Famous actor Suman Talwar to make his television debut: "Snehad Kadalli" serial to start from May 12

ಮೊದಲ ಬಾರಿಗೆ ಕಿರುತೆರೆಗೆ ಖ್ಯಾತ ನಟ ಸುಮನ್ ತಲ್ವಾರ್: ಮೇ 12ರಿಂದ “ಸ್ನೇಹದ ಕಡಲಲ್ಲಿ” ಧಾರಾವಾಹಿ ಆರಂಭ - CineNewsKannada.com

ಮೊದಲ ಬಾರಿಗೆ ಕಿರುತೆರೆಗೆ ಖ್ಯಾತ ನಟ ಸುಮನ್ ತಲ್ವಾರ್: ಮೇ 12ರಿಂದ “ಸ್ನೇಹದ ಕಡಲಲ್ಲಿ” ಧಾರಾವಾಹಿ ಆರಂಭ

ಪ್ರೀತಂ ಶೆಟ್ಟಿ ನಿರ್ಮಾಣ, ನಿರ್ದೇಶನದ ಸ್ನೇಹದ ಕಡಲಲ್ಲಿ” ಇದೇ ಸೋಮವಾರದಿಂದ ಸ್ಟಾರ್ ಸುವರ್ವ ವಾಹಿನಿಯಲ್ಲಿ ಪ್ರಸಾರವಾಗಲಿದ್ದು ದಕ್ಷಿಣ ಭಾರತದ ಖ್ಯಾತ ನಟ ಸುಮನ್ ತಲ್ವಾರ್, ಚಂದು ಗೌಡ ಹಾಗೂ ಕಾವ್ಯ ಮಹದೇವ್ ಸೇರಿದಂತೆ ಹಲವು ಅನುಭವ ಕಲಾವಿದರ ದಂಡು ನಟಿಸಿದ್ದು ಧಾರಾವಾಹಿಯ ಬಗ್ಗೆ ನಿರೀಕ್ಷೆ ಹೆಚ್ಚು ಮಾಡಿದೆ.ಮೇ12 ರ ಸೋಮವಾರದಿಂದ ಪ್ರತಿದಿನ ರಾತ್ರಿ 8.30ಕ್ಕೆ ಈ ಧಾರಾವಾಹಿ ಪ್ರಸಾರವಾಗಲಿದೆ.

ನಿರ್ದೇಶಕ, ನಿರ್ಮಾಪಕ ಪ್ರೀತಂ ಶೆಟ್ಟಿ ಮಾತನಾಡಿ ಸ್ಟಾರ್ ಸುವರ್ಣ ವಾಹಿನಿಗಾಗಿ “ಸ್ನೇಹದ ಕಡಲಲ್ಲಿ” ಎಂಬ ಧಾರಾವಾಹಿ ನಿರ್ದೇಶಿಸುತ್ತಿದ್ದೇನೆ. ಅವಕಾಶ ನೀಡಿದ ಸ್ಟಾರ್ ಸುವರ್ಣ ವಾಹಿನಿಗೆ ಧನ್ಯವಾದ. ಇನ್ನೂ, ಧಾರಾವಾಹಿಯಲ್ಲಿ ದಕ್ಷಿಣ ಭಾರತದ ಜನಪ್ರಿಯ ನಟ ಸುಮನ್ ತಲ್ವಾರ್ ಅವರು ಅಭಿನಯಿಸುತ್ತಿದ್ದಾರೆ. ಇದು ಸುಮನ್ ಅವರು ಅಭಿನಯಿಸುತ್ತಿರುವ ಮೊದಲ ಕನ್ನಡ ಧಾರಾವಾಹಿ ಕೂಡ.

ಚಂದು ಗೌಡ ನಾಯಕನಾಗಿ ಕಾವ್ಯ ಮಹದೇವ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಧಾರಾವಾಹಿಗಳಲ್ಲಿ ಮದುವೆಯನ್ನು ಒಂದು ವಾರ ತೋರಿಸುತ್ತೀರಾ ಎಂಬ ಮಾತು ಕೇಳಿ ಬರುತ್ತದೆ. ಆದರೆ ನಮ್ಮ ಧಾರಾವಾಹಿಯಲ್ಲಿ ಕೇವಲ ನಾಲ್ಕು ನಿಮಿಷಗಳಲ್ಲಿ ಮದುವೆ ಸನ್ನಿವೇಶ ಮುಕ್ತಾಯವಾಗುತ್ತದೆ. ಸಾಮಾನ್ಯವಾಗಿ ಧಾರಾವಾಹಿಗಳ ಹಿನ್ನೆಲೆ ಸಂಗೀತದಲ್ಲಿ ಸಿನಿಮಾ ಹಾಡುಗಳನ್ನು ಬಳಸಿಕೊಳ್ಳುವುದು ವಾಡಿಕೆ. ಆದರೆ ನಾವು ಹೊಸ ಹಾಡನ್ನು ಸಿದ್ದ ಮಾಡಿದ್ದೇವೆ. ಎಂದರು.

Suman talwar

ನಟ ಸುಮನ್ ತಲ್ವಾರ್ ಮಾತನಾಡಿ ಚಿತ್ರರಂಗಕ್ಕೆ ಬಂದು 47 ವರ್ಷಗಳಾಯಿತು. ಕನ್ನಡ, ತಮಿಳು, ತೆಲುಗು ಸೇರಿದಂತೆ 11 ಭಾಷೆಗಳ ಚಿತ್ರಗಳಲ್ಲಿ ನಟಿಸಿದ್ದೇನೆ. ಧಾರಾವಾಹಿ ನಿರ್ದೇಶಕ ಪ್ರೀತಂ ಶೆಟ್ಟಿ ನಿರ್ದೇಶನದ ಚಿತ್ರದಲ್ಲೂ ನಟಿಸಿದ್ದೇನೆ. “ಸ್ನೇಹದ ಕಡಲಲ್ಲಿ” ನಾನು ನಟಿಸುತ್ತಿರುವ ಮೊದಲ ಕನ್ನಡ ಧಾರಾವಾಹಿ. ಧಾರಾವಾಹಿಯನ್ನು ಪ್ರೀತಂ ಶೆಟ್ಟಿ ನಿರ್ದೇಶಿಸುತ್ತಿದ್ದಾರೆ. ಕಥೆ ಇಷ್ಟವಾಯಿತು ಹಾಗೂ ಸ್ಟಾರ್ ಸುವರ್ಣ ವಾಹಿನಿ ಅವರು ಆಯ್ಕೆ ಮಾಡುವ ಕಂಟೆಂಟ್ ಉತ್ತಮವಾಗಿರುತ್ತದೆ. ಹಾಗಾಗಿ ನಾನು ಈ ಧಾರಾವಾಹಿಯಲ್ಲಿ ಅಭಿನಯಿಸಲು ಒಪ್ಪಿಕೊಂಡೆ ಎಂದು ತಿಳಿಸಿದರು.

chandu gowda

ನಟ ಚಂದು ಗೌಡ ಮಾತನಾಡಿ ಕಿರುತೆರೆಗೆ ಬಂದು ಸುಮಾರು ಹನ್ನೊಂದು ವರ್ಷಗಳಾಯಿತು. ಆನಂತರ ಕೆಲವು ಚಿತ್ರಗಳಲ್ಲೂ ನಟಿಸಿದ್ದೇನೆ. ನನಗೆ ಸಿನಿಮಾದಲ್ಲಿ ಹಾಗೂ ಧಾರಾವಾಹಿಯಲ್ಲಿ ನಟಿಸುವುದು ಎರಡೂ ಒಂದೇ. ಇನ್ನೂ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ಪ್ರೀತಂ ಶೆಟ್ಟಿ ನಿರ್ದೇಶನದ “ಸ್ನೇಹದ ಕಡಲಲ್ಲಿ” ಧಾರವಾಹಿಯ ಕಥೆ ತುಂಬಾ ಚೆನ್ನಾಗಿದೆ.

ಸ್ಟಾರ್ ಸುವರ್ಣ ವಾಹಿನಿ ಅವರು ಒಳ್ಳೆಯ ಕಂಟೆಂಟ್ ಮೇಲೆ ಹೆಚ್ಚು ಗಮನ ಕೊಡುತ್ತಾರೆ. ನಿಮಗೆ 30 ನಿಮಿಷದ ಸಂಚಿಕೆ ನೋಡಿದರೂ, ಒಂದು ಸಿನಿಮಾ ನೋಡಿದ ಅನುಭವ ಆಗುತ್ತದೆ. ಶಿವರಾಜ್ ಅರಸ್ ನನ್ನ ಪಾತ್ರದ ಹೆಸರು. ದಕ್ಷಿಣ ಭಾರತದ ಖ್ಯಾತ ನಟ ಸುಮನ್ ಅವರು ಈ ಧಾರಾವಾಹಿಯಲ್ಲಿ ನನ್ನ ತಂದೆ ಪಾತ್ರದಲ್ಲಿ ಅಭಿನಯಿಸುತ್ತಿರುವುದು ಸಂತತವಾಗುತ್ತಿದೆ ಎಂದರು

ನಾಯಕಿ ಪಾತ್ರ ನಿರ್ವಹಿಸುತ್ತಿರುವ ಕಾವ್ಯ ಮಹದೇವ್ ಸಹ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ನಟಿ ಹೇಮ ಬೆಳ್ಳೂರು ಮುಂತಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin