Bombat Badoota" on Suvarna Channel: Rangegowda is coming back

ಸುವರ್ಣ ವಾಹಿನಿಯಲ್ಲಿ “ಬೊಂಬಾಟ್ ಬಾಡೂಟ” : ಮತ್ತೆ ಬರುತ್ತಿದ್ದಾರೆ ರಂಗೇಗೌಡ - CineNewsKannada.com

ಸುವರ್ಣ ವಾಹಿನಿಯಲ್ಲಿ “ಬೊಂಬಾಟ್ ಬಾಡೂಟ” : ಮತ್ತೆ ಬರುತ್ತಿದ್ದಾರೆ ರಂಗೇಗೌಡ

ಕನ್ನಡದ ಕಿರುತೆರೆ ಪ್ರೇಕ್ಷಕರಿಗೆ ಬಗೆಬಗೆಯ ಮನರಂಜನೆ ನೀಡುತ್ತಿರುವ `ಸ್ಟಾರ್ ಸುವರ್ಣ’ ವಾಹಿನಿ ಇದೀಗ ಮಾಂಸಾಹಾರಿಗಳಿಗಾಗಿ ಹೊಸ ಕಾರ್ಯಕ್ರಮ ಆರಂಭಿಸಲು ಸಜ್ಜಾಗಿದೆ.

ಈಗಾಗಲೇ ಬೊಂಬಾಟ್ ಭೋಜನ ಕಾರ್ಯಕ್ರಮ ಅತ್ಯಂತ ಜನಪ್ರಿಯವಾಗಿ ಮನೆ ಮಾತಾಗಿದ್ದು, ಇನ್ಮುಂದೆ ವಾರಾಂತ್ಯದಲ್ಲಿ ನಾನ್ ವೆಜ್ ಪ್ರಿಯರಿಗಾಗಿ “ಬೊಂಬಾಟ್ ಬಾಡೂಟ” ಎಂಬ ಹೊಸ ಕಾರ್ಯಕ್ರಮ ಆರಂಭವಾಗಲಿದೆ.

ಕಿರುತೆರೆಯಲ್ಲಿ ಬಾಡೂಟದ ರಂಗೇಗೌಡ್ರು ಎಂದೇ ಕರ್ನಾಟಕದಾದ್ಯಂತ ಮನೆ ಮಾತಾಗಿದ್ದ ಶೆಫ್ ಆದರ್ಶ್ ತಟಪತಿ, ಇದೀಗ ವರ್ಷಗಳ ಬಳಿಕ ಸ್ಟಾರ್ ಸುವರ್ಣ ವಾಹಿನಿಯ ಮೂಲಕ ಮತ್ತೆ ರಂಗೇಗೌಡರಾಗಿ ‘ಬೊಂಬಾಟ್ ಬಾಡೂಟ’ದ ಸಾರಥ್ಯ ನಿರ್ವಹಿಸಲಿದ್ದಾರೆ.

  • ಖಾರ ಮಸಾಲ : ರಂಗೇಗೌಡರು ರುಚಿ-ರುಚಿಯಾದ ಮಾಂಸಾಹಾರಿ ಖಾದ್ಯಗಳ ಮಾಹಿತಿ
  • ಮಿರ್ಚಿ ಮಸಾಲ : ಸೋಶಿಯಲ್ ಮೀಡಿಯಾದಲ್ಲಿ ‘ಉಂಡಾಡಿ ಗುಂಡ’ ಎಂದೇ ಖ್ಯಾತಿ ಪಡೆದಿರುವ ವೆಂಕಟೇಶ್, ಕರ್ನಾಟಕದಾದ್ಯಂತ ಚಲಿಸಿ, ಜನಪ್ರಿಯತೆಗಳಿಸಿರುವ ವರ್ಷಗಳ ಇತಿಹಾಸವಿರುವ ಹೋಟೆಲ್ ಗಳಿಗೆ ಧಾವಿಸಿ ಅಲ್ಲಿನ ಜನಪ್ರಿಯ ನಾನ್ ವೆಜ್ ತಿನಿಸುಗಳನ್ನು ಸವಿದು ಜನರಿಗೆ ಮಾಹಿತಿ
  • ನಾಟಿ ಮಸಾಲ : ಜನಸಾಮಾನ್ಯರು / ಸೆಲೆಬ್ರಿಟಿಸ್ ಗಳು ಬಂದು ವಿವಿಧ ರೀತಿಯ ಕೈರುಚಿ ಅನಾವರಣ

    ಸೋಮವಾರದಿಂದ-ಶುಕ್ರವಾರ ಸಸ್ಯಾಹಾರಿಗಳಿಗಾಗಿ ‘ಬೊಂಬಾಟ್ ಭೋಜನ’ ಪ್ರಸಾರವಾದರೆ, ಪ್ರತೀ ಶನಿವಾರ ಮಾಂಸಾಹಾರಿಗಳಿಗಾಗಿ ‘ಬೊಂಬಾಟ್ ಬಾಡೂಟ’ ಪ್ರಸಾರವಾಗಲಿದೆ. ಮನೆಮಂದಿಯೆಲ್ಲಾ ಒಂದಾಗಿ ನೋಡಿ, ರುಚಿಕರ ತಿನಿಸುಗಳನ್ನು ಮನೆಯಲ್ಲಿ ಟ್ರೈ ಮಾಡಿ, ಎಂಜಾಯ್ ಮಾಡಬಹುದಾಗಿದೆ.

    ಶುರುವಾಗ್ತಿದೆ ಘಮ್ ಅನ್ನುವ ಬಾಡೂಟದ ಕರಾಮತ್ತು, ನಾಲಿಗೆಗೆ ಸಿಗಲಿದೆ ಥರಥರದ ಗಮ್ಮತ್ತು ‘ಬೊಂಬಾಟ್ ಬಾಡೂಟ’ ಇದೇ ಶನಿವಾರದಿಂದ ಪ್ರತೀ ಶನಿವಾರ ಮಧ್ಯಾಹ್ನ 12 ಗಂಟೆಗೆ ನಿಮ್ಮ ಸ್ಟಾರ್ ಸುವರ್ಣ ವಾಹಿನಿಯಲ್ಲಿ ನಿಮ್ಮ ರಂಗೇಗೌಡರ ಜೊತೆ.

    Editor

    Leave a Reply

    Your email address will not be published. Required fields are marked *

    error: Our contents are protected!! We discourage piracy of our website articles and contents. Thanks -Admin