“ಮುದ್ದುಮಣಿಗಳು” ಧಾರಾವಾಹಿಯಲ್ಲಿ ರೋಚಕ ತಿರುವು, ಹೊಸ ಕಥೆಯೊಂದಿಗೆ “ಓ ಮುದ್ದುಮನಸೆ”
ಕನ್ನಡ ಕಿರುತೆರೆಯಲ್ಲಿ ಹೊಸತನಕ್ಕೆ ಮೊದಲ ಆದ್ಯತೆ ನೀಡುತ್ತಾ ಬಂದಿರುವ ‘ಸ್ಟಾರ್ ಸುವರ್ಣ’ ವಾಹಿನಿಯಲ್ಲಿ ಇದೀಗ ವೀಕ್ಷಕರ ಮನಗೆದ್ದ ‘ಮುದ್ದುಮಣಿಗಳು’ ಧಾರಾವಾಹಿಯು ಹೊಸ ತಿರುವಿನೊಂದಿಗೆ ಹೊಸದೊಂದು ಅಧ್ಯಾಯದೊಂದಿಗೆ ಇಂದಿನಿಂದ ಕಾಲಿಡುತ್ತಿದೆ.
“ಮುದ್ದುಮಣಿಗಳು” ಧಾರಾವಾಹಿಯಲ್ಲಿ ಇತ್ತೀಚಿಗಷ್ಟೇ ಮುದ್ದುಲಕ್ಷ್ಮಿಯ ಪುನರ್ಜನ್ಮ ಜಾಹ್ನವಿಯ ಆಗಮನವಾಗಿತ್ತು. ರೂಪದಲ್ಲಿ ಲಕ್ಷ್ಮಿಯಂತೆ ಕಾಣುವ ಜಾಹ್ನವಿಯಲ್ಲಿ ದೃಷ್ಟಿ ಹಾಗು ಭೂಮಿ ತಾಯಿಯ ಪ್ರೀತಿಯನ್ನು ಕಾಣುತ್ತಿದ್ದರು. ಆದರೆ ದುರದೃಷ್ಟವಶಾತ್ ಕುತಂತ್ರಿ ಶಾರ್ವರಿಯ ದಾಳಿಗೆ ದೃಷ್ಟಿ ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಾಳೆ. ಇಲ್ಲಿಂದ ಧಾರಾವಾಹಿಯು ಹೊಸ ತಿರುವನ್ನು ಪಡೆದು ಕೊಳ್ಳುತ್ತದೆ.
ಹೊಸ ಅಧ್ಯಾಯವು ಜಾಹ್ನವಿಯ ಸುತ್ತ ಸುತ್ತುವರಿಯುತ್ತದೆ. ದೃಷ್ಟಿಯ ಸಾವಿನಿಂದ ಮನನೊಂದ ಜಾಹ್ನವಿ ದೇವರ ಬಳಿ ತನ್ನ ನೋವನ್ನು ವ್ಯಕ್ತ ಪಡಿಸುತ್ತಿರುತ್ತಾಳೆ. ಅದೇ ಸಂದರ್ಭದಲ್ಲಿ ಆಕೆಗೆ ನದಿಯಲ್ಲಿ ಗಾಯಗೊಂಡಿರುವ ಮಗುವೊಂದು ಕಾಣಿಸುತ್ತದೆ. ಆ ಮಗುವಿಗೆ ಚಿಕಿತ್ಸೆ ನೀಡಿ ಅದನ್ನು ತನ್ನೊಂದಿಗೆ ಸಾಕುತ್ತಾಳೆ ಆದರೆ ಆ ಮಗುವಿನ ಜೀವ ಆಪತ್ತಿನಲ್ಲಿರುತ್ತೆ, ಕೆಲವರು ಆ ಮಗುವಿನ ಸಾವಿಗೆ ಸಂಚು ರೂಪಿಸುತ್ತಿರುತ್ತಾರೆ. ಬದುಕಿನಲ್ಲಿ ಭರವಸೆ ಕಳೆದುಕೊಂಡ ಜಾಹ್ನವಿಯ ಜೀವನದಲ್ಲಿ ಇನ್ಮುಂದೆ ಹೊಸ ಪರ್ವ ಶುರುವಾಗಲಿದೆ. ಇನ್ನು ಮುದ್ದುಲಕ್ಷ್ಮಿ ಧಾರಾವಾಹಿಯ ಖ್ಯಾತಿಯ ಧ್ರುವಂತ್ ಈ ಧಾರಾವಾಹಿಯ ಮೂಲಕ ಮತ್ತೊಮ್ಮೆ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದು ಡಾ. ಮನಸ್ ಎಂಬ ಪಾತ್ರವನ್ನು ನಿರ್ವಹಿಸಲಿದ್ದಾರೆ.
ಹಾಗಿದ್ರೆ ನಿಜವಾಗ್ಲೂ ಮನಸ್ ಧ್ರುವಂತ್ ನ ಪುನರ್ಜನ್ಮನ ಜಾಹ್ನವಿಗೆ ಸಿಕ್ಕಿರುವ ಮಗು ಯಾರದ್ದು ಜಾಹ್ನವಿ ಹಾಗು ಮನಸ್ ನ ಹೇಗೆ ಒಂದು ಮಾಡ್ತಾನೆ ಹೃದಯ್ ಎಂಬುದೇ “ಓ ಮುದ್ದುಮನಸೆ” ಧಾರಾವಾಹಿಯ ಮುಖ್ಯ ಕಥಾ ಹಂದರ.
ಹೊಸ ಅಧ್ಯಾಯದೊಂದಿಗೆ ಹೊಸದೊಂದು ಟೈಟಲ್ ನಲ್ಲಿ ವೀಕ್ಷಕರನ್ನು ರಂಜಿಸಲು ನಿಮ್ಮ ಮುಂದೆ ಬರುತ್ತಿದೆ “ಓ ಮುದ್ದುಮನಸೆ” ಇದೇ ಸೋಮವಾರದಿಂದ ರಾತ್ರಿ 7.30 ಕ್ಕೆ ತಪ್ಪದೇ ವೀಕ್ಷಿಸಬಹುದಾಗಿದೆ.