ನಟಿಯ ಮೇಲಿನ ಪ್ರೀತಿಗೆ ಖರ್ಚು – ಅರವಿಂದ ರೆಡ್ಡಿ
ಕಳೆದ ಕೆಲವು ದಿನಗಳಿಂದ ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ವಿಚಾರ ಉದ್ಯಮಿ ಅರವಿಂದ್ ರೆಡ್ಡಿ ಹಾಗೂ ನಟಿಯ ಸಂಬಂಧದ ವಿಚಾರ. ಲೈಂಗಿಕ ಕಿರುಕುಳದ ಆರೋಪ ಮಾಡಿರುವ ನಟಿ ಹಾಗೂ ಅರವಿಂದ್ ರೆಡ್ಡಿ ಒಂದಷ್ಟು ವರ್ಷಗಳ ಕಾಲ ಲಿವಿನ್ ರಿಲೇಷನ್ ಶಿಪ್ ನಲ್ಲಿ ಇದ್ದವರು. ಎನ್ನುವ ಸಂಗತಿ ಬಯಲಾಗಿದೆ
ಲೀವಿನ್ ಅನ್ನೋದಕ್ಕಿಂತ ಜೆನ್ಯೂನ್ ಪ್ರೀತಿಯಲ್ಲಿ ಇದ್ದೆವು ಎಂದು ಅರವಿಂದ್ ರೆಡ್ಡಿ ಹೇಳಿದ್ಧಾರೆ.ಹೀಗಿದ್ದರೂ ಲೈಂಗಿಕ ದೌರ್ಜನ್ಯದ ಆರೋಪ ಮಾಡಿ, ದೂರು ಕೊಟ್ಟಿದ್ದಾರೆ. ಅದರ ಪರಿಣಾಮ ಅರವಿಂದ್ ರೆಡ್ಡಿ ಬಂಧನ ಆಗಿತ್ತು, ಬಳಿಕ ಜಾಮೀನು ಸಿಕ್ಕಿದೆ
ಈ ಕುರಿತು ಮಾಹಿತಿ ಹಂಚಿಕೊಂಡ ಅರವಿಂದ ರೆಡ್ಡಿ, ಇಷ್ಟೆಲ್ಲಾ ನಡೆದ ಮೇಲೂ ನಟಿ ಹೇಳೋದು ನಂದೇನು ತಪ್ಪಿಲ್ಲ, ನಾನು ಎಲ್ಲಿಯೇ ಹೋದ್ರು ನನ್ನಿಂದೆ ಒಬ್ಬರನ್ನು ಬಿಡುತ್ತಿದ್ರು ಟಾರ್ಚರ್ ಮಾಡ್ತಾರೆ ಅಂತ. ಹಾಗೆ ಅವರು ಕಿಟ್ಟಿರುವ ಪ್ರತಿಯೊಂದು ವಸ್ತುವನ್ನು ಅವರಿಗೆ ವಾಪಾಸ್ ನೀಡಿದ್ದೇನೆ ಎಂದಿದ್ದು ನಾನು ಅವುಗಳನ್ನು ಪ್ರೀತಿಯಿಂದ ಕೊಡಿಸಿದ್ದು ಎಂದು ತಿಳಿಸಿದ್ಧಾರೆ
ಜೂನ್ ನಲ್ಲಿ ಮದುವೆಯಾಗಬೇಕು ಎಂದುಕೊಂಡಿದ್ದೆವು.ಎರಡು ವರ್ಷಗಳಿಂದ ನನಗೂ ಆಕೆಗೂ ಬ್ರೇಕಪ್ ಆಯ್ತು. ಆಮೇಲೆ ಆಕೆಯ ಸಂಪರ್ಕವೇ ಇರಲಿಲ್ಲ. ಆದರೂ ನನ್ನ ಮೇಲೆ ರೀತಿಯ ಆರೋಪ ಮಾಡಿ ಬೀದಿಗೆ ತಂದು ನಿಲ್ಲಿಸಿದ್ದಾರೆ. ಕೋಟಿ ಕೋಟಿ ಹಣ ಖರ್ಚು ಮಾಡಿದ್ದೀನಿ. ಆಕೆ ಇಷ್ಟ ಪಟ್ಟಂತ ಪೆÇೀರ್ಷೇ ಕಾರು ಕೊಡ್ಸಿದ್ದೀನಿ, ಮನೆಯ ಇಂಟಿರಿಯರ್ ಮಾಡಿಕೊಡಿಸಿದ್ದೀನಿ, ತಮ್ಮನ ಎಂಗೇಜ್ಮೆಂಟ್ ಮದುವೆಗೆ ಸಹಾಯ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಫಾರಿನ್ ಟ್ರಿಪ್ ಹೋಗ್ಬೇಕು ಅಂದಾಗೆಲ್ಲಾ ಕಳ್ಸಿದ್ದೀನಿ, ಆದರೂ ಮದುವೆಯಾಗಿ ಮಗು ಇರುವವನಿಗೋಸ್ಕರ ನನ್ನ ಬಿಟ್ಟಳು. ಒಂದೇ ಮನೆಯಲ್ಲಿ ಜೊತೆಗೆ ಇದ್ದಾಗಲೇ ಇನ್ನೊಬ್ಬನ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದಳು. ಏನಾದರೂ ಕೇಳಿದ್ರೆ ಸೂಸೈಡ್ ಅಂತ ಬ್ಲಾಕ್ ಮೇಲ್ ಮಾಡ್ತಿದ್ಲು, ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಇದ್ದಾಗಲೂ ಮೊಬೈಲ್ ಬಳಕೆ ಮಾಡ್ತಾ ಇದ್ಲು, ನನ್ನ ರೀತಿ ಹಲವರಿಗೆ ಇದೇ ರೀತಿ ಆಗಿದೆ ಎಂದಿದ್ದಾರೆ

