Actress Gautami Jadhav's entry in the serial "Bhargavi LLB": Curiosity is created
” ಭಾರ್ಗವಿ LLB” ಧಾರಾವಾಹಿಗೆ ನಟಿ ಗೌತಮಿ ಜಾದವ್ ಎಂಟ್ರಿ: ಕುತೂಹಲ ಸೃಷ್ಟಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ‘ಭಾರ್ಗವಿ LL.B’ಯ ಪ್ರೋಮೋದಲ್ಲಿ ನಟಿ ಗೌತಮಿ ಜಾಧವ್ ಸದ್ದು ಮಾಡುತ್ತಿದ್ದಾರೆ

ಭಾರ್ಗವಿಯ ಸುತ್ತಮುತ್ತ ಕೇಡಿಗಳು ಸುತ್ತುವರಿದಿದ್ದು ಕೇಡಿಗಳ ಚಕ್ರವ್ಯೂಹದಲ್ಲಿ ಸಿಕ್ಕಿ ಬಿದ್ದಿರುವ ಭಾರ್ಗವಿಯನ್ನು ಕಾಪಾಡಲು ಗೌತಮಿ ಜಾಧವ್ ಪ್ರವೇಶ ಮಾಡಿದ್ದಾರೆ.
ಗೌತಮಿ ಜಾದವ್ ,’ನಾನು ಎಲ್ ಕಾಲಿಟ್ರೂ ಅಲ್ಲೊಂದು ಸೌಂಡ್ ಇರುತ್ತಮ್ಮ’ ಎಂದು ಅವರು ವಿಲನ್ ಗಳಿಗೆ ಪಂಚ್ ಕೊಡುವುದನ್ನು ಪ್ರೋಮೋದಲ್ಲಿ ನೋಡಬಹುದು.
ತಮ್ಮ ಎಂದಿನ ಪವರ್ಫುಲ್ ಮಾಸ್ ಡೈಲಾಗ್ ನಿಂದ ಅವರು ಪ್ರೋಮೋದಲ್ಲಿ ಶಕ್ತಿ ತುಂಬಿರುವುದನ್ನ ಕಾಣಬಹುದು.
ಅಂದ ಹಾಗೆ ಗೌತಮಿ ಜಾಧವ್ ‘ಭಾರ್ಗವಿ LL.B’ ಧಾರಾವಾಹಿಯಲ್ಲಿ ‘ಸಿಂಧೂರಿ’ ಹೆಸರಿನ ಪಾತ್ರದಲ್ಲಿ ವಿಶೇಷ ಅತಿಥಿಯಾಗಿ ನಟಿಸಿದ್ದಾರೆ.


