I have listened to 200 stories after the film “Bagheera”: I liked ‘Rudrayudham’ – Actor Srimuruli

“ಬಘೀರ” ಚಿತ್ರದ ಬಳಿಕ 200 ಕಥೆ ಕೇಳಿದ್ದೇನೆ: ಇಷ್ಟವಾಗಿದ್ದು ‘ರುದ್ರಾಯುಧಮ್’- ನಟ ಶ್ರೀಮುರುಳಿ - CineNewsKannada.com

“ಬಘೀರ” ಚಿತ್ರದ ಬಳಿಕ 200 ಕಥೆ ಕೇಳಿದ್ದೇನೆ: ಇಷ್ಟವಾಗಿದ್ದು ‘ರುದ್ರಾಯುಧಮ್’- ನಟ ಶ್ರೀಮುರುಳಿ

“ಬಘೀರ” ಚಿತ್ರದ ಯಶಸ್ಸಿನ ನಂತರ ಸುಮಾರು 200 ಕಥೆ ಕೇಳಿದ್ದೇನೆ. ಅದರಲ್ಲಿ ಇಷ್ಟ ಆಗಿದ್ದು ಮೂರು ಕಥೆಗಳು ಮಾತ್ರ. ಆ ಪೈಕಿ ಎರಡು ಚಿತ್ರಗಳ ಮುಹೂರ್ತ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಇತ್ತೀಚೆಗೆ ನೆರವೇರಿದೆ. “ಉಗ್ರಾಯುಧಮ್” ಕೂಡ ಒಂದು ಎಂದರು ನಟ ಶ್ರೀಮುರುಳಿ,

ನಿರ್ದೇಶಕ ರುದ್ರನಾಗ್ ಪಿರಿಯಾಡಿಕ್ ಡ್ರಾಮ ಕಥಾಹಂದರವನ್ನು “ಉಗ್ರಾಯುಧಮ್” ಮೂಲಕ ತೆರೆಗೆ ಕಟ್ಟಿಕೊಡಲು ಮುಂದಾಗಿದ್ದಾರೆ. ಅದಕ್ಕೆ ಪೂರಕವಾಗಿ ನಿರ್ಮಾಪಕ ಜಯರಾಮ್ ದೇವಸಮುದ್ರ ಅದ್ದೂರಿಯಾಗಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ ಎಂದರು

ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ “ ಉಗ್ರಾಯುಧಮ್” ಚಿತ್ರದ ಮುಹೂರ್ತಕ್ಕೆ ಹಿರಿಯ ನಿರ್ಮಾಪಕ ಎಸ್.ಎ.ಚಿನ್ನೇಗೌಡ ಆರಂಭ ಫಲಕ ತೋರುವ ಚಿತ್ರಕ್ಕೆ ಚಾಲನೆ ನೀಡಿದರು. ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಜೊತೆಗೂಡಿ ಶೀರ್ಷಿಕೆ ಅನಾವರಣ ಮಾಡಿ ತಂಡಕ್ಕೆ ಶುಭಹಾರೈಸಿದರು

ಈ ವೇಳೆ ಮಾತಿಗಿಳಿದ ನಟ ಶ್ರೀಮರುಳಿ,“ಬಘೀರ” ಚಿತ್ರದ ನಂತರ ಬಿಡುಗಡೆಯಾಗುತ್ತಿರುವ ಶ್ರೀಮುರಳಿ ಚಿತ್ರ ಯಾವುದು ಅಂತ ಕೇಳಿದರೆ ಅದರು “ಉಗ್ರಾಯುಧಮ್ ಎಂದು ಮಾಹಿತಿ ನೀಡಿದರು

ನಿರ್ದೇಶಕ ಪುನೀತ್ ರುದ್ರನಾಗ್ 700 ವರ್ಷಗಳ ಹಿಂದಿನ ಕಥೆಯನ್ನು ತೆರೆಯ ಮೇಲೆ ತರಲು ಮುಂದಾಗಿದ್ದಾರೆ. ನಿಜಕ್ಕೂ ಮಾಡಿಕೊಂಡಿರುವ ಕಥೆ ಬಹಳ ಚೆನ್ನಾಗಿದೆ. ಒಂದೊಳ್ಳೆ ಚಿತ್ರ ನಿಮ್ಮ ಮುಂದೆ ಬರುವುದಂತು ಖಂಡಿತ. ಆದಷ್ಟು ಬೇಗ ಈ ಚಿತ್ರ ತೆರೆಗೆ ಬರಲಿದೆ ಎಂದರು.

ನಿರ್ದೇಶಕ ಪುನೀತ್ ರುದ್ರನಾಗ್ ಮಾತನಾಡಿ ಚಿತ್ರರಂಗಕ್ಕೆ ಬಂದಾಗಿನಿಂದ ಪೆÇ್ರೀತ್ಸಾಹ ನೀಡುತ್ತಾ ಬಂದವರು ಶ್ರೀಮುರಳಿ ಹಾಗೂ ಕುಟುಂಬದವರು.ಮೊದಲ ನಿರ್ದೇಶನದ “ಉಗ್ರಾಯುಧಮ್” ಚಿತ್ರಕ್ಕೆ ಶ್ರೀಮುರಳಿ ನಾಯಕನಾಗಿರುವುದು ಸಂತಸ ತಂದಿದೆ ಏಳುನೂರು ವರ್ಷಗಳ ಹಿಂದಿನ ಪಿರಿಯಾಡಿಕ್ ಡ್ರಾಮ ಕಥಾಹಂದರ ಹೊಂದಿರುವ ಚಿತ್ರ. ನವೆಂಬರ್ ನಿಂದ ಚಿತ್ರೀಕರಣ ಆರಂಭವಾಗುತ್ತಿದೆ ಎಂದರು

ಸಕಲೇಶಪುರದ ಬಳಿ 135 ಎಕರೆ ವಿಸ್ತೀರ್ಣದ ಭೂಮಿಯಲ್ಲಿ ಅದ್ದೂರಿ ಸೆಟ್ ಹಾಕಲಾಗುತ್ತಿದ್ದು, ಅಲ್ಲೇ ಹೆಚ್ಚಿನ ಚಿತ್ರೀಕರಣ ನಡೆಯಲಿದೆ. ಡಾ.ರಾಜಕುಮಾರ್‍ಅಪ್ಪಟ ಅಭಿಮಾನಿ ಅಭಿನಯದ ಸಾಕಷ್ಟು ಐತಿಹಾಸಿಕ ಚಿತ್ರಗಳನ್ನು ನೋಡಿದ್ದೇನೆ. ಅದೇ ನನಗೆ ಚಿತ್ರ ನಿರ್ದೇಶನ ಮಾಡಲು ಸ್ಪೂರ್ತಿ. ನಿರ್ಮಾಪಕ ಜಯರಾಮ್ ದೇವಸಮುದ್ರ ಯಾವುದೇ ಕೊರತೆ ಬಾರದ ಹಾಗೆ ಚಿತ್ರ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ. ಚಿತ್ರದಲ್ಲಿ ಅನುಭವಿ ಕಲಾವಿದರ ಹಾಗೂ ತಂತ್ರಜ್ಞರ ದೊಡ್ಡ ತಂಡ ಇದೆ. ಮುಂದಿನ ದಿನಗಳಲ್ಲಿ ಈ ಕುರಿತು ಮಾಹಿತಿ ನೀಡುವುದಾಗಿ ತಿಳಿಸಿದರು .

ನಿರ್ಮಾಪಕ ಜಯರಾಮ್ ದೇವಸಮುದ್ರ ಮಾತನಾಡಿ, ಪಿರಿಯಾಡಿಕ್ ಡ್ರಾಮ ಕಥಾಹಂದರ ಹೊಂದಿರುವ ಚಿತ್ರವನ್ನು ನಿರ್ಮಾಣ ಮಾಡುತ್ತಿರುವುದು ಖುಷಿಯಾಗುತ್ತಿದೆಸಾಕಷ್ಟು ಕನ್ನಡದ ಚಿತ್ರಗಳು ವಿಶ್ವಮಟ್ಟದಲ್ಲಿ ಹೆಸರು ಮಾಡುತ್ತಿದೆ. ಆಸಾಲಿಗೆ ನಮ್ಮ ಚಿತ್ರ ಕೂಡ ಸೇರುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin