ಬರಹಗಾರರರಿಗೆ ಜೀ ವಾಹಿನಿಯಲ್ಲಿ ಸುವರ್ಣಾವಕಾಶ
ಮನರಂಜನೆಗೆ ಮತ್ತೊಂದು ಹೆಸರಾಗಿರುವ “ಜೀ಼ ಕನ್ನಡ” ಈಗ ಮತ್ತೊಂದು ಅಚ್ಚರಿ ಹೊತ್ತು ತರುತ್ತಿದೆ., ಅದುವೇ ವಿಭಿನ್ನ ಕಥೆ ಬರೆಯುವ ಬರಹಗಾರರಿಗೆ ಅವಕಾಶ ಮಾಡಿಕೊಡಲು ಮುಂದಾಗಿದೆ.
ಚೆನ್ನಾಗಿ ಕಥೆ ಬರೆಯುತ್ತೀರಾ.ಒಳ್ಳೆ ಸಂಭಾಷಣೆಯ ಕಲೆ ನಿಮ್ಮಲ್ಲಿ ಇದ್ಯಾ. ನೀವು ಬರಹಗಾರರಾಗಬೇಕೇ..ನಿಮ್ಮ ಪ್ರತಿಭೆಗೆ ತಕ್ಕ ಪ್ರತಿಫಲ ಸಿಗುತ್ತಿಲ್ಲವೇ.. ಡೋಂಟ್ ವರಿ. ಪ್ರತಿಭಾವಂತ ಬರಹಗಾರರಿಗೆ ಎಲ್ಲಿಯೂ ಸಿಗದ ಅವಕಾಶವನ್ನು ಹೊತ್ತು ಜೀ ಕನ್ನಡ ನಿಮ್ಮ ಮುಂದೆ ಬರುತ್ತಿದೆ.
ನಿಮ್ಮೊಳಗಿರುವ ಕಥೆಗಾರ ಮತ್ತು ಸಂಭಾಷಣೆಕಾರರಿಗೆ ಇದು ಅತ್ಯುತ್ತಮ ವೇದಿಕೆಯಾಗಿದ್ದು, ಕಲೆಗೆ ಈ ವೇದಿಕೆಯಲ್ಲಿ ಬೆಲೆ ಸಿಗಲಿದೆ. ಜೀ ಕನ್ನಡ ‘ ರೈಟರ್ಸ್ ಆಡಿಷನ್ ‘ ನಲ್ಲಿ ನಿಮ್ಮ ಅತ್ಯುತ್ತಮ ಬರವಣಿಗೆ ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ನೀಡುವುದರ ಜೊತೆಗೆ ಉದ್ಯೋಗಾವಕಾಶ ಕಲ್ಪಿಸಿಕೊಡುತ್ತಿದೆ.
ಇದೇ ಜನವರಿ 11 ರಂದು ಶನಿವಾರ ಬೆಳಗ್ಗೆ 9 ಗಂಟೆಗೆ 3 ಜಿಲ್ಲೆಗಳಲ್ಲಿ ಆಡಿಷನ್ ಶುರುವಾಗಲಿದೆ. ಶನಿವಾರದಂದು ದಾವಣಗೆರೆಯ ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜು, ಎಸ್. ಎಸ್, ಲೇಔಟ್ ಎ ಬ್ಲಾಕ್, ಎಸ್.ಎಸ್. ಲೇಔಟ್, ಶಿವಮೊಗ್ಗದ ಬಸವೇಶ್ವರ ವಿದ್ಯಾಸಂಸ್ಥೆ, ತಾಲೂಕು ಕಚೇರಿ ರಸ್ತೆ, ಕಾರ್ಪೊರೇಷನ್ ಹತ್ತಿರ ಹಾಗೂ ಮಂಗಳೂರಿನ ಮನೆಲ್ ಶ್ರೀನಿವಾಸ್ ನಾಯಕ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಬೆಸೆಂಟ್ ಕ್ಯಾಂಪಸ್, ಬೊಂದೇಲ್ ನಲ್ಲಿ ನಡೆಯಲಿದೆ.
ಜನವರಿ 12 ರಂದು ಭಾನುವಾರ ಬೆಳಗ್ಗೆ 9 ಗಂಟೆಗೆ ಬೆಂಗಳೂರು, ಮೈಸೂರು ಮತ್ತು ತುಮಕೂರಿನಲ್ಲಿ ಆಡಿಷನ್ ನಡೆಯಲಿದೆ. ಬೆಂಗಳೂರಿನ ಸೈಂಟ್ ಸೋಫಿಯಾ ಕಾನ್ವೆಂಟ್ ಹೈ ಸ್ಕೂಲ್, ಸಿ ಎನ್ ನಂ.06, 10ನೇ ಬ್ಲಾಕ್, 2ನೇ ಫೇಸ್, ನಾಗರಭಾವಿ, ಮೈಸೂರಿನ ಶ್ರೀ ವಿವೇಕ ಬಾಲೋದ್ಯಾನ ಶಾಲೆ, 2ನೇ ಮುಖ್ಯರಸ್ತೆ, ಸರ್ಕಾರಿ ಪ್ರೌಢಶಾಲೆ ಎದುರು ಜಯನಗರ, ಕುವೆಂಪುನಗರದಲ್ಲಿ ಹಾಗು ತುಮಕೂರಿನ ಸೈಂಟ್ ಮೋಸಸ್ ಆಂಗ್ಲ ಶಾಲೆ ಆದರ್ಶನಗರ, ತುಡಾ ಕಚೇರಿ ಹತ್ತಿರ, ಬೆಳಗುಂಬು ರಸ್ತೆಯಲ್ಲಿ ನಡೆಯಲಿದೆ.