Harshita was selected as ``Miss Golden Face of Karnataka''

`ಮಿಸ್ ಗೋಲ್ಡನ್ ಫೇಸ್ ಆಫ್ ಕರ್ನಾಟಕ’ ಆಗಿ ಹರ್ಷಿತಾ ಆಯ್ಕೆ - CineNewsKannada.com

`ಮಿಸ್ ಗೋಲ್ಡನ್ ಫೇಸ್ ಆಫ್ ಕರ್ನಾಟಕ’ ಆಗಿ ಹರ್ಷಿತಾ ಆಯ್ಕೆ

ಚೆನ್ನೈನಲ್ಲಿ ಇತ್ತೀಚೆಗೆ ಮುಕ್ತಾಯವಾದ ಗೋಲ್ಡನ್ ಫೇಸ್ ಆಫ್ ಸೌಥ್ ಇಂಡಿಯಾ' ಸ್ಪರ್ಧೆಯಲ್ಲಿಮಿಸ್ ಗೋಲ್ಡನ್ ಫೇಸ್ ಆಫ್ ಕರ್ನಾಟಕ’ ಆಗಿ ಹರ್ಷಿತಾ ವಿಜೇತರಾಗಿದ್ದಾರೆ.

ಆಸಿಡ್ ದಾಳಿಗೆ ತುತ್ತಾದವರಿಗೆ ಚರ್ಮ ದಾನ ಮಾಡುವಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಂಡೋ ಎಂಟರ್ಟೈನ್‍ಮೆಂಟ್ಸ್, ಗೋಪಿನಾಥ್ ರವಿ ಮತ್ತು ಶರವಣನ್ ಹಾಗೂ ಎಸಿಟಿಸಿ ಸ್ಟುಡಿಯೋದ ಹೇಮಂತ್ ಜಂಟಿಯಾಗಿ ಈ ಸ್ಪರ್ಧೆಯನ್ನು ಚೆನ್ನೈನ ಹಿಲ್ಟನ್ ಹೋಟೆಲ್‍ನಲ್ಲಿ ಆಯೋಜಿಸಿದ್ದರು.

ಈ ಸ್ಪರ್ಧೆಯಲ್ಲಿ ನಟಿಯರಾದ ಆಮಿ ಜಾಕ್ಸನ್ ಮತ್ತು ಶ್ರೇಯಾ ಶರಣ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅವರ ಜೊತೆಗೆ ವಿಂಡೋ ಎಂಟರ್ಟೈನ್‍ಮೆಂಟ್ಸ್ ಮುಖ್ಯಸ್ಥ ಹಾಗೂ ಜನಪ್ರಿಯ ನಿರ್ದೇಶಕ ಎ.ಎಲ್. ವಿಜಯ್ ಹಾಗೂ ಈ ಸ್ಪರ್ಧೆಯ ರಾಯಭಾರಿಯಾದ ಪಾರ್ವತಿ ನಾಯರ್ ಸಹ ಹಾಜರಿದ್ದರು.

ಈ ಬಾರಿ ಕರ್ನಾಟಕ, ತಮಿಳು ನಾಡು, ತೆಲಂಗಾಣ ಹಾಗೂ ಕೇರಳದಿಂದ 1000ಕ್ಕೂ ಹೆಚ್ಚು ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಹಲವು ಸುತ್ತುಗಳ ಬಳಿಕ ಫೈನಲ್ಸ್ ಸುತ್ತಿಗೆ 51 ಸ್ಪರ್ಧಿಗಳು ಅಂತಿಮವಾಗಿದ್ದು, ಅದರಲ್ಲಿ ಹಲವು ವಿಭಾಗಗಳಲ್ಲಿ ವಿಜೇತರನ್ನು ಆಯ್ಕೆ ಮಾಡಲಾಯಿತು. ಈ ಪೈಕಿ, ಕರ್ನಾಟಕದ ಹರ್ಷಿತಾ ಎ, `ಮಿಸ್ ಗೋಲ್ಡನ್ ಫೇಸ್ ಆಫ್ ಕರ್ನಾಟಕ’ ಆಗಿ ಆಯ್ಕೆಯಾಗಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin