“ಮತ್ಸ್ಯಗಂಧ” ಚಿತ್ರದ ಕಡಲ ಒಡಲ ಹಾಡು ಬಿಡುಗಡೆ : ಫೆಬ್ರವರಿ 23ಕ್ಕೆ ಚಿತ್ರ ತೆರೆಗೆ
ಸ್ಯಾಂಡಲ್‍ವುಡ್ ನಲ್ಲಿ “ಮತ್ಸ್ಯಗಂz”sÀ ಘಮಲು ದಿನೇ ದಿನೇ ಹೆಚ್ಚಾಗ್ತಿದೆ. ಚಿತ್ರಮಂದಿರದಲ್ಲಿ ಭರ್ಜರಿ ಮೀನೂಟಕ್ಕೆ ಎಲೆ ಹಾಸಲಾಗ್ತಿದೆ. ಮತ್ಸ್ಯಗಂಧ ಅಡುಗೆಯ ಪರಿಮಳ ಪ್ರೇಕ್ಷಕರ ಬಾಯಲ್ಲಿ ನೀರೂರಿಸುತ್ತಿದೆ. ಅಂತ ಬಗೆ ಬಗೆಯ ಕಂಟೆಂಟ್ಸ್ ಗಳನ್ನ ಚಿತ್ರತಂಡ ಒಂದೊಂದಾಗಿ ಬಿಡುಗಡೆ ಮಾಡಲಾಗುತ್ತಿದೆ
ಚಿತ್ರದ ಕಡಲ ಒಡಲ ಮೇಲೆ.. ಅನ್ನುವ ಸೊಗಡು ಭರಿತ ಉತ್ತರ ಕನ್ನಡ ಪರಿಸರ ಸಂಸ್ಕೃತಿ ಹಾಗೂ ಅಲ್ಲಿನ ಬದುಕಿನ ಚಿತ್ರಣವನ್ನ ಹೇಳುವ ಹಾಡು ಬಿಡುಗಡೆ ಆಗಿದೆ. ಪ್ರಶಾಂತ್ ಸಿದ್ದಿ ಸಂಗೀತ ದೇವರಾಜ್ ಪೂಜಾರಿ ಸಾಹಿತ್ಯ ಹೇಮಂತ್ ಹಾಡಿರೋ ಈ ಹಾಡು ಮತ್ಸ್ಯಗಂಧ ಚಿತ್ರದ ಮೇಲೆ ಮತ್ತಷ್ಟು ಕುತೂಹಲ ಹೆಚ್ಚಿಸಿದೆ.
ಈಗಾಗಲೇ ಮತ್ಸ್ಯಗಂಧ ಟೀಸರ್ 1.4 ಮಿಲಿಯನ್ ದಾಟಿದೆ. ಭಾಗೀರಥಿ ಹಾಡು ಮಿಲಿಯನ್ ಮುಟ್ತಿದೆ. ಕುವ್ವಾ ಕುವ್ವಾ ಕ್ಲಿಕ್ ಆಗಿದೆ..ಇದ್ರೊಂದಿಗೆ ಮತ್ಸ್ಯ ಗಂಧ ಚಿತ್ರತಂಡ ಸಿನಿಪ್ರಿಯರಲ್ಲಿ ವಿಶೇಷ ಕುತೂಹಲ ಮತ್ತು ನಿರೀಕ್ಷೆ ಹುಟ್ಟಿಸ್ತಿದೆ. ಇದೇ ತಿಂಗಳ 23ಕ್ಕೆ ರಾಜ್ಯದಾದ್ಯಂತ ರಿಲೀಸ್ ಆಗ್ತಿದೆ.
ಇದೀಗ ರಿಲೀಸ್ ಆಗಿರೋ ಕಡಲ ಒಡಲ ಹಾಡು ಚಿತ್ರದ ಥೀಮ್ ವಿವರಿಸ್ತಿದೆ. ಈ ಹಾಡು ನೋಡ್ತಿದ್ರೆ, ಮತ್ಸ್ಯಗಂಧದ ಮೇಲೆ ನಿರೀಕ್ಷೆ ಹೆಚ್ಚಿಸ್ತಿದೆ..
ಕನ್ನಡ ಪಿಚ್ಚರ್ ಅರ್ಪಿಸುವ ಸಹ್ಯಾದ್ರಿ ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ ಬಿ.ಎಸ್ ವಿಶ್ವನಾಥ್ ನಿರ್ಮಾಣದಲ್ಲಿ ಮತ್ಸ್ಯಗಂಧ ತಯಾರಾಗಿದೆ. ಈ ಚಿತ್ರವನ್ನ ದೇವರಾಜ್ ಪೂಜಾರಿ ನಿರ್ದೇಶಿಸಿದ್ದು, ಪ್ರಶಾಂತ್ ಸಿದ್ದಿ ಸಂಗೀತ ಸಂಯೋಜಿಸಿದ್ದಾರೆ. ಪ್ರವೀಣ್ ಛಾಯಾಗ್ರಹಣ ಚಿತ್ರಕ್ಕಿದ್ದು, ಪೃಥ್ವಿ ಅಂಬರ್, ಭಜರಂಗಿ ಲೋಕಿ, ನಾಗರಾಜ್ ಬೈಂದೂರ್, ಪ್ರಶಾಂತ್ ಸಿದ್ದಿ, ಶರತ್ ಲೋಹಿತಾಶ್ವ, ಮೈಮ್ ರಾಮದಾಸ್ ಸೇರಿದಂತೆ ಪ್ರತಿಭಾನ್ವಿತ ತಾರಾಬಳ ಈ ಚಿತ್ರದಲ್ಲಿದೆ.