A parade of favorite serials throughout the week
ವಾರವಿಡೀ ನೆಚ್ಚಿನ ಧಾರಾವಾಹಿಗಳ ‘ಮಹಾಸಂಚಿಕೆಯ ಮೆರವಣಿಗೆ

ಮನರಂಜನೆಗೆ ಮತ್ತೊಂದು ಹೆಸರಾಗಿರುವ “ಜೀ ಕನ್ನಡ” ಜನಪ್ರಿಯ ಧಾರಾವಾಹಿಗಳಿಂದ ಈಗಾಗಲೇ ಮನೆ ಮಾತಾಗಿದೆ. ಇದೀಗ ಸೋಮವಾರದಿಂದ ಶುಕ್ರವಾರದವರೆಗೆ ನೆಚ್ಚಿನ ಧಾರಾವಾಹಿಗಳ ಮೂಲಕ ನಿಮಗೆ ಒಂದು ಗಂಟೆಗಳ ಮಹಾಸಂಚಿಕೆಯ ಮೆರವಣಿಗೆ ನೀಡಲು ಸಜ್ಜಾಗಿದೆ.
ಸೋಮವಾರ ಸಂಜೆ 6:30 ರಿಂದ 7:30ಕ್ಕೆ ಪುಟ್ಟಕ್ಕನ ಮಕ್ಕಳು, ಮಂಗಳವಾರ ಸಂಜೆ 7 ರಿಂದ 8 ಗಂಟೆಯವರೆಗೆ ಅಮೃತಧಾರೆ, ಬುಧವಾರ ರಾತ್ರಿ 8 ರಿಂದ 9 ಗಂಟೆಯವರೆಗೆ ಲಕ್ಷ್ಮಿ ನಿವಾಸ, ಗುರುವಾರ ರಾತ್ರಿ 9 ರಿಂದ 10 ಗಂಟೆಯವರೆಗೆ ಶ್ರಾವಣಿ ಸುಬ್ರಮಣ್ಯ, ಶುಕ್ರವಾರ ರಾತ್ರಿ 10 ರಿಂದ 11 ಗಂಟೆಯವರೆಗೆ ಬ್ರಹ್ಮಗಂಟು ಧಾರಾವಾಹಿಗಳು ಹಲವಾರು ತಿರುವುಗಳೊಂದಿಗೆ ನಿಮಗೆ ಒಂದು ಗಂಟೆಯ ಮಹಾ ಮನರಂಜನೆ ನೀಡಲಿವೆ.

ಸೋಮವಾರದಿಂದ ಶುಕ್ರವಾರದವರೆಗೆ ಜೀ ಕನ್ನಡ ವಾಹಿನಿಯನ್ನು ವೀಕ್ಷಿಸಿ ಮನರಂಜನೆಯ ರಸದೌತಣ ಸವಿಯುವ ಅವಕಾಶ ಮಾಡಿಕೊಡಲಾಗಿದೆ. ಕಿರುತೆರೆಯ ವೀಕ್ಷಕರು ಈ ಅವಕಾಶ ಸದುಪಯೋಗ ಮಾಡಿಕೊಳ್ಳಬಹುದು