"Anartha" Song and Teaser Released: The movie will hit the screens in the month of June

“ಅನರ್ಥ” ಚಿತ್ರದ ಹಾಡು ಮತ್ತು ಟೀಸರ್ ಬಿಡುಗಡೆ: ಸಿನಿಮಾ ಜೂನ್ ತಿಂಗಳಲ್ಲಿ ತೆರೆಗೆ - CineNewsKannada.com

“ಅನರ್ಥ” ಚಿತ್ರದ ಹಾಡು ಮತ್ತು ಟೀಸರ್ ಬಿಡುಗಡೆ: ಸಿನಿಮಾ ಜೂನ್ ತಿಂಗಳಲ್ಲಿ ತೆರೆಗೆ

‘ಬಲಹೀನತೆಯಿಂದ ಕ್ರೂರತನ ಹುಟ್ಟುತ್ತದೆ’ ಎಂಬ ವಾಕ್ಯವನ್ನು ರೋಮ್ ಫಿಲಾಸಫರ್ ಸೆನಕ ಅಂದೇ ಹೇಳಿದ್ದರು. ಇಂತಹುದೆ ಅಂಶಗಳನ್ನು ಹೆಕ್ಕಿಕೊಂಡು ‘ಅನರ್ಥ’ ಎನ್ನುವ ಸಿನಿಮಾದ ಅಡಿಬರಹಕ್ಕೆ ಬಳಸಲಾಗಿ, ಸೆನ್ಸಾರ್‍ನಿಂದ ಪ್ರಶಂಸೆ ಪಡೆದುಕೊಂಡಿದೆ.

ಚಿತ್ರದ ಟೀಸರ್ ಹಾಗೂ ಸಾಂಗ್, ಲೋಕಾರ್ಪಣೆಗೊಂಡಿದೆ. ನಿರ್ದೇಶಕರು ಮಾಧ್ಯಮಮಿತ್ರರನ್ನು ಮುಖ್ಯ ಅತಿಥಿ ಎಂದು ಪರಿಗಣಿಸಿದ್ದರಿಂದ, ಹಿರಿಯ ಪತ್ರಕರ್ತರಿಂದ ಟೀಸರ್ ಹಾಗೂ ಸಹ ನಿರ್ಮಾಪಕಿ ಜೆ.ಅಂಜಲಿ ಪುತ್ರಿಯರಾದ ಕುಮಾರಿ ಜಯಕೀರ್ತಿ ಮತ್ತು ಜಯಕನ್ನಿಕ ಜಂಟಿಯಾಗಿ ಹಾಡನ್ನು ಬಿಡುಗಡೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

‘ಅರ್ಧ ಸತ್ಯ’ ಧಾರವಾಹಿ ನಿರ್ದೇಶಿಸಿ ಆರ್ಯಭಟ ಪ್ರಶಸ್ತಿ ಪಡೆದು, ನಂತರ ‘ಗುಪ್ತಗಾಮಿನಿ’ ‘ಪ್ರೀತಿ ಇಲ್ಲದ ಮೇಲೆ’ ಯಶಸ್ವಿ ಧಾರವಾಹಿಗಳಾದ ಮೊದಲ ಕಂತುಗಳ ನಿರ್ದೇಶನ ಮಾಡಿ, ಆ ನಂತರ ಸುಮಾರು 3500 ಕಂತುಗಳ ಅನೇಕ ಧಾರವಾಹಿಗಳಾದ ‘ಶಿವ’ ‘ಕದನ’ ‘ಲಕುಮಿ’ ‘ಚುಕ್ಕಿ’ ‘ಗೋಕುಲದಲ್ಲಿ ಸೀತೆ’ ನಿರ್ದೇಶಿಸಿದ ರಮೇಶ್ ಕೃಷ್ಣ “ಅನರ್ಥ” ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

‘ಮೆಲ್ಲುಸಿರೆ ಸವಿಗಾನ’ ಚಿತ್ರವನ್ನು ನಿರ್ದೇಶನ ಮಾಡಿರುವ ರಮೇಶ್ ಕೃಷ್ಣ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ರಮೇಶ್ ಕೃಷ್ಣ, ಅವಕಾಶ್-ಆಕೃತಿ ಎರಡು ಪಾತ್ರಗಳ ಸುತ್ತ ಚಿತ್ರ ಸಾಗುತ್ತದೆ. ಇಬ್ಬರು ಒಂದು ಮಟ್ಟಕ್ಕೆ ಪ್ರೀತಿಸಿರುತ್ತಾರೆ. ನಾವುಗಳು ಬ್ರೇಕ್‍ಅಪ್ ಎನ್ನುವ ಪದವನ್ನು ನಮ್ಮ ಮನಸ್ಸಿನಿಂದ ಅಳಿಸಿ ಹಾಕಿದ ನಂತರ, ಅಮವ್ಯಾಸೆಯ ದಿನ ಯಮಗಂಡ ಕಾಲದಲ್ಲಿ ಮದುವೆಯಾಗಲು ನಿರ್ಧರಿಸಿ ಒಬ್ಬರನ್ನೊಬ್ಬರು ಅರಿತುಕೊಳ್ಳಲು ಒಂದು ಸ್ಥಳಕ್ಕೆ ಹೋಗುತ್ತಾರೆ. ಅಲ್ಲಿಗೆ ಹೋದಾಗ ಏನಾಗುತ್ತದೆ. ನೋಡುಗರಿಗೆ ಊಹಿಸಲಾಗದ ತಿರುವುಗಳಿವೆ. ಕ್ಲೈಮಾಕ್ಸ್‍ದಲ್ಲಿ ಹೀಗೂ ಆಗಬಹುದು ಎನ್ನುವಲ್ಲಿಗೆ ಶುಭಂ ಬರುತ್ತದೆ. ನಮ್ಮ ಚಿತ್ರವು ಎಲ್ಲಾ ಕಮರ್ಷಿಯಲ್ ಸಿನಿಮಾಗಳ ಅಂಶಗಳನ್ನು ಹೊಂದಿದ್ದರೂ, ಒಂದು ಅಂಶವು ಖಂಡಿತ ಭಿನ್ನವಾಗಿದೆ. ಅದನ್ನು ತಿಳಿಯಲು ನೀವುಗಳು ಚಿತ್ರಮಂದಿರಕ್ಕೆ ಬನ್ನಿರೆಂದು ಕೋರಿದರು.

ನಿರ್ಮಾಪಕ ಶ್ರೀಧರ್.ಎನ್.ಸಿ.ಹೊಸಮನೆ ಮಾತನಾಡಿ, ನಾಯಕನಾಗಬೇಕೆಂದು ಆಸೆ ಪಟ್ಟಿದ್ದೆ. ಉದ್ಯಮದಲ್ಲಿ ಯಶಸ್ಸು ಕಂಡು, ಈಗ ತೇಜಸ್ ಸಿನಿ ಕ್ರಿಯೇಶನ್ಸ್ ಮೂಲಕ ನಿರ್ಮಾಪಕನಾಗಿದ್ದೇನೆ ಎಂದರು.

ನಟ ಮಂಡ್ಯರಮೇಶ್ ಬಳಿ ತರಬೇತಿ ಪಡೆದುಕೊಂಡಿರುವ ವಿಶಾಲ್ ಮಣ್ಣೂರು ನಾಯಕ. ಚಿತ್ರದ ಬಗ್ಗೆ ನಟನ ತರಬೇತಿ ಶಾಲೆಯಲ್ಲಿ ತರಬೇತಿ ನೀಡಿದ ಮಂಡ್ಯ ರಮೇಶ್ ಬಗ್ಗೆ ಗುಣಗಾನ ಮಾಡಿದರು.

ಮೆಡಿಕಲ್ ವ್ಯಾಸಂಗ ಮಾಡುತ್ತಿರುವ ಮಂಡ್ಯದ ವಿಹಾನಿ, ಕಿರುಚಿತ್ರಗಳಲ್ಲಿ ನಟಿಸಿ, ಈಗ ನಾಯಕಿಯಾಗಿ ಬಡ್ತಿಗೊಂಡಿದ್ದಾರೆ. ಮಾಮೂರು ಶ್ರೀನಿವಾಸ್ ಅವರ ನವರಸನ ನಟನಾ ಅಕಾಡಮಿಯಲ್ಲಿ ತರಬೇತಿ ಪಡೆದಿದ್ದೇನೆ. ಚಿತ್ರದಲ್ಲಿ ನಟಿಸಲು ಮಾಲೂರು ಶ್ರೀನಿವಾಸ್ ಪ್ರೋತ್ಸಾಹ ಸಹಕಾರ ದೊಡ್ಡದು ಎಂದು ಹೇಳಿದರು.

ಉಳಿದಂತೆ ಸಿ.ವಿಜಯ್‍ಕುಮಾರ್, ರಕ್ಷಿತ್, ಗಣೇಶ್, ಪ್ರಸನ್ನ ಬಾಗೀನ, ಅರ್ಪಿತ ಮುಂತಾದವರು ನಟಿಸಿದ್ದಾರೆ.

ಸಾಹಿತ್ಯ-ಸಂಗೀತ ಡಾ.ವಿ.ನಾಗೇಂದ್ರಪ್ರಸಾದ್, ಛಾಯಾಗ್ರಹಣ ಕುಮಾರ್‍ಗೌಡನಾಗವಾರ, ಸಂಕಲನ ನಿಷಿತ್‍ಪೂಜಾರಿ-ವಿನಯ್, ಹಿನ್ನಲೆ ಶಬ್ದ ನಿತಿನ್, ಸಾಹಸ ಕುಂಗು ಫು ಚಂದ್ರು ಅವರದಾಗಿದೆ. ವಿತರಕ ಎಂ.ರಮೇಶ್ ಒಡೆತನದ ಅಕ್ಷರ ಫಿಲಿಂಸ್ ಮುಖಾಂತರ ಚಿತ್ರ ಜೂನ್ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin