From April 20, the serial “Shrimad Ramayana” is in front of the audience

ಏಪ್ರಿಲ್ 20 ರಿಂದ “ಶ್ರೀಮದ್ ರಾಮಾಯಣ” ಧಾರಾವಾಹಿ ಪ್ರೇಕ್ಷಕರ ಮುಂದೆ - CineNewsKannada.com

ಏಪ್ರಿಲ್ 20 ರಿಂದ “ಶ್ರೀಮದ್ ರಾಮಾಯಣ” ಧಾರಾವಾಹಿ ಪ್ರೇಕ್ಷಕರ ಮುಂದೆ

ಕಳೆದ ಮೂರೂವರೆ ದಶಕಗಳಿಂದ ತನ್ನದೆ ಸಾಮಥ್ರ್ಯ ಉಳಿಸಿಕೊಂಡು ಬರುತ್ತಿರುವ ಉದಯ ವಾಹಿನಿ ಈಗ ‘ಶ್ರೀಮದ್ ರಾಮಾಯಣ’ ಧಾರಾವಾಹಿಯನ್ನು ವೀಕ್ಷಕರಿಗೆ ಉಣಬಡಿಸಲು ಸಿದ್ದತೆ ಮಾಡಿಕೊಂಡಿದೆ. ಅದ್ಬುತ ಕಾವ್ಯವನ್ನು ಹೊಸ ತಲೆಮಾರಿಗೆ ತಲುಪಿಸಲು ಮುಂದಾಗಿದೆ.

ರಾಮಾಯಣ ಭಾರತೀಯ ಸಂಸ್ಕ್ರತಿ, ಪರಂಪರೆ ಪ್ರತಿಬಿಂಬಿಸಲಿರುವುದು ವಿಶೇಷ. ರಾಮನ ಜೀವನ ಬಹುತೇಕ ಭಾರತೀಯರಿಗೆ ಮಾದರಿಯಾಗಿದೆ. ಆತನ ರಾಜ್ಯ ಪರಿಪಾಲನೆಯು ಇಂದಿಗೂ ರಾಮರಾಜ್ಯ ಅನ್ನುವ ಪದ ಈಗಲೂ ಬಳಸಲಾಗುತ್ತಿದೆ. ರಾಮ ಮತ್ತು ಸೀತೆಯ ಪವಿತ್ರ ಪ್ರೇಮ, ಕಥೆಯಲ್ಲಿ ಧರ್ಮದ ಪಾಲನೆಯ ಮಾರ್ಗದಲ್ಲಿ ಎದುರಿಸಿದ ಅನೇಕ ಸವಾಲುಗಳು ಕುತೂಹಲಕಾರಿಯಾಗಿದೆ.

ಸಂಪೂರ್ಣ ನೂತನ ದೃಶ್ಯ ವೈಭವಗಳು, ವೈವಿಧ್ಯಮಯ ನಟರ ತಂಡವು ಪೌರಾಣಿಕ ಪಾತ್ರಗಳಿಗೆ ಹೊಸ ಜೀವ ತುಂಬಲಿದೆ. ಪ್ರತಿ ಸಂಚಿಕೆಯ 250 ವೀಕ್ಷಕರಿಗೆ ಒಟ್ಟು 2.5 ಲಕ್ಷ ರೂಪಾಯಿ ನಗದು ಬಹುಮಾನ ಗೆಲ್ಲುವ ಅವಕಾಶವನ್ನು ಕಲ್ಪಿಸಿದೆ. ಸೀರಿಯಲ್ ವೀಕ್ಷಿಸಿ ಕೊನೆಯಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಮಿಸ್ಡ್ ಕಾಲ್ ಮೂಲಕ ಸರಿ ಉತ್ತರ ನೀಡಿದವರಿಗೆ ತಲಾ ಒಂದು ಸಾವಿರ ಬಹುಮಾನ ನೀಡಲಿದೆ.

“ಶ್ರೀಮದ್ ರಾಮಾಯಣ” ಧಾರಾವಾಹಿ ಏಪ್ರಿಲ್ 20 ರ ಸೋಮವಾರದಿಂದ ಶನಿವಾರದವರೆಗೆ ಸಂಜೆ 6 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದ್ದು ಕೋಟ್ಯಂತರ ರಾಮ ಭಕ್ತರದಲ್ಲಿ ರಾಮನನ್ನು ಕಿರುತೆರೆಯ ಮೇಲೆ ನೋಡಿ ಕಣ್ತುಂಬಿಕೊಳ್ಳಲಲು ಕಾತುರರಾಗಿದ್ದಾರೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin