An unexpected twist in the Nandagokula serial
ನಂದಗೋಕುಲ ಧಾರಾವಾಹಿಯಲ್ಲಿ ಅನಿರೀಕ್ಷಿತ ತಿರುವು
ಪ್ರೇಕ್ಷಕರು ಬಹಳ ದಿನಗಳಿಂದ ಕಾಯುತ್ತಿದ್ದ ಕ್ಷಣ ಬಂದಿದೆ. ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರ ರಾತ್ರಿ 9 ಕ್ಕೆ ಪ್ರಸಾರವಾಗುವ ` ನಂದ ಗೋಕುಲ’ ಧಾರಾವಾಹಿಯಲ್ಲಿ ಅನಿರೀಕ್ಷಿತ ತಿರುವಿದೆ.

ನಂದಗೋಕುಲದಲ್ಲಿ, ಭಾವನೆಗಳು ತೀವ್ರಗೊಳ್ಳುತ್ತವೆ. ನಂದ ಕೊನೆಗೂ ಮೀನಾಳನ್ನು ತನ್ನ ಸೊಸೆಯೆಂದು ಒಪ್ಪಿಕೊಂಡು, ಅವಳಿಗೆ ಹೊಸ್ತಿಲು ಶಾಸ್ತ್ರ ನೆರವೇರಿಸುತ್ತಾನೆ. ಆದರೆ ಅವನ ಈ ಒಪ್ಪಿಕೊಳ್ಳುವಿಕೆ ಹೃದಯಪೂರ್ವಕವೋ – ನಿಜವೊ- ನಾಟಕವೋ- ಇದು ಕಥೆಯಲ್ಲಿ ಮತ್ತೊಂದು ತಿರುವೋ
ಈ ಶಾಸ್ತ್ರವು ಮೀನಾಳಿಗೆ ನಿಜವಾದ ಹೊಸ ಆರಂಭವಾಗುತ್ತದೆಯೇ, ಅಥವಾ ಕುಟುಂಬದೊಳಗೆ ಹೊಸ ಅಪಾಯಗಳನ್ನು ತೆರೆದಿಡುತ್ತದೆಯೇಈ ಮಹತ್ವದ ವಿಧಿಯ ನಂತರ ನಂದಗೋಕುಲದ ಮನೆಯವರನ್ನು ಯಾವ ಬದಲಾವಣೆಗಳು ಎದುರು ನೋಡುತ್ತಿವೆ

ಎಲ್ಲವನ್ನೂ ಬದಲಾಯಿಸುವ ಶಕ್ತಿ ಹೊಂದಿರುವ ಡ್ರಾಮಾ, ಭಾವನೆಗಳು ಮತ್ತು ಅಚ್ಚರಿಗಳನ್ನು ತಪ್ಪಿಸಿಕೊಳ್ಳಬೇಡಿ ಕೇವಲ ಕಲರ್ಸ್ ಕನ್ನಡದಲ್ಲಿ ಸೋಮ-ಶುಕ್ರ ರಾತ್ರಿ 9ಕ್ಕೆ ವೀಕ್ಷಿಸಬಹುದಾಗಿದೆ.

