ ಅಮಿತ್ ಮೊದಲ ವಾರ ಮನೆಯಿಂದ ಹೊರಬಂದಿದ್ದಾರೆ, ಈ ಮೂಲಕ ಒಂದೇ ವಾರಕ್ಕೆ ಈ ಬಾರಿಯ ಬಿಗ್‍ಬಾಸ್ ಪ್ರಯಾಣ ಮುಗಿಸಿದ್ದಾರೆ.
ಮೊದಲ ವಾರವೇ ಬಿಗ್‍ಬಾಸ್ ಜೋಡಿ ಎಲಿಮಿನೇಷನ್ ಮಾಡಿರುವ ಹಿನ್ನೆಲೆಯಲ್ಲಿ ಬಿಗ್‍ಬಾಸ್ ಮನೆಯಲ್ಲಿರುವ ಇತರೆ ಜೋಡಿ ಸ್ಪರ್ಧಿಗಳಲ್ಲಿ ನಡುಕು ಉಂಟಾಗಿದೆ, ಚೆನ್ನಾಗಿ ಆಡದಿದ್ದರೆ ಟಾಸ್ಕ್ ಮಾಡದಿದ್ದರೆ ಮುಂದಿನ ಬಾರಿ ನಾವೆಲ್ಲಿ ಮನೆಯಿಂದ ಹೊರಗೆ ಹೋಗಬೇಕೋ ಎನ್ನುವ ಆತಂಕ ಆರಂಭವಾಗಿದೆ.
ಕಿಚ್ಚನ ಜೊತೆ ವೇದಿಕೆಯ ಮೇಲೆ ಕರಿಬಸಪ್ಪ, ಓಟು ಹಾಕಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ಪ್ರತಿ ಚಿತ್ರದಿಂದ ಚಿತ್ರಕ್ಕೆ ತಕ್ಕಂತೆ ದೇಹ ಮಾರ್ಪಾಟು ಮಾಡಿಕೊಳ್ಳುತ್ತಿರುವ ಕಿಚ್ಚ ಸುದೀಪ್ ಅವರ ಶ್ರಮವನ್ನು ಹಾಡಿ ಹೊಗಳಿಸಿದ್ಧಾರೆ.
ಕರಿಬಸಪ್ಪನ ಮಾತಿಗೆ ಬಿದ್ದೂ ಬಿದ್ದು ನಕ್ಕ ಕಿಚ್ಚ ಸುದೀಪ್, ಇಲ್ಲಿ ಮಾತನಾಡಿದಷ್ಟು ಮನೆಯೊಳಗೆ ಮಾತನಾಡಿದ್ದರೆ ಹೊರಗೇ ಬರುತ್ತಿರಲಿಲ್ಲ ಎಂದು ಹೇಳಿ ಬೀಳ್ಕೊಟ್ಟರು.

